Advertisement
ನಗರ ಸಹಿತ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 22 ಮಂದಿ ಪೊಲೀಸರು ಸೋಂಕು ಬಾಧಿತರಾದ್ದಾರೆ. 130ಕ್ಕೂ ಹೆಚ್ಚು ಮಂದಿ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
Related Articles
Advertisement
ಕಮಿಷನರೆಟ್ ವ್ಯಾಪ್ತಿಯಲ್ಲಿ ಪ್ರಥಮವಾಗಿ ಉಳ್ಳಾಲ ಠಾಣೆಯ ಪೊಲೀಸರಿಗೆ ಸೋಂಕು ಬಾಧಿಸಿತ್ತು. ತಲಪಾಡಿ ಗಡಿ ಪ್ರದೇಶದಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದ ಪಿಎಸ್‌ಗೆ ಸೋಂಕು ಖಚಿತ ವಾದ ಬಳಿಕ ಹಲವು ಪೊಲೀಸರಿಗೆ ಸೋಂಕು ದೃಢವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವಿಟ್ಲ ಠಾಣೆಯ ಓರ್ವ ಪೊಲೀಸ್ ಸಿಬಂದಿಗೆ ಹಾಗೂ 3 ದಿನಗಳ ಹಿಂದೆ ಪುತ್ತೂರು ಮಹಿಳಾ ಠಾಣೆಯ ಓರ್ವ ಸಿಬಂದಿ ಸಹಿತ ಇಬ್ಬರಿಗೆ ಸೋಂಕು ತಗ ಲಿದ್ದು, ಪ್ರಸ್ತುತ ಒಟ್ಟು 12 ಪೊಲೀಸರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಇದೀಗ ಪುತ್ತೂರು ಮಹಿಳಾ ಠಾಣೆಯ ಒಬ್ಬರಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ 3 ಪೊಲೀಸ್ ಸಿಬಂದಿಯನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಧರ್ಮಸ್ಥಳದಲ್ಲಿ ಪೊಲೀಸರು ಬಂಧಿಸಿದ ಆರೋಪಿಗೆ ಕೋವಿಡ್-19 ಪಾಸಿಟಿವ್ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯ 4 ಮಂದಿ ಪೊಲೀಸರಿಗೆ, ಓರ್ವ ಗೃಹ ರಕ್ಷಕ ಸಿಬಂದಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿ ವಾಪಸ್ ಠಾಣೆಗೆ ಬರುವ ಪೊಲೀಸರ ಆರೋಗ್ಯ ತಪಾಸಣೆ ಮಾಡಿ ನೆಗೆಟಿವ್ ಇದ್ದರೆ ಮಾತ್ರ ಠಾಣೆಯ ಒಳಗೆ ಬರಲು ಅವಕಾಶ ಕಲ್ಪಿಸಲಾಗಿದೆ. 55 ವರ್ಷ ದಾಟಿದ ಪೊಲೀಸರಿಗೆ ಜನರ ನೇರ ಸಂಪರ್ಕ ಇಲ್ಲದಂತಹ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಆದರೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೆಲವು ಸಂದರ್ಭಗಳಲ್ಲಿ ಕೋವಿಡ್-19 ಸೋಂಕು ಬಾಧಿಸುತ್ತಿದೆ. ಹಾಗಾಗಿ ಪೊಲೀಸರಿಗೆ ಕರ್ತವ್ಯ ನಿರ್ವಹಿಸುವುದು ಸವಾಲಾಗಿ ಪರಿಣಮಿಸಿದೆ. ಅಗತ್ಯ ಪರಿಕರ ಒದಗಿಸಲಾಗಿದೆ
ಪೊಲೀಸರಿಗೆ ಕೋವಿಡ್-19 ಎಸ್‌ಒಪಿ ಮಾರ್ಗಸೂಚಿ ಪ್ರಕಾರ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್, ಫೇಸ್ ಶೀಲ್ಡ್ ಮತ್ತು ಪಿಪಿಇ ಕಿಟ್ ಪೂರೈಕೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
- ವಿಕಾಸ್ ಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು ಮುನ್ನೆಚ್ಚರಿಕೆ ವಹಿಸಿ
ಪೊಲೀಸ್ ಸಿಬಂದಿಗೆ ಸೋಂಕು ತಗಲದಂತೆ ಪರಿಕರ ಒದಗಿಸಲಾಗಿದೆ. ಆರೋಪಿಗಳ ಪತ್ತೆ, ನಿರ್ವಹಣೆ ಮಾಡುವ ಸಿಬಂದಿಗೆ ಧರಿಸಲು 250 ಪಿಪಿಇ ಕಿಟ್ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
- ಲಕ್ಷ್ಮೀಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ