Advertisement

ಬರ್ಕ್ಲಿ ಮಾಸ್‌ ಟೀಸರ್‌

09:41 AM May 14, 2021 | Team Udayavani |

ಸಂತೋಷ್‌ ನಾಯಕರಾಗಿರುವ ” ಬರ್ಕ್ಲಿ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.ಪಕ್ಕಾ ಮಾಸ್‌ ಅಂಶಗಳೊಂದಿಗೆ ಹೊರ ಬಂದಿರುವ ಈ ಟೀಸರ್‌ ಅನ್ನು ಮಾಸ್‌ಪ್ರಿಯರು ಮೆಚ್ಚಿದ್ದಾರೆ.

Advertisement

“ಸಂತೋಷ್‌ ಎಂಟರ್‌ಪ್ರೈಸಸ್‌’ ಲಾಂಛನದಲ್ಲಿಆನೇಕಲ್‌ಬಾಲರಾಜ್‌ ಅವರುನಿರ್ಮಿಸುತ್ತಿರುವ ಈಚಿತ್ರದ ಚಿತ್ರೀಕರಣಮುಕ್ತಾಯವಾಗಿದೆ.ಸದ್ಯದಲ್ಲಿಯೇ ಪ್ರಥಮ ಪ್ರತಿ ಸಿದ್ದವಾಗಲಿದೆ. ಈ ಚಿತ್ರಕ್ಕೆಸುಮಂತ್‌ ಕ್ರಾಂತಿ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನಮಾಡುತ್ತಿದ್ದಾರೆ.

ಬರ್ಕ್ಲಿ  ಎಂದ ಕೂಡಲೇ ಎಲ್ಲರೂಸಿಗರೇಟ್‌ ಒಂದರ ಹೆಸರು ಎಂದುಕೊಳ್ಳುತ್ತಾರೆ. ಆದರೆ ನಮ್ಮ ” ಬರ್ಕ್ಲಿ ಚಿತ್ರಕ್ಕೂ ಸಿಗರೇಟ್‌ ಗೂಯಾವುದೇ ಸಂಬಂಧವಿಲ್ಲ. ನಮ್ಮ ಚಿತ್ರದಶೀರ್ಷಿಕೆಯ ಅರ್ಥವೇ ಬೇರೆ’ಎನ್ನುತ್ತಾರೆ.ನಿರ್ದೇಶಕ ಸುಮಂತ್‌ ಕ್ರಾಂತಿ. ಈಗಾ ಗಲೇ “ಗಣಪ’, “ಕರಿಯ 2′ ಚಿತ್ರಗಳಲ್ಲಿ ನಟಿಸಿರುವಸಂತೋಷ್‌ ಬಾಲರಾಜ್‌ ಈ ಚಿತ್ರದನಾಯಕರಾಗಿ ಅಭಿನಯಿಸಿದ್ದಾ ರೆ.

ಇದನ್ನೂ ಓದಿ:ಮೂಡುಬಿದಿರೆ: ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿ ಸಭೆ

ಬಾಲ್ಯದಲ್ಲಿಕೇಂದ್ರ ಸರ್ಕಾರದ ನೋ ಸ್ಮೋಕಿಂಗ್‌ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್‌ ನಾಟೇಕರ್‌ ಈಚಿತ್ರದ ನಾಯಕಿ. ಬಹುಭಾಷಾ ನಟ ಚರಣರಾಜ್‌, ನಟಿ ಶೃತಿ,ನಟ ರಾದಬಲರಾಜವಾಡಿ,ಬುಲೆಟ್‌ಪ್ರಕಾಶ್‌ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.ಸಂಗೀತನಿರ್ದೇಶಕ ಜ್ಯೂಡಸ್ಯಾಂಡಿ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್‌,ಎನ್‌.ಎಂ.ಸೂರಿ ಛಾಯಾಗ್ರಹಣ,ಅಮಿತ್‌ ಸಂಕಲನ,ಡಿಫ‌ರೆಂಟ್‌ಡ್ಯಾನಿಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next