ಬೆಂಗಳೂರು: ದ್ವಿಚಕ್ರ ವಾಹನ ಕಳ್ಳತನ ಪ್ರಕರಣದ ಸಂಬಂಧ ಕುಮಾರಸ್ವಾಮಿ ಲೇಔಟ್ ಹಾಗೂ ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರತ್ಯೇಕ ಪ್ರಕರಣ ದಲ್ಲಿ ಮೂವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಂಧಿñ ರಿಂದ 18 ಲಕ್ಷ ರೂ. ಮೌಲ್ಯದ 31 ದ್ವಿಚಕ್ರವಾಹನ ಜಪ್ತಿ ಮಾಡಿಕೊಳ್ಳಲಾಗಿದೆ.
ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಆರೋಪಿಗಳಾದ ಸೈಯ್ಯದ್ ಅಬ್ದುಲ್ ಹಾಗೂ ಸನ್ಮಾಲ್ ಖಾನ್ ಎಂಬುವವರನ್ನು ಬಂಧಿಸಿ 17 ದ್ವಿಚಕ್ರ ವಾಹನ ಗಳನ್ನು ವಶಕ್ಕೆ ಪಡೆಯಲಾಗಿದೆ. ಮಡಿವಾಳ ಠಾಣೆ ಪೊಲೀಸರು ಸೈಯ್ಯದ್ ಇಲಿಯಾಸ್‌ನನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ 14 ದ್ವಿಚಕ್ರವಾಹನ ಜಪ್ತಿ ಮಾಡಿದ್ದಾರೆ.
ಆರೋಪಿಗಳು ನಗರದ ವಿವಿಧೆಡೆ ನಿಲುಗಡೆ ಮಾಡಿರುವ ಬೈಕ್‌ಗಳನ್ನು ಕದಿಯುತ್ತಿದ್ದರು. ಕದ್ದ ಬೈಕ್ ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದ ಹಣದಲ್ಲಿ ದುಂದು ವೆಚ್ಚ ಮಾಡುತ್ತಿದ್ದರು.
ಯಲಚೇನಹಳ್ಳಿ ರಾಯಲ್ ಎನ್ ಪೀಲ್ಡ್ ಷೋ ರೂಂ ಪಕ್ಕದಲ್ಲಿ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನ ನಿಲುಗಡೆ ಮಾಡಿ ಕೆಲಸಕ್ಕೆ ಹೋಗಿದ್ದರು. ಸಂಜೆ ಕೆಲಸ ಮುಗಿಸಿ ವಾಪಸ್ ಬರುವ ವೇಳೆ ಈ ವಾಹನ ಕಳ್ಳತನವಾಗಿತ್ತು. ಈ ಕುರಿತು ಅವರು ಕೆಎಸ್‌ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಫೈಜಾಬಾದ್ ಅಬೂಬ್ ಮಸೀದಿ ಬಳಿ ವಾಹನ ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕದ್ದ ಬೈಕ್‌ಗಳನ್ನು ಸ್ಮಶಾನದ ಬಳಿ ನಿಲ್ಲಿಸಿದ್ದ ಆರೋಪಿ! ಹೊಸೂರು ಮುಖ್ಯರಸ್ತೆಯಲ್ಲಿ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನ ನಿಲುಗಡೆ ಮಾಡಿ ಬಸ್ ಟಿಕೆಟ್ ಬುಕ್ ಮಾಡಲು ಹೋಗಿ ವಾಪಸ್ಸಾದಾಗ ಅವರ ಬೈಕ್ ಕಳವಾಗಿತ್ತು. ಬೈಕ್ ಮಾಲಿಕರು ಮಡಿವಾಳ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸೈಯ್ಯದ್ ಇಲಿಯಾಸ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಕದ್ದ 4 ಬೈಕ್‌ಗಳನ್ನು ಸಿಲ್ಕ್ ಬೋರ್ಡ್ ಬಳಿಯಿರುವ ಸ್ಮಶಾನದ ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿರುವುದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದ. ಆತ ಕೊಟ್ಟ ಮಾಹಿತಿ ಆಧರಿಸಿ ಅಲ್ಲಿ ನಿಲುಗಡೆ ಮಾಡಿದ್ದ 4 ಬೈಕ್ ಸೇರಿ ನಗರದ ವಿವಿಧೆಡೆ ಆರೋಪಿ ನಿಲ್ಲಿಸಿದ್ದ 14 ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.