Advertisement

ಮೈಟ್‌ ಗೆ ಸತತ ಎರಡನೇ ವರ್ಷ”ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ’ಗರಿಮೆ

11:08 AM Aug 03, 2019 | keerthan |

ಮಂಗಳೂರು: ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಎಂಜಿನಿಯರಿಂಗ್‌ ಕಾಲೇಜಿನ ಮೆಕಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿ ಗಳ ತಂಡದ ಸಂಶೋಧನ ಯೋಜನೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ನೀಡುವ ರಾಜ್ಯಮಟ್ಟದ “ಅತ್ಯುತ್ತಮ ಪ್ರಾಜೆಕ್ಟ್’ ಪುರಸ್ಕಾರಕ್ಕೆ ಪಾತ್ರವಾಗಿದೆ.

Advertisement

ಮೆಕಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ| ರುಬೆನ್‌ ಡಿ’ಸೋಜಾ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಭಾರ್ಗವ ಕೆ. ಆಶ್ರಿತ್‌, ಕಡಬಗೇರಿ ಮಂಜುನಾಥ್‌ ಮತ್ತು ಸಾತ್ವಿಕ್‌ ಪೂಜಾರಿ ಅಭಿವೃದ್ಧಿಪಡಿಸಿದ “ಅಗ್ರಿಕಾಪ್ಟರ್‌ ಡ್ರೋನ್‌’ ಎನ್ನುವ ಸಂಶೋಧನೆಗೆ ಈ ಪುರಸ್ಕಾರ ಲಭಿಸಿದೆ.

ಸತತ ಎರಡನೇ ವರ್ಷ ಮೈಟ್‌ ಕಾಲೇಜಿನ ಮೆಕಾನಿಕಲ್‌ ಎಂಜಿನಿಯ ರಿಂಗ್‌ ವಿಭಾಗ ಈ ಪುರಸ್ಕಾರವನ್ನು ಪಡೆಯುತ್ತಿರುವುದು ಗಮನಾರ್ಹ. ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾದ ಜಾಗತಿಕ ಗುಣಮಟ್ಟದ ಸಂಶೋಧನ ಮೂಲ ಸೌಕರ್ಯವನ್ನು ಸ್ಥಾಪಿಸಿರುವುದು ಮೈಟ್‌ ಸಂಸ್ಥೆಯ ಹೆಗ್ಗಳಿಕೆ.
ಮಂಗಳೂರಿನ ರಾಜಲಕ್ಷ್ಮೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜೇಶ್‌ ಚೌಟ ಅವರು ವಿದ್ಯಾರ್ಥಿಗಳ ಈ ಸಾಧನೆ ಯನ್ನು ಪ್ರಶಂಸಿಸಿದ್ದಾರೆ.

ಈ “ಅಗ್ರಿಕಾಪ್ಟರ್‌ ಡ್ರೋನ್‌’ ಮನುಷ್ಯರ ಒಳಗೊಳ್ಳುವಿಕೆ ಇಲ್ಲದೆ ಬೆಳೆಗಳಿಗೆ ಕೀಟನಾಶಕವನ್ನು ಸಿಂಪಡಿ ಸುವ ಕಾರ್ಯಕ್ಷಮತೆ ಹೊಂದಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಪ್ರದೇಶದಲ್ಲಿ ಸಿಂಪಡಣೆ ಮಾಡುವ ಕ್ಷಮತೆಯನ್ನು ಹೊಂದಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಮೈಟ್‌ ಕಾಲೇಜಿನ 28 ವಿದ್ಯಾರ್ಥಿ ತಂಡಗಳು ರೂಪಿಸಿದ ಸಂಶೋಧನ ಯೋಜನೆಗಳು ಮಂಡಳಿಯ ಪ್ರಾಯೋಜಕತ್ವ ಪಡೆಯಲು ಆಯ್ಕೆಯಾಗಿದ್ದು, ವಿಶೇಷ ಸಾಧನೆಯಾಗಿದೆ.

Advertisement

ಪ್ರಾಂಶುಪಾಲ ಡಾ| ಜಿ.ಎಲ್‌. ಈಶ್ವರ ಪ್ರಸಾದ್‌, ಉಪ ಪ್ರಾಂಶುಪಾಲ ಡಾ| ಸಿ. ಆರ್‌. ರಾಜಶೇಖರ್‌ ಮೆಕಾನಿಕಲ್‌ ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next