Advertisement

ವರ್ಟೆಕ್ಸ್ ವರ್ಕ್ ಸ್ಪೇಸ್ ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್ ಪ್ರೈಸ್-2022 ಪ್ರಶಸ್ತಿ

12:44 PM Sep 30, 2022 | Team Udayavani |

ಮಂಗಳೂರು: ಅಟಲ್ ಇನ್ ಕ್ಯುಬೇಶನ್ ಸೆಂಟರ್ ನಿಟ್ಟೆ ಮತ್ತು ಕರ್ಣಾಟಕ ಬ್ಯಾಂಕ್ ವತಿಯಿಂದ ನಗರದಲ್ಲಿ ಇತ್ತೀಚೆಗೆ ನಡೆದ ಎಂಎಸ್ ಎಂ ಇ ಕಾನ್ ಕ್ಲೇವ್ ನಲ್ಲಿ ನಗರದ ಪ್ರತಿಷ್ಠಿತ “ವರ್ಟೆಕ್ಸ್ ವರ್ಕ್ ಸ್ಪೇಸ್” ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್ ಪ್ರೈಸ್ ಅವಾರ್ಡ್-2022 ಪ್ರದಾನ ಮಾಡಲಾಯಿತು.

Advertisement

ಸಂಸ್ಥೆಯ ಪಾಲುದಾರರಾದ ಗುರುದತ್ತ ಶೆಣೈ, ಮಹೇಶ್ ಶೆಟ್ಟಿ ಹಾಗೂ ಮಂಗಳದೀಪ್ ಅವರು ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್ ಮತ್ತು ನಿಟ್ಟೆ ಡೀಮ್ಡ್ ವಿವಿ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ನಾವೀನ್ಯತೆ, ನಾಯಕತ್ವ, ಸಮರ್ಪಣೆ ಮತ್ತು ಬದ್ಧತೆಯನ್ನು ಗುರುತಿಸಿ ವರ್ಟೆಕ್ಸ್ ವರ್ಕ್ ಸ್ಪೇಸ್ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಕಾರ್ಯಕ್ರಮ ಯೋಜನೆಯನ್ನು ಸ್ಮಾರ್ಟ್ ಸಿಟಿ ಮಂಗಳೂರು ನಗರಕ್ಕೂ ವಿಸ್ತರಣೆ ಮಾಡುವಂತೆ ಘೋಷಿಸಿತ್ತು.

ಕೋವಿಡ್ ನಿಂದಾಗಿ ಹಲವಾರು ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳು ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಮಂಗಳೂರಿಗೆ ಬರುವ ಯೋಜನೆಯನ್ನೂ ರೂಪಿಸಿತ್ತು. ಈ ಕಂಪನಿಗಳ ಬೇಡಿಕೆಯನ್ನು ಅರ್ಥೈಸಿಕೊಂಡ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆ ಮಂಗಳೂರಿನಲ್ಲೇ ಪ್ರಪ್ರಥಮವಾಗಿ ವರ್ಟೆಕ್ಸ್ ವರ್ಕ್ ಸ್ಪೇಸ್ ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದ್ದರು.

Advertisement

ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳು ಅಗತ್ಯ ಸೌಲಭ್ಯಗಳನ್ನು ಹೊಂದಿರುವಂತಹ ಸ್ಥಳ ಹುಡುಕಾಟ ಮಾಡುವಂತ ಸಾಧ್ಯತೆ ಹೆಚ್ಚುತ್ತಿರುವುದರಿಂದ ಇಂತಹ ಕಾರ್ಯಕ್ಷೇತ್ರಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸಿಕೊಡುವ ಕೆಲಸ ವರ್ಟೆಕ್ಸ್ ವರ್ಕ್ ಸ್ಪೇಸ್ ಪೂರೈಸಲಿದೆ.

ಇಲ್ಲಿ ಕಾರ್ಯಾಚರಣೆಗೆ ಅನುಕೂಲವಾದ ಕಾಮನ್ ರಿಸೆಪ್ಶನ್ ಡೆಸ್ಕ್, ಕಾನ್ಫರೆನ್ಸ್ ರೂಮ್ಸ್, ಮೀಟಿಂಗ್ ರೂಮ್ಸ್, Wi-Fi, ಇಂಟರ್ನೆಟ್, ವಿಶಾಲವಾದ ಕಾರ್ ಪಾರ್ಕಿಂಗ್, ಪ್ಯಾಂಟ್ರಿ ಕೆಫೆ ಮುಂತಾದ ಸೌಲಭ್ಯಗಳು ಲಭ್ಯವಿದೆ. ಮಂಗಳೂರು ನಗರದಲ್ಲಿ ಇಂತಹ ಯೋಜನೆಗಳಿಗೆ ಬಹಳಷ್ಟು ಐಟಿ ಕಂಪನಿಗಳಿಂದ ಬೇಡಿಕೆ ಹೆಚ್ಚುತ್ತಿದ್ದು, ನಗರದ ವಿವಿಧ ಪ್ರದೇಶದಲ್ಲಿ ಇಂತಹ ಸಾಕಷ್ಟು ವಿಶಿಷ್ಟವಾದ ಸೌಲಭ್ಯಗಳನ್ನೊಳಗೊಂಡಿರುವ ಯೋಜನೆಗಳನ್ನು ಸಂಸ್ಥೆಯು ಶೀಘ್ರದಲ್ಲಿ ಪರಿಚಯಿಸಲಿದೆ ಎಂದು ಗುರುದತ್ತ ಶೆಣೈ ತಿಳಿಸಿದ್ದಾರೆ.

ವರ್ಟೆಕ್ಸ್ ವರ್ಕ್ ಸ್ಪೇಸ್ ಸಂಸ್ಥೆ ನಾವಿನ್ಯತೆಯೊಂದಿಗೆ ಬದ್ಧತೆಯಿಂದ ಕೆಲಸ ನಿರ್ವಹಿಸಿ ಕ್ಲಪ್ತ ಸಮಯಕ್ಕೆ ಒದಗಿಸಿಕೊಡುವ ಮೂಲಕ ಹಲವಾರು ಕಂಪನಿಗಳ ವಿಶ್ವಾಸಾರ್ಹತೆಯನ್ನು ಗಳಿಸಿದೆ. ಕಚೇರಿ ಹಾಗೂ ವ್ಯವಹಾರ ಸ್ಥಳಗಳನ್ನು ದೊಡ್ಡ ಕಾರ್ಪೋರೇಟ್ ಸ್ಪೇಸ್ ಆಗಿ ಸುಂದರವಾಗಿ ನಿರ್ಮಾಣ ಮಾಡುತ್ತಿದೆ. ವರ್ಟೆಕ್ಸ್ ಸಂಸ್ಥೆ ಸ್ಥಳೀಯ ಸ್ಪಾರ್ಟ್ ಅಪ್ ಮತ್ತು ಕಾರ್ಪೋರೇಟ್ ಸಮುದಾಯದ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next