Advertisement
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ 24ಗ್ರಾಪಂಗಳಲ್ಲಿ 154 ಶುದ್ದ ಕುಡಿಯುವ ನೀರಿನ ಘಟಕಗಳಿವೆ. 154 ಘಟಕಗಳಲ್ಲಿ 20 ಘಟಕ ಗ್ರಾಪಂಗೆ ಹಸ್ತಾಂತರ ಆಗಿವೆ. 77 ಘಟಕಗಳಿಗೆ ಮರು ಟೆಂಡರ್‌ಗೆ ಆಹ್ವಾನಿಸಿ 2 ವರ್ಷ ಕಳೆದಿದೆ. ಇನ್ನೂಳಿದ ಬಹುತೇಕ ನೀರಿನ ಘಟಕ ದುಸ್ಥಿತಿಗೆ ತಲುಪಿವೆ. ಘಟಕಗಳ ನಿರ್ವಹಣೆ ವಿಚಾರದಲ್ಲಿ ಅಧಿಕಾರಿಗಳ ಆಡಳಿತ ವೈಫಲ್ಯ ಕಂಡುಬಂದಿದೆ.
Related Articles
ಎಲೆರಾಂಪುರ, ನೀಲಗೊಂಡನಹಳ್ಳಿ, ಹಂಚಿಹಳ್ಳಿ, ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಬೋಡಬಂಡೇನಹಳ್ಳಿ, ಕೆರೆಯಾಗಲಹಳ್ಳಿ, ಡಿ.ನಾಗೇನಹಳ್ಳಿ, ತಂಗನಹಳ್ಳಿ, ದೊಡ್ಡಪಾಲನಹಳ್ಳಿ, ಬೈಚೇನಹಳ್ಳಿ, ಎಲೆರಾಂಪುರ, ಐ.ಕೆ.ಕಾಲೋನಿ, ಅಳಾಲಸಂದ್ರ, ಎ.ವೆಂಕಟಾಪುರ, ಕಾಮರಾಜನಹಳ್ಳಿ, ಗೌರಗಾನಹಳ್ಳಿ ಗ್ರಾಮದ ನೀರಿನ ಘಟಕದ ವಿದ್ಯುತ್ ಸಂಪರ್ಕ ಕಡಿತವಾದ ಪರಿಣಾಮ3 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ನೀರು ಮರೀಚಿಕೆ ಆಗಿದೆ.
Advertisement
ಜನರ ಆರೋಗ್ಯ ಏರುಪೇರು ಸಾಧ್ಯತೆ..
ಪ್ಲೋರೈಡ್‌ಯುಕ್ತ ನೀರಿನ ಸಮಸ್ಯೆ ನಿವಾರಣೆಗೆ ಕೊರಟಗೆರೆ ತಾಲೂಕಿನಲ್ಲಿ 154 ಶುದ್ದ ನೀರಿನ ಘಟಕ ನಿರ್ಮಾಣವಾಗಿದೆ. ಬೆಸ್ಕಾಂ ಮತ್ತು ಗ್ರಾಪಂ ಅಧಿಕಾರಿಗಳ ಚೆಲ್ಲಾಟದಿಂದ 154 ಘಟಕಗಳಿಗೆ ವಿದ್ಯುತ್ ಸಂಪರ್ಕ ಕಡಿತಕ್ಕೆ ಬೆಸ್ಕಾಂ ಇಲಾಖೆ ಮುಂದಾಗಿದೆ. 7 ವರ್ಷದಿಂದ ಶುದ್ದ ಕುಡಿಯುವ ನೀರು ಬಳಕೆ ಮಾಡುತ್ತೀರುವ ೫೦ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಮತ್ತೇ ಪ್ಲೋರೈಡ್‌ಯುಕ್ತ ನೀರಿನ ಸೇವನೆಯಿಂದ ಜನರ ಆರೋಗ್ಯದಲ್ಲಿ ಏರುಪೇರು ಉಂಟಾದರೇ ಜವಾಬ್ದಾರಿ ಯಾರು ಎಂಬುದೇ ಯಕ್ಷಪ್ರಶ್ನೆ..?
67 ಲಕ್ಷ ವಿದ್ಯುತ್ ಶುಲ್ಕಕ್ಕೆ 17 ಲಕ್ಷ ಬಡ್ಡಿ..2019-20 ನೇ ಸಾಲಿನಲ್ಲಿ 154 ಶುದ್ದ ಕುಡಿಯುವ ನೀರಿನ ಘಟಕಗಳ ವಿದ್ಯುತ್ ಶುಲ್ಕದ ಬಾಕಿ ಕೇವಲ 64,624 ರೂ ಮಾತ್ರ. 2020-21 , 2021-22 ಮತ್ತು 2022-23 ರ ಅಕ್ಟೋಬರ್ ವೇಳೆ 154 ಘಟಕಗಳ ವಿದ್ಯುತ್ ಶುಲ್ಕ67,16,194 ರೂ ದಾಟಿದೆ. ಇದಕ್ಕೆ ಬಡ್ಡಿ 17,31,475 ರೂ ಸೇರಿ ಒಟ್ಟು 84,47,670 ರೂ ಆಗಿದೆ. 4 ವರ್ಷದಿಂದ ವಿದ್ಯುತ್ ಶುಲ್ಕ ಕಟ್ಟಿಸಿಕೊಳ್ಳದೇ ಬೆಸ್ಕಾಂ ಇಲಾಖೆಯ ಮೌನಕ್ಕೆ ಕಾರಣವೇನು. ಘಟಕದಿಂದ ವಸೂಲಿ ಮಾಡಿರುವ ಲಕ್ಷಾಂತರ ಹಣ ಗ್ರಾಪಂ ಯಾರ ಬಳಿ ಶೇಖರಣೆ ಮಾಡಿದೆ ಎಂಬುದು ತನಿಖೆಯಿಂದ ಹೊರ ಬರಬೇಕಿದೆ. ಸರಕಾರಿ ಕಚೇರಿಯ ವಿದ್ಯುತ್ ಶುಲ್ಕ ಬಾಕಿಇದ್ರೇ ಮುಲಾಜಿಲ್ಲದೇ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತೇವೆ. ಈಗ ನಾವು ಯಾರ ಸಬೂಬು ಕೇಳೊದಿಲ್ಲ. ನಾವು ಯಾರಿಗೂ ಕಾಯುವ ಪ್ರಶ್ನೆಯು ಇಲ್ಲ. ನಮ್ಮ ಎಚ್ಚರಿಕೆಯ ನೊಟೀಸ್‌ಗೆ ಗ್ರಾಪಂನಿಂದ ಉತ್ತರ ಬಂದಿಲ್ಲ. ನೀರಿನ ಸಮಸ್ಯೆ ಆದರೇ ಘಟಕಗಳ ಮೇಲ್ವಿಚಾರಕರೇ ಜವಾಬ್ದಾರಿ.- ಜಗದೀಶ್. ಇಇ. ಬೆಸ್ಕಾಂ ಇಲಾಖೆ. ಮಧುಗಿರಿ ನಮ್ಮ ಮನವಿಗೆ ಸ್ಪಂದಿಸದೇ ಕೊರಟಗೆರೆಯಲ್ಲಿ ಮಾತ್ರ ಬೆಸ್ಕಾಂ ಇಲಾಖೆ ಕಾರ್ಯಚರಣೆ ನಡೆಸುತ್ತೀದೆ. ಜಿಲ್ಲಾಧಿಕಾರಿ ಕಚೇರಿಯ ವಿಶೇಷ ತಂಡ ಈಗಾಗಲೇ ಜಿಲ್ಲೆಯಲ್ಲಿ ಘಟಕದ ಮಾಹಿತಿ ಪಡೆಯುತ್ತೀದೆ. ಕುಡಿಯುವ ನೀರಿಗೆ ಸಮಸ್ಯೆ ಆದರೇ ಅದರ ಹೊಣೆ ಯಾರು. ಕೊರಟಗೆರೆ ಸಮಸ್ಯೆಯ ಬಗ್ಗೆ ತುಮಕೂರು ಜಿಪಂ ಸಿಇಓ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ. –ರವೀಶ್. ಇಇ. ತುಮಕೂರು ಕೊರಟಗೆರೆಯ ನೀರಿನ ಘಟಕಗಳ ವಿದ್ಯುತ್ ಸಂಪರ್ಕ ಕಡಿತದ ಬಗ್ಗೆ ತಕ್ಷಣ ಪರಿಶೀಲನೆ ನಡೆಸುವಂತೆ ತುಮಕೂರು ಜಿಪಂ ಸಿಇಓಗೆ ಸೂಚಿಸುತ್ತೇನೆ. ಮೇಲ್ವಿಚಾರಣೆ ವಹಿಸಿರುವ ಗ್ರಾಪಂ ನಿಂದ ಬೆಸ್ಕಾಂ ಇಲಾಖೆಗೆ ಪ್ರತಿತಿಂಗಳು ಬೆಸ್ಕಾಂ ಇಲಾಖೆಗೆ ವಿದ್ಯುತ್ ಶುಲ್ಕ ಪಾವತಿಸಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಅಧಿಕಾರಿವರ್ಗ ಜಾಗೃತಿ ವಹಿಸಬೇಕಿದೆ.- ಅತೀಕ್.ಎಲ್.ಕೆ. ಅಪರ ಮುಖ್ಯ ಕಾರ್ಯದರ್ಶಿ. ಗ್ರಾಮೀಣಾಭಿವೃದ್ದಿ ಇಲಾಖೆ ವರದಿ : ಸಿದ್ದರಾಜು ಕೆ ಕೊರಟಗೆರೆ