Advertisement

Bengaluru: ಅಪಾರ್ಟ್‌ಮೆಂಟಿಗೆ ನುಗ್ಗಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಗುರುತು ಪತ್ತೆ

12:55 PM Aug 10, 2024 | Team Udayavani |

ಬೆಂಗಳೂರು: ಮಲ್ಲೇಶ್ವರದ ಸಾಯಿ ರೆಸಿಡೆನ್ಸಿ ಎಂಬ ಅಪರ್ಟ್‌ಮೆಂಟಿಗೆ ನುಗ್ಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಪರಿಚಿತ ಮಹಿಳೆ ಗುರುತು ಪತ್ತೆಯಾಗಿದ್ದು, ಚನ್ನಪಟ್ಟಣದ ಜಯಶ್ರೀ (46) ಎಂದು ಗುರುತಿಸಲಾಗಿದೆ.

Advertisement

ವೈಯಾಲಿಕಾವಲ್‌ ನಿವಾಸಿ ಜಯಶ್ರೀ ಚನ್ನಪಟ್ಟಣದ ವ್ಯಕ್ತಿಯೊಬ್ಬರನ್ನು ಮದುವೆ ಆಗಿದ್ದರು. ಮೂವರು ಮಕ್ಕಳ ಜತೆಗೆ ಚನ್ನಪಟ್ಟಣದಲ್ಲಿ ನೆಲೆಸಿದ್ದರು. ಕುಟುಂಬಸ್ಥರ ಜತೆಗೆ ಮನಸ್ತಾಪ ಉಂಟಾಗಿತ್ತು. ಇದರಿಂದ ಮನೆಬಿಟ್ಟು ಚಿನ್ನಾಭರಣ ಅಡವಿಟ್ಟು ಬೆಂಗಳೂರಿಗೆ ಬಂದಿದ್ದರು. ಮೆಜೆಸ್ಟಿಕ್‌ನಲ್ಲೇ ರಾತ್ರಿ ಕಳೆದಿದ್ದರು. ಸಿನಿಮಾ ವೀಕ್ಷಣೆ ಮಾಡಿ ಮಂಗಳವಾರ ಬೆಳಗ್ಗೆ ಮಲ್ಲೇಶ್ವರಕ್ಕೆ ಬಂದಿದ್ದರು. ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಇಲ್ಲದೇ ಇರುವುದನ್ನು ಗಮನಿಸಿ ಅಲ್ಲಿಗೆ ನುಗ್ಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೃತ ಮಹಿಳೆಯ ಬಟ್ಟೆಯ ಜೇಬಿನಲ್ಲಿ ಬಸ್‌ ಮತ್ತು ಸಿನಿಮಾ ಟಿಕೆಟ್‌ ಮಾತ್ರ ಪತ್ತೆಯಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next