Advertisement

Bengaluru: ಹಳೇ ಕಾರುಗಳ ವೈವಿಧ್ಯಮಯ ಲೋಕ ಅನಾವರಣ

03:13 PM Sep 14, 2024 | Team Udayavani |

ಬೆಂಗಳೂರು: ಕರ್ನಾಟಕ ಮೊದಲ ಸರ್ಕಾರಿ ಕಾರಿನಿಂದ ಹಿಡಿದು ಸ್ಕೋಡಾ ಪಾಪ್ಯುಲರ್‌ 420 ರೋಡ್‌ ಸ್ಟಾರ್‌ವರೆಗಿನ ಶತಮಾನದಷ್ಟು ಹಳೆಯ ಕಾರುಗಳ ಪ್ರದರ್ಶನ ಅರಮನೆ ಮೈದಾನದಲ್ಲಿ ಸಾರ್ವಜನಿಕರ ಗಮನ ಸೆಳೆಯಿತು. ಈ ಪ್ರದರ್ಶನ ಕಾಲದ ಜತೆಗಿನ ಅದ್ಭುತ ಪಯಣವನ್ನು ಸಿಲಿಕಾನ್‌ ಸಿಟಿಯ ಜನರ ಮುಂದೆ ತಂದು ನಿಲ್ಲಿಸಿದೆ.

Advertisement

ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗತಕಾಲದ ಅಪರೂಪದ ಕಾರುಗಳ ಜಗತ್ತು “ಕಾರು ಎಕ್ಸ್‌ಪೋ’ ಶುಕ್ರವಾರ ನಗರದ ಪ್ಯಾಲೇಸ್‌ ಮೈದಾನದ ತ್ರಿಪುರವಾಸಿ ಗೇಟ್‌ನಲ್ಲಿ ಅನಾವರಣಗೊಂಡಿದೆ. ಈಗಲೂ ಸುಸ್ಥಿಯಲ್ಲಿರುವ ಶತಮಾನಕ್ಕೂ ಹಳೆಯ ಕಾರುಗಳ ವೈವಿಧ್ಯ ಮಯ ಲೋಕವನ್ನು “ಪಯಣ’ ವಸ್ತು ಸಂಗ್ರಹಾಲಯ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಾರ್ವಜನಿಕರ ವೀಕ್ಷಣೆಗೆ ತರೆದಿಟ್ಟಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರತಿಯೊಂದು ಕಾರುಗಳನ್ನು ಉತ್ತಮವಾಗಿ ಸಂರಕ್ಷಿಸಿದ್ದಾರೆ. ಇದು ಕೇವಲ ಕಾರುಗಳ ಇತಿಹಾಸ ಮಾತ್ರವಲ್ಲದೆ ನಾವೀನ್ಯತೆ, ಕರಕುಶಲತೆ ಮತ್ತು ಸೌಂದರ್ಯದ ನಿರಂತರ ಅನ್ವೇಷಣೆಯನ್ನು ತೆರೆದಿಟ್ಟಿದೆ. ವಾಹನ ವಿನ್ಯಾಸದ ವಿಕಾಸ ಮತ್ತು ಉದ್ಯಮವನ್ನು ರೂಪಿಸಿದ ಪ್ರಮುಖ ಕ್ಷಣಗಳನ್ನು ನೋಡಿ ಅರ್ಥಮಾಡಿಕೊಳ್ಳಬಹುದಾಗಿದೆ.

ದೇಶದ ಅಪರೂಪದ ಕಾರು!: ಕೆಂಪು ಬಣ್ಣ ರಾಯಲ್‌ ಲುಕ್‌ ಸ್ಕೋಡಾ ಪಾಪ್ಯುಲರ್‌ 11420 ರೋಡ್‌ ಸ್ಟಾರ್‌ ಕಾರು ಪ್ರದರ್ಶನದಲ್ಲಿ ಸಾರ್ವ ಜನಿಕರ ಗಮನ ಸೆಳೆಯಿತು. ಇಡೀ ದೇಶದಲ್ಲಿ ಕೇವಲ 4 ಮಂದಿಯ ಹತ್ತಿರ ಮಾತ್ರ ಸ್ಕೋಡಾ ಪಾಪ್ಯುಲರ್‌ ಕಾರು ಇದೆ. ಇದು 3 ಸ್ಪೀಡ್‌ ಮಾನ್ಯುಯಲ್‌ ಗೇರ್‌ಗಳಿದ್ದು, ಗರಿಷ್ಠ ವೇಗವು ಗಂಟೆಗೆ 100 ಕಿ.ಮೀ. ಸಂಚರಿಸಲಿದೆ.

Advertisement

ಮರದ ಹೊದಿಕೆ ಕಾರು!: ಪ್ರದರ್ಶನದಲ್ಲಿ ಮೊರಿಸ್‌ ಉಡಿ 15/6 ಕಾರಿನ ಹೊರ ಪದರವು ಮರದಿಂದ ಕೂಡಿದೆ. 1934- 35ರಲ್ಲಿ ಸುಮಾರು 15,470 ಕಾರುಗಳನ್ನು ಮಾರುಕಟ್ಟೆ ಬಿಡುಗಡೆ ಮಾಡ ಲಾಗಿತ್ತು. ಇದರ ಮೇಲ್ಪದರವನ್ನು ಮರವನ್ನು ಬಳಸಿಕೊಂಡು ಮರು ನವೀಕರಿಸಲಾಗಿದೆ. ಇದರೊಂದಿಗೆ 3 ಡೋರ್‌ ಹೊಂದಿರುವ ಮೋರಿಸ್‌ 8ಸೀರಿಸ್‌ 1 ಟೂರ್‌ ಪ್ರದರ್ಶನಕ್ಕೆ ಇಡಲಾಗಿದೆ. ಈ ಕಾರು 1937ರಲ್ಲಿ ಮಾರುಕಟ್ಟೆ ಬಿಡುಗಡೆ ಮಾಡಲಾಗಿದೆ.

ಶತಮಾನದ ಕಾರುಗಳೊಂದಿಗೆ ಸೆಲ್ಫೀ: ಅಪರೂಪದ ಕಾರುಗಳ ಪ್ರದರ್ಶದಲ್ಲಿ ಸಾರ್ವಜನಿಕರು ಬಹಳ ಉತ್ಸಹದಿಂದ ಭಾಗವಹಿ ಸಿದರು. ರಾಯಲ್‌ ಲುಕ್‌ ಕಾರ್‌ಗಳ ಮುಂದೆ ನಿಂತು ಸೆಲ್ಫೀ ತೆಗೆದುಕೊಂಡರು. ಇನ್ನೂ ಕೆಲವರು ಕಾರುಗಳ ಇತಿಹಾಸ ಕೇಳಿ ಆಶ್ಚರ್ಯ ಗೊಂಡರು. ಪ್ರದರ್ಶನದಲ್ಲಿ ಶತಮಾನದಷ್ಟು ಹಳೆಯ 10 ಕಾರುಗಳಿದ್ದವು. ಸೆ.14ರಂದು ಶತಮಾನದಷ್ಟು ಹಳೆಯದಾದ ಕಾರುಗಳ ರೋಡ್‌ ಶೋನಲ್ಲಿ ಭಾಗವಹಿಸಲಿದೆ.

ರಾಜ್ಯದ ಮೊದಲ ಸರ್ಕಾರಿ ಕಾರು! ಪ್ರದರ್ಶನಕ್ಕೆ ಇಡಲಾದ ಪ್ರತಿಯೊಂದು ಕಾರು ಒಂದು ಕಥೆಯನ್ನು ಹೇಳುತ್ತದೆ. ಯುನೈಟೆಡ್‌ ಸ್ಟೇಟ್‌ ಡಾಡ್ಜ್ ಕಿಂಗ್ಸ್‌ ವೇ ಕಸ್ಟಮ್‌ (ಡಿ49) ಕಾರು ಕರ್ನಾಟಕದ ಮೊದಲ ಸರ್ಕಾರಿ ಕಾರು. ಇಂದಿರಾಗಾಂಧಿ ಕರ್ನಾಟಕ್ಕೆ ಭೇಟಿ ನೀಡಿದಾಗ ಸಂಚರಿಸಿದ ಕಾರು ಇದಾಗಿದೆ. ಇದನ್ನು ಧರ್ಮಸ್ಥಳ ವಿರೇಂದ್ರ ಹೆಗ್ಗಡೆ ಅವರು ಖರೀದಿಸಿ, ತಮ್ಮ ಸಂಗ್ರಹಾಲಯದಲ್ಲಿ ಇಟ್ಟುಕೊಂಡಿದ್ದಾರೆ. ಈ ಕಾರು ಗಂಟೆಗೆ 90 ಕಿ.ಮೀ.ನಿಂದ 145 ಕಿ.ಮೀ. ವೇಗವಾಗಿ ಸಂಚರಿಸಲಿದೆ. 1954ರಲ್ಲಿ ತಯಾರಿಸಲಾದ ಕಾರು ಇದಾಗಿದೆ. ಪ್ರಸ್ತುತ ಸುಸ್ಥಿತಿಯಲ್ಲಿ ಕಾರ್ಯಾಚರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next