Advertisement

ನೇಕಾರಿಕೆ ಅಭಿವೃದ್ಧಿಗೆ ಉತ್ತಮ ಯೋಜನೆ; ಶಾಸಕ ಸಿದ್ದು ಸವದಿ

06:31 PM Aug 10, 2022 | Team Udayavani |

ಮಹಾಲಿಂಗಪುರ: ನೇಕಾರರು ಸಂಕಷ್ಟದಲ್ಲಿದ್ದಾರೆ. ಪ್ರತಿ ಕುಟುಂಬಕ್ಕೂ ಕನಿಷ್ಠ ಮಾಸಿಕ 10 ಸಾವಿರ ರೂ.ವೇತನ ದೊರಕಿಸಿಕೊಡುವ ಪ್ರಯತ್ನದಲ್ಲಿದ್ದೇವೆ ಹಾಗೂ ಕ್ಷೇತ್ರದ ನೇಕಾರರನ್ನು ಒಗ್ಗೂಡಿಸಿ ಕೆಲವೇ ದಿನಗಳಲ್ಲಿ ಬೃಹತ್‌ ನೇಕಾರರ ದಿನ ಆಚರಿಸುವುದಾಗಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಸ್ಥಳೀಯ ಪುರಸಭೆಯಲ್ಲಿ ಹಮ್ಮಿಕೊಂಡಿದ್ದ 8ನೇ ರಾಷ್ಟ್ರೀಯ ನೇಕಾರ ದಿನಾಚರಣೆಯ ಪ್ರಯುಕ್ತ ನೇಕಾರರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ನೇಕಾರರು ಶ್ರಮಜೀವಿಗಳು. ಸರ್ಕಾರ ಈಗಾಗಲೇ ನೇಕಾರರಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಮುಂದೆ ನೇಕಾರಿಕೆಯ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡಲಾಗುವುದು. ರೈತ ಮತ್ತು ನೇಕಾರ ನಮ್ಮ ಸರ್ಕಾರದ ಎರಡು ಕಣ್ಣುಗಳು ಎಂದರು.

ಸೌಜನ್ಯ ಕೈಮಗ್ಗ ನೇಕಾರ ಸಹಕಾರಿ ಸಂಘದ ಅಧ್ಯಕ್ಷ ಜಿ.ಎಸ್‌.ಗೊಂಬಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ನೇಕಾರರಿಗೆ ಹಲವಾರು ಉಪಯುಕ್ತ ಯೋಜನೆಗಳು ತಲುಪಿವೆ. ನೇಕಾರರ ಅಭಿವೃದ್ಧಿಗಾಗಿ ಕೂಲಿ ಹೆಚ್ಚಳ, ವಿಶೇಷ ಆರೋಗ್ಯ ಯೋಜನೆ, ವಸತಿ ಯೋಜನೆ ಮರುಜಾರಿ ಹಾಗೂ ನೇಕಾರ ಮಕ್ಕಳ ಉನ್ನತ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದರು.

ನಗರದ ಹಿರಿಯ 12 ಜನ ನೇಕಾರರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಸನ್ಮಾನಿತರಿಗೆ ಗೌರವ ಧನ ನೀಡಿದರು. ಮುಖಂಡರಾದ ಜಯವಂತಕಾಗಿ, ಈರಪ್ಪ ದಿನ್ನಿಮನಿ, ಮಹಾಲಿಂಗಪ್ಪ ಕುಳ್ಳೊಳ್ಳಿ, ಶ್ರೀಮಂತ ಹಳ್ಳಿ, ಮಹಾಲಿಂಗ ಮುದ್ದಾಪುರ, ಶಿವಲಿಂಗ ಘಂಟಿ, ಭೀಮಶಿ ಗೌಂಡಿ, ಗುರುಪಾದ ಅಂಬಿ, ಚನ್ನಪ್ಪ ರಾಮೋಜಿ, ರವಿ ಜವಳಗಿ, ಬಸವರಾಜ ಯರಗಟ್ಟಿ, ಪ್ರಶಾಂತ ಮುಕ್ಕೆನ್ನವರ, ತಿಪ್ಪಣ್ಣ ಬಂಡಿವಡ್ಡರ, ಶಿವಾನಂದ ಹುಣಶ್ಯಾಳ, ಸಿದ್ದು ಅರಳಿಮಟ್ಟಿ, ರಾಜು ಹೂಗಾರ ಇದ್ದರು. ಎಸ್‌.ಎನ್‌.ಪಾಟೀಲ ಸ್ವಾಗತಿಸಿ-ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next