ದಕ್ಷಿಣ ಭಾರತದ ಪಾಕ ಪದ್ಧತಿಯು ದೇಶದ ಅತ್ಯಂತ ವೈವಿದ್ಯಮಯ ಪಾಕ ಪದ್ಧತಿಯಲ್ಲಿ ಒಂದಾಗಿದೆ. ಗರಿ ಗರಿಯಾದ ವಡಾ ಸಾಂಬಾರಿನಿಂದ ಆದಿಯಾಗಿ ಎಲ್ಲವೂ ಕೂಡ ರುಚಿ ಶುಚಿ ಸವಿ.
ಕರಾವಳಿಯ ಸೆರಗನ್ನು ಉದ್ದಕ್ಕೂ ಹಾಸಿಕೊಂಡಿರುವ ದಕ್ಷಿಣ ಭಾರತದಲ್ಲಿ ಮೀನಿನ ವಿಧವಿಧದ ಭಕ್ಷ್ಯಗಳ ರುಚಿಯಿಲ್ಲದೆ ದಿನಗಳೆ ಕಳೆಯುವುದಿಲ್ಲ. ಸಿಗಡಿ ಫ್ರೈ, ಮೀನಿನ ಫ್ರೈ, ಏಡಿ ಚಟ್ನಿ, ಏಡಿ ಕರಿಗಳು ನಾನ್ ವೆಜ್ ಪ್ರಿಯರಿಗೆ ಎಂದಿಗೂ ಬಲು ಇಷ್ಟ.
ನೀವು ಮಾಂಸಹಾರಿಗಳಾಗಿದ್ದರೆ, ನಿಮ್ಮ ಬಾಯಲ್ಲಿ ನೀರು ಇಳಿಯದೇ ಇರಲು ಸಾಧ್ಯವೇ ಇಲ್ಲ. ಕರಾವಳಿಯ ಸಮುದ್ರಾಹಾರ ಭಕ್ಷ್ಯಗಳು ನಿಮ್ಮ ಮನೆಯ ಡೈನಿಂಗ್ ಟೇಬಲ್ ಮೇಲೆ ಇರುವ ಹಾಗೆ ಕರಾವಳಿ ಆಹಾರಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. ಸದ್ಯಕ್ಕೆ, ಮೈಂಡ್ ಫುಲ್ ಈಟಿಂಗ್ ಅಷ್ಟೇ ನಿಮ್ಮದಾಗಲಿ.
ಮಲಬರಿ ಫಿಶ್ ಕರಿ :
ಕೇರಳದ ವಯನಾಡಿನ ರುಚಿಕರವಾದ ಆಹಾರವಿದು. ಹುಣಸೆ ಹಣ್ಣಿನ ಘಮದೊಂದಿಗೆ ಮೆಣಸಿನ ಕಾಯಿ ಪುಡಿ, ತೆಂಗಿನ ಹಾಲಿನ ಮೇಲೊಗರವು ಮಲಬರಿ ಫಿಶ್ ಕರಿಗೆ ಮತ್ತಷ್ಟು ರುಚಿ ನೀಡುತ್ತದೆ.
ಮಲಬಾರ್ ಫಿಶ್ ಬಿರಿಯಾನಿ :
ಕಟುವಾದ ಹುರಿದ ಮೀನು ಹಾಗೂ ಆ್ಯರೋಮೆಟಿಕ್ ಮಸಾಲೆಗಳ ಜೊತೆಗೆ ತಟ್ಟೆಗೆ ಕೈ ಹಾಕಿದಾಗಲೆಲ್ಲಾ ಸಿಗುವ ಗೋಡಂಬಿ ಬೀಜಗಳಿಂದ ಭರ್ತಿಯಾಗಿರುವ ಈ ಬಿರಿಯಾನಿ ತಿಂದಷ್ಟು ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತದೆ ಎನ್ನುವುದು ಅಪ್ಪಟ ಸತ್ಯ.
ಆಂಧ್ರ ಏಡಿ ಮಾಂಸದ ಮಸಾಲ
ಖಾರ ಖಾರವಾಗಿರುವ ಈ ಭಕ್ಷ್ಯ ನಾನ್ ವೆಜ್ ಪ್ರಿಯರಿಗೆ ಇಷ್ಟವಾಗದೇ ಇರುವುದಿಲ್ಲ. ಗರಿ ಗರಿಯಾಗಿ ಸಿಗುವ ಮಸಾಲೆಯುಕ್ತ ಏಡಿ ಮಾಂಸಗಳು ಅನ್ನದೊಂದಿಗೆ ಸಖತ್ ಕ್ವಾಂಬಿನೇಶನ್ ನೀಡುತ್ತದೆ.
ಕೇರಳ ಫಿಶ್ ಕರಿ :
ಕಟುವಾದ ಹುಣಸೆ ಹಣ್ಣಿನ ಸ್ವಾಧ, ತೆಂಗಿನ ಹಾಲಿನ ಮೇಲೊಗರ, ಮಸಾಲೆಗಳ ಮಿಶ್ರಣ ನೈಟ್ ಡಿನ್ನರ್ ಪಾರ್ಟಿಗೆ ಹೇಳಿ ಮಾಡಿಸಿದ ಭಕ್ಷ್ಯ.
ಚೆಟ್ಟಿನಾಡ್ ಫಿಶ್ ಫ್ರೈ :
ತಮಿಳುನಾಡಿನ ಫೇಮಸ್ ಡಿಶಸ್ ಇದು. ನೀವು ಇದರ ಮಸಾಲೆಯ ರುಚಿಗೆ ಮರುಳಾಗಲೇ ಬೇಕು. ತಮಿಳುನಾಡಿಗೆ ಹೋದರೇ ಚೆಟ್ಟಿನಾಡ್ ಫಿಶ್ ಫ್ರೈ ತಿನ್ನುವುದನ್ನು ಮರೆಯಬೇಡಿ.
ಮಂಗಳೂರು ಫಿಶ್ ಕರಿ:
ಮಂಗಳೂರಉ ಫಿಶ್ ಗೆ ಫೇಮಸ್. ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಮತ್ತು ಇತರೆ ಮಸಾಲಾ ಪದಾರ್ಥಗಳಿಂದ ತಯಾರಿಸಿ ಬಾಳೆಯೆಲೆಯಲ್ಲಿ ಸುತ್ತಿಡುವ ಮಂಗಳೂರಿನ ಮೀನಿನ ರುಚಿ ಬಗ್ಗೆ ಹೇಳಲು ಪದಗಳೇ ಇಲ್ಲ. ಮಂಗಲೂರಿಗೆ ಬಂದರೆ ಮಿಸ್ ಮಾಡದೇ ಫಿಶ್ ಕರಿ ಟೇಸ್ಟ್ ಮಾಡಿ.
ಸಿಗಡಿ ಕೋಕನಟ್ ಕರಿ:
ಮಸಾಲೆಯುಕ್ಯ, ಹುಣಸೆ ಹುಳಿ, ಪೆಪ್ಪರ್ ಕಾರ್ನ್, ಹುಣಸೆ ಪೇಸ್ಟ್, ಪರಿಪೂರ್ಣ ಮಿಶ್ರಣದೊಂದಿಗೆ ಮಾಡಲಾಗುವ ಸಿಗಡಿ ಕರಿ ಅನ್ನದೊಂದಿಗೆ ಸವಿಯಲು ಹೇಳಿ ಮಾಡಿಸಿದಂತಿರುವ ಪದಾರ್ಥ
ಫಿಶ್ ಮಪ್ಪಾಸ್:
ಕೆನೆ ಹಾಲು, ಸಾಸಿವೆ, ಮೆಂತ್ಯಯೊಂದಿನ ಮೇಲೊಗರದ ಕೇರಳದ ಮಸಾಲೆಯುಕ್ತ ಫಿಶ್ ಮಪ್ಪಾಸ್ ಸರ್ವಕಾಲದ ಟೇಸ್ಟಿ ಫುಡ್.
ಕೇರಳದ ಫಿಶ್ ಫ್ರೈ :
ಕೊತ್ತಂಬರಿ, ಶುಂಠಿ ಮತ್ತು ಚಿಲ್ ಮೀನಿನ ಮ್ಯಾರಿನೇಷನ್‌ಗೆ ಮಸಾಲೆಯುಕ್ತ ಪರಿಮಳವನ್ನು ನೀಡುತ್ತದೆಈ ಫ್ರೈ. ರಾತ್ರಿ ಡಿನ್ನರ್ ಗೆ ಸಖತ್ ಕ್ವಾಂಬಿನೇಶನ್.
ಕೊಂಕಣಿ ಮಸಾಲ ಸುಟ್ಟ ಮೀನು:
ಬೇಯಿಸಿದ ಮೀನನ್ನು ಕತ್ತರಿಸಿ ಮನೆಯಲ್ಲಿ ತಯಾರಸಿದ ಕೊಂಕಣಿ ಮಸಾಲವನ್ನು ಸೇರಿಸಿದರೆ ಇದರಷ್ಟು ಬೇರೆ ರುಚಿ ಮತ್ತೊಂದಿಲ್ಲ ಎನ್ನುತ್ತಾರೆ ನಾನ್ ವೆಜ್ ಪ್ರಿಯರು. ಚಳಿಗಾಲದ ರಾತ್ರಿ ಊಟಕ್ಕೆ ಹೇಳಿ ಮಾಡಿಸಿದ ಫುಡ್ ಇದು.