Advertisement
ಆಟೋಮೊಬೈಲ್ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಪ್ರತಿದಿನವೂ ಬದಲಾಗುತ್ತಲೇ ಇದೆ. ಹೊಸದೊಂದು ಕ್ರಾಂತಿಯನ್ನೇ ಮೂಡಿಸಿದೆ. ಪ್ರತಿ ಸ್ಪರ್ಧಿಗಳಿಗಿಂತ ನಾವು ಯಾವುದರಲ್ಲಿ ಕಡಿಮೆ ಎನ್ನುವಂತೆ ಪ್ರತಿಯೊಂದು ಕಂಪನಿಯೂ ಹೊಸ ಹೊಸ ಟ್ರೆಂಡ್ ಹುಟ್ಟು ಹಾಕುವಲ್ಲಿ ನಿರತವಾಗಿವೆ. ಮಾಡೆಲ್, ವೇರಿಯಂಟ್, ವಿನ್ಯಾಸ ಅಥವಾ ಇನ್ನಾವುದೋ ಬದಲಾವಣೆ ಆದಾಗಲೆಲ್ಲ, ಕಂಪನಿಗಳು ಬ್ರಾಂಡ್‌ಗಾಗಿ ಟ್ರೆಂಡ್ ಹುಟ್ಟು ಹಾಕುವ ಪ್ರಯತ್ನ ನಡೆಸುವುದು ಸಾಮಾನ್ಯವಾಗಿದೆ.
Related Articles
ರಸ್ತೆಯ ಸ್ಥಿತಿ ಹೇಗಿದ್ದರೂ ಸಲೀಸಾಗಿ ಓಡಿಸುವಂತೆ ವಿನ್ಯಾಸಗೊಳಿಸಲಾಗಿರುವ ಸಿ-43ಯಲ್ಲಿ ಎ362ಎಚ್‌ಪಿ 3.0ಲೀಟರ್ ವಿ6 ಬಿಟಬೊì ಎಂಜಿನ್ ಬಳಸಿಕೊಳ್ಳಲಾಗಿದೆ. ಡಾಮರ್, ಮಣ್ಣು ಹಾಗೂ ಮರಳು ರಸ್ತೆಗಳಲ್ಲಿ ಓಡಿಸುವಾಗ ಅದಕ್ಕೆ ತಕ್ಕಂತೆ ಮೋಡ್ ಬದಲಾಯಿಸಿಕೊಳ್ಳುವ ಆಪ್ಶನ್ ನೀಡಲಾಗಿದೆ. ಈ ಮೋಡ್‌ನಲ್ಲಿ ಎಂಜಿನ್ ದಹನ ಶಕ್ತಿಯ ಒತ್ತಡವೂ ಬದಲಾಗಲಿದೆ. 362ಎಚ್‌ಪಿ ಸಾಮರ್ಥ್ಯದ ಎಂಜಿನ್ ಅತ್ಯಧಿಕ ಗುಣಮಟ್ಟದ್ದಾಗಿದೆ. ಇದಲ್ಲದೇ ಇಂಧನ ಬಳಕೆಯಲ್ಲಿಯೂ ವ್ಯತ್ಯಾಸ ಮಾಡಿಕೊಳ್ಳುವ ಅತ್ಯಾಧುನಿಕ ಎಂಜಿನ್ ತಂತ್ರಜ್ಞಾನವನ್ನು ಬೆಂಜ್ ಅಭಿವೃದ್ಧಿಪಡಿಸಿ ಈ ಕಾರಿನಲ್ಲಿ ಅಳವಡಿಸಿದೆ. 4 ವೀಲ್ ಡ್ರೈವ್ ಇದಾಗಿರುವುದರಿಂದ ಸಲೀಸಾಗಿ ಆಫ್ರೋಡ್‌ನಲ್ಲೂ ಓಡಿಸಲು ಸಾಧ್ಯ.
Advertisement
ವಿನ್ಯಾಸ ಅತ್ಯುತ್ತಮಎಸ್ಯುವಿ ಕಾರುಗಳನ್ನೇ ಹೆಚ್ಚೆಚ್ಚು ಇಷ್ಟಪಡುವ ಈ ದಿನಗಳಲ್ಲಿ ಐಷಾರಾಮಿ ಕಾರನ್ನು ಸೆಡಾನ್ ಸೆಗೆ¾ಂಟ್‌ನಲ್ಲಿ ಪರಿಚಯಿಸಿರುವ ಮರ್ಸಿಡಿಸ್ ಬೆಂಜ್, ಸ್ಮಾರ್ಟ್ ಟಚ್ ನೀಡಿದೆ. ಅದರಲ್ಲೂ ಇಂಟೀರಿಯರ್ ಅಚ್ಚುಮೆಚ್ಚು. ಡ್ಯಾಶ್‌ಬೋರ್ಡ್ ಚಾಲಕ ಸ್ನೇಹಿಯಾಗಿದ್ದು, ಕಾರಿನಲ್ಲಿ ಅಳವಡಿಸಲಾದ ಬಹುತೇಕ ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಯಂತ್ರಿಸುವ ಎಲ್ಲಾ ಆಪ್ಶನ್‌ಗಳನ್ನೂ ಡ್ಯಾಶ್‌ಬೋರ್ಡ್‌ನಲ್ಲೇ ಅಳವಡಿಸಲಾಗಿದೆ.
ಎಕ್ಸ್ ಶೋ ರೂಂ ಬೆಲೆ: 77.72 ಲಕ್ಷ ರೂ. ಸುರಕ್ಷತೆಗೆ ಹೆಚ್ಚಿನ ಒತ್ತು
ಸುರಕ್ಷತೆ ದೃಷ್ಟಿಯಿಂದ ಕಾರಿನಲ್ಲಿ ಒಟ್ಟು 7 ಏರ್‌ಬ್ಯಾಗ್‌ಗಳ ಅಳವಡಿಸಲಾಗಿದ್ದು, ಮಕ್ಕಳಿದ್ದಲ್ಲಿ ಅವರ ಸುರಕ್ಷತೆಗೂ ವಿಶೇಷ ಏರ್‌ಬ್ಯಾಗ್, ಸೀಟ್ ಬೆಲ್ಟ್‌ಗಳನ್ನು ಅಳವಡಿಸಲಾಗಿದೆ. ಇನ್ನು, ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್(ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರೆಬ್ಯೂಷನ್ (ಇಬಿಡಿ), ಬ್ರೇಕ್ ಅಸಿಸ್ಟ್(ಬಿಎ), ಹಿಲ್ ಹೋಲ್ಡ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್‌ಗಳನ್ನು ಅಳವಡಿಸಲಾಗಿದೆ. – ಗಣಪತಿ ಅಗ್ನಿಹೋತ್ರಿ