ಕುಣಿಗಲ್ : ಬೈಕ್ ಹಾಗೂ ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಮತ್ತು ಮಗಳು ಮೃತಪಟ್ಟಿರುವ ದಾರುಣ ಘಟನೆ ಬನ್ನಿಮರದಕಟ್ಟೆ (ವೈ.ಕೆ.ರಾಮಯ್ಯ ಸರ್ಕಲ್) ಸಮೀಪ ಭಾನುವಾರ ರಾತ್ರಿ ಸಂಭವಿಸಿದೆ
ಮೂಲತಃ ಗುಬ್ಬಿ ತಾಲೂಕು ಸಿಎಸ್ ಪುರ ಹೋಬಳಿ ನಟ್ಟಿಗೆರೆ ಗ್ರಾಮದ, ಈಗ ಬೆಂಗಳೂರಿನ ಸುಂಕದಕಟ್ಟೆ ವಾಸಿ ತಿರುಮಲೇಗೌಡ( 50) ಮತ್ತು ಪುತ್ರಿ ಚಂದನ (20) ಮೃತಪಟ್ಟ ದುರ್ದೈವಿಗಳು
ಘಟನೆ ವಿವರ
ತಿರುಮಲೇಗೌಡ ತನ್ನ ಸ್ವಗ್ರಾಮ ನಟ್ಟಿಗೆರೆ ಗ್ರಾಮಕ್ಕೆ ಹಬ್ಬಕ್ಕೆ ಬಂದು ಹಬ್ಬ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನ ಸುಂಕದಕಟ್ಟೆಗೆ ತನ್ನ ಮಗಳೊಂದಿಗೆ ಹೊಗಬೇಕಾದರೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಢಿ ಕ್ಕಿ ಹೊಡೆದ ಪರಿಣಾಮ ತಿರುಮಲೇಗೌಡ ಸ್ಥಳದಲ್ಲೇ ಮೃತಪಟ್ಟರು. ಆತನ ಮಗಳು ಚಂದನ ತೀವ್ರವಾಗಿ ಗಾಯಗೊಂಡಿದರು, ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಆಸ್ಪತ್ರೆ ಗೆ ಕರೆದ್ಯೋಯುವ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.