Advertisement

ಜನರ ಮನಸ್ಸು ಗೆದ್ದ ಬೆಂಗೇರಿ ಹೈಟೆಕ್‌ ಮಾರುಕಟ್ಟೆ

05:16 PM May 02, 2022 | Team Udayavani |

ಹುಬ್ಬಳ್ಳಿ: ಸ್ಮಾರ್ಟ್‌ ಟಚ್‌ ಪಡೆದ ಬೆಂಗೇರಿ ಹೈಟೆಕ್‌ ಮಾರುಕಟ್ಟೆ ಮೊದಲ ವಾರವೇ ವ್ಯಾಪಾರಿಗಳ ಹಾಗೂ ಜನರ ಮನಸ್ಸನ್ನು ಗೆದ್ದಿದೆ. ಸ್ಪಂದನೆ ಹಾಗೂ ನಿರ್ವಹಣೆ ಉಳಿದ ಮಾರುಕಟ್ಟೆಗಳ ಬಗ್ಗೆ ಅಧಿಕಾರಿಗಳಲ್ಲಿ ಭರವಸೆ ಮೂಡಿಸಿದೆ. ಆದರೆ ಈ ಭಾಗದ ಸುತ್ತಲೂ ತರಕಾರಿ ಮಾರುಕಟ್ಟೆ ಇಲ್ಲದ ಪರಿಣಾಮ ನಿರಂತರ ಮಾರುಕಟ್ಟೆಯ ಬೇಡಿಕೆ ನಿರ್ಮಾಣವಾಗಿದೆ.

Advertisement

ನಗರದಲ್ಲಿ ದುರ್ಗದ ಬಯಲು, ಜನತಾ ಬಜಾರ್‌ ಹೊರತುಪಡಿಸಿ ನಿರಂತರ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಕೋಟ್ಯಂತರ ರೂ. ಖರ್ಚು ಮಾಡಿ ಮಾರುಕಟ್ಟೆ ನಿರ್ಮಿಸಲಾಗಿದೆ. ಹೀಗಾಗಿ ಇದನ್ನು ನಿರಂತರ ಮಾರುಕಟ್ಟೆಯನ್ನಾಗಿ ಪರಿವರ್ತಿಸಿದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎನ್ನುವ ಬೇಡಿಕೆಯಿದೆ. ಈ ಭಾಗದ ಶಾಸಕರು ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈ ಮಾರುಕಟ್ಟೆ ಸ್ಥಳವನ್ನು ಬಹುಪಯೋಗಕ್ಕಾಗಿ ಅಭಿವೃದ್ಧಿಪಡಿಸಿರುವ ಕಾರಣ ನಿರಂತರ ಮಾರುಕಟ್ಟೆ ಸಾಧ್ಯವಿಲ್ಲ. ನಿರಂತರ ಸಂತೆ ಮಾರುಕಟ್ಟೆ ಮಾಡುವಂತಹ ಪ್ರದೇಶವಲ್ಲ. ನಿರಂತರ ಮಾರುಕಟ್ಟೆಗೆ ವ್ಯಾಪಾರಿಗಳು ಮನಸ್ಸು ಮಾಡುವುದಿಲ್ಲ ಎನ್ನುವ ಅಭಿಪ್ರಾಯ ಸ್ಮಾರ್ಟ್‌ಸಿಟಿ ಅಧಿಕಾರಿಗಳದ್ದಾಗಿದೆ.

ಅಧಿಕಾರಿಗಳಲ್ಲಿ ಮೂಡಿಸಿದ ಭರವಸೆ

ಸಂತೆ ಮಾರುಕಟ್ಟೆ ಅಂದ ಮೇಲೆ ಸ್ವಚ್ಛತೆ ಹಾಗೂ ಸದ್ಬಳಕೆ ಕುರಿತು ಅಧಿಕಾರಿಗಳಲ್ಲಿ ಅನುಮಾನಗಳಿದ್ದವು. ಆದರೆ ಸವಾಲಾಗಿ ಸ್ವೀಕರಿಸಿದ ಪಾಲಿಕೆ-ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಟ್ಟೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಈ ಕುರಿತು ಖಡಕ್ಕಾಗಿ ಸೂಚನೆ ನೀಡಿದ್ದರಿಂದ ವ್ಯಾಪಾರಸ್ಥರು ಕೊಳೆತ, ಉಳಿದ ತರಕಾರಿಗಳನ್ನು ಸುರಿಯದೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಇನ್ನು ಇದರ ನಿರ್ವಹಣೆಗಾಗಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಪಾಲಿಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿದ್ದರು. ಇದು ನಿರಂತರವಾಗಿ ಇರಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Advertisement

ಸಾಲದ ಮಾರುಕಟ್ಟೆ

ಸ್ಮಾರ್ಟ್‌ ಮಾರುಕಟ್ಟೆ ಅಲ್ಲದೆ ನಿರಂತರ ಮಾರುಕಟ್ಟೆ ಕೇಂದ್ರವನ್ನಾಗಿ ಮಾಡಲಿದ್ದಾರೆ ಎನ್ನುವ ಕಾರಣದಿಂದ ಮೊದಲ ವಾರವೇ 500ಕ್ಕೂ ಹೆಚ್ಚು ವ್ಯಾಪಾರಿಗಳು ಪಾಲ್ಗೊಂಡಿದ್ದರು. ಪಾರ್ಕಿಂಗ್‌ ಸ್ಥಳವನ್ನೂ ಕೂಡ ಸಂತೆ ಮಾರುಕಟ್ಟೆಗೆ ಬಳಸಲಾಗಿದೆ. ಈ ಹಿಂದೆ ವಾರಕ್ಕೆ ಸರಿಸುಮಾರು 250-300 ವ್ಯಾಪಾರಿಗಳು ಇಲ್ಲಿ ತರಕಾರಿ, ಹಣ್ಣು, ಬೇಳೆ ಕಾಳು ಸೇರಿದಂತೆ ಇತರೆ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರಸ್ಥರ ಸಂಖ್ಯೆ ವೃದ್ಧಿಗೆ ಕೋವಿಡ್‌ ಸಂದರ್ಭದಲ್ಲಿ ಇತರೆ ಉದ್ಯೋಗ ತೊರೆದು ತರಕಾರಿ ವ್ಯಾಪಾರಕ್ಕೆ ಮೊರೆ ಹೋಗಿರುವುದೂ ಕಾರಣ ಎನ್ನುವ ಅಭಿಪ್ರಾಯವೂ ಇದೆ.

ಹೈಟೆಕ್‌ ಮಾರುಕಟ್ಟೆ ಬಗ್ಗೆ ಸಾರ್ವಜನಿಕರು, ವ್ಯಾಪಾರಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರಂತರ ಮಾರುಕಟ್ಟೆಗೆ ಆಗ್ರಹವಿದ್ದರೂ ಈ ಸ್ಥಳವನ್ನು ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿಕೊಂಡರೆ ಮಾತ್ರ ನಿರ್ವಹಣೆ ಸಾಧ್ಯವಾಗಲಿದೆ. ವಾರದ ಸಂತೆ ಹೊರತುಪಡಿಸಿಯೇ ವಿವಿಧೋದ್ದೇಶಗಳಿಗೆ ಬಳಕೆಯಾಗಲಿದೆ. ಈಗಾಗಲೇ ಬಾಡಿಗೆ ರೂಪದಲ್ಲಿ ಪಡೆಯಲು ಬೇಡಿಕೆಗಳು ಬಂದಿವೆ. ಶಕೀಲ್‌ ಅಹ್ಮದ್‌, ವ್ಯವಸ್ಥಾಪಕ ನಿರ್ದೇಶಕ, ಸ್ಮಾರ್ಟ್‌ಸಿಟಿ

ಹಿಂದೆ ಮಳೆ-ಗಾಳಿಯಲ್ಲಿ ವ್ಯಾಪಾರ ಮಾಡುವುದು ತುಂಬಾ ದುಸ್ತರವಾಗಿತ್ತು. ಮಳೆ ಬಂದರೆ ಇಡೀ ಮಾರುಕಟ್ಟೆ ಹದಗೆಟ್ಟು ಹೋಗುತ್ತಿತ್ತು. ಇದೀಗ ಕುಡಿಯುವ ನೀರಿನಿಂದ ಹಿಡಿದು ಎಲ್ಲಾ ಸೌಲಭ್ಯ ಕಲ್ಪಿಸಿದ್ದಾರೆ. ಟೆಂಟ್‌ ಒಳಗೆ ಒಂದಿಷ್ಟು ವ್ಯಾಪಾರ ಕಡಿಮೆಯಿದೆ. ಹೊರಗಡೆ ಉತ್ತಮವಾಗಿದೆ. -ಸಂಶುದ್ದೀನ್‌ ಬೇಫಾರಿ, ತರಕಾರಿ ವ್ಯಾಪಾರಿ

ನಗರದ ನಾನಾ ಕಡೆಯಿಂದ ವ್ಯಾಪಾರಿಗಳು ಇಲ್ಲಿಗೆ ಆಗಮಿಸಿದ್ದರು. ಇದೀಗ ಈ ಭಾಗ ಸಾಕಷ್ಟು ಅಭಿವೃದ್ಧಿಯಾಗುತ್ತಿರುವುದರಿಂದ ಒಂದು ನಿರಂತರ ಮಾರುಕಟ್ಟೆ ಅಗತ್ಯವಿದೆ. ವಾರಕ್ಕೊಮ್ಮೆ ಬಳಸಿದರೆ ಮುಂದೊಂದು ದಿನ ಕುಡುಕರ ಅಡ್ಡೆಯಾಗಲಿದೆ. ಮಾಜಿ ಮುಖ್ಯಮಂತ್ರಿಗಳಾದ ಅಡ್ಡೆಯಾಗಲಿದೆ. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಅವರು ಕೂಡ ನಿರಂತರ ಜಗದೀಶ ಶೆಟ್ಟರ ಅವರು ಕೂಡ ನಿರಂತರ ಮಾರುಕಟ್ಟೆ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಮಾರುಕಟ್ಟೆ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿರಂತರ ಮಾರುಕಟ್ಟೆಯಾದರೆ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. – ಭೀರಪ್ಪ ಖಂಡೇಕಾರ, ಪಾಲಿಕೆ ಸದಸ್ಯ

ಹೇಮರೆಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next