Advertisement

Bengaluru: ಕಟ್ಟಡ ಕುಸಿತಕ್ಕೆ ಗುತ್ತಿಗೆದಾರನೂ ಬಲಿ!

03:25 PM Oct 26, 2024 | Team Udayavani |

ಬೆಂಗಳೂರು: ಹೆಣ್ಣೂರಿನ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಉಂಟಾದ ದುರಂತದಲ್ಲಿ ಅವಶೇಷ ಗಳಡಿ ನಾಪತ್ತೆಯಾಗಿದ್ದ ಗುತ್ತಿಗೆದಾರ ಏಳುಮಲೈ ಶವ ಶುಕ್ರವಾರ ಪತ್ತೆಯಾಗಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

Advertisement

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ (ಐಐಎಸ್‌ಸಿ)ಯಿಂದ ಮೆಟಿರಿಯಲ್‌ ಸೈನ್ಸ್‌ನವರನ್ನು ಕರೆತಂದು ಕಟ್ಟಡದ ಅವಷೇಷಗಳ ಸ್ಯಾಂಪಲ್‌ ಸಂಗ್ರಹಿಸಿ ಕಾರ್ಯಾಚರಣೆ ಮಾಡಲಾಗಿದೆ. ಕಟ್ಟಡದೊಳಗೆ ಸಿಲುಕಿದ್ದ ಏಳುಮಲೈಗಾಗಿ ಶುಕ್ರವಾರ ಬೆಳಗ್ಗಿನಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಗುತ್ತಿಗೆದಾರ ಏಳುಮಲೈ ಮೊಬೈಲ್‌ ರಿಂಗ್‌ ಆಗುತ್ತಿತ್ತು. ಅವರ ಲೊಕೇಶನ್‌ ಟ್ರೇಸ್‌ ಮಾಡಿದಾಗ ಕಟ್ಟಡದ ಅವಶೇಷಗಳಡಿ ತೋರಿಸುತ್ತಿತ್ತು. ಇದರ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದಾಗ ಕಟ್ಟಡದ ಅವಶೇಷಗಳ ಒಳಗೆ ಏಳುಮಲೈ ಶವ ಪತ್ತೆಯಾಗಿದೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಕಟ್ಟಡ ದುರಂತದಲ್ಲಿ ಇದುವರೆಗೆ ಏಳುಮಲೈ ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ.

ಕಾರ್ಯಾಚರಣೆ ಮುಕ್ತಾಯ: ಇನ್ನುಳಿದಂತೆ ಕಟ್ಟಡದ ಒಳಗೆ ಬೇರೆ ಯಾರೂ ಸಿಲುಕಿರುವ ಸಾಧ್ಯತೆಗಳಿಲ್ಲ. ಹೀಗಾಗಿ ಕಾರ್ಯಾಚರಣೆಯನ್ನು ಮುಕ್ತಾಯಗೊ ಳಿಸಲಾಗಿದೆ ಎಂದು ಪೊಲೀಸ್‌ ಮೂಲ ಗಳು ತಿಳಿಸಿವೆ. ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡವರಿಗಾಗಿ 4 ದಿನಗಳಿಂದಲೂ 30ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಅಧಿ ಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. 13 ಮಂದಿಯನ್ನು ಇದುವರೆಗೂ ರಕ್ಷಿಸಲಾಗಿದೆ. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಿ ಶುಕ್ರವಾರ ಮುಂಜಾನೆಯಿಂದ ಮತ್ತೆ ಶೋಧ ಕಾರ್ಯ ಆರಂಭಿಸಲಾಗಿತ್ತು. ಸಂಬಂಧ ಕಟ್ಟಡ ಮಾಲಿಕ ಹಾಗೂ ಅವರ ಪುತ್ರ ಸೇರಿದಂತೆ ಮೂವರ ಮೇಲೆ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರನ್ನು ಬಂಧಿಸಲಾಗಿದೆ.

ಈ ಕಟ್ಟಡದಲ್ಲಿ ಬಿಹಾರ ಮತ್ತು ಉತ್ತರ ಕರ್ನಾಟಕ ಮೂಲದ ಸುಮಾರು 22 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿ ದ್ದರು. ಕಟ್ಟಡ ಬಿದ್ದಿರುವ ವಿಚಾರ ಗೊತ್ತಾಗು ತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ ಎಫ್, ಎಸ್‌ಡಿಆರ್‌ಎಫ್ ಪಡೆ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

ನಂಜಪ್ಪ ಗಾರ್ಡನ್‌ನಲ್ಲಿ ವಾಲಿದ್ದ 5 ಅಂತಸ್ತಿನ ಕಟ್ಟಡ ನೆಲಸಮ!

Advertisement

ಬೆಂಗಳೂರು: ಮಹದೇವಪುರ ವಲಯದ ಹೊರಮಾವಿನ ನಂಜಪ್ಪ ಗಾರ್ಡನ್‌ನಲ್ಲಿ ಪುಟ್ಟಪ್ಪ ಎಂಬುವರು 10×25 ಅಡಿಯಲ್ಲಿ ಜಾಗದಲ್ಲಿ ನಿರ್ಮಿಸಿದ್ದ 5 ಅಂತಸ್ತಿನ ಕಟ್ಟಡ ವಾಲಿದ್ದರಿಂದ ಆ ಮನೆಯನ್ನೂ ಶುಕ್ರವಾರ ನೆಲಸಮ ಮಾಡಲಾಗಿದೆ. ಅಕ್ಕಪಕ್ಕದಲ್ಲಿ ಮನೆಗಳು ಇರುವ ಕಾರಣ ಕೆಲಸಗಾರರು ಸುತ್ತಿಗೆಯಿಂದ ಬಡಿದು ಕಟ್ಟಡವನ್ನು ಒಡೆದರು. ಮೇಲ್ಭಾಗ ಕಟ್ಟಡ ತೆರವು ಮುಗಿದ ಬಳಿಕ ಜೆಸಿಬಿ ಯಂತ್ರದಿಂದ ಕಾರ್ಯಾಚರಣೆ ಮಾಡಲಾಯಿತು.

ಕಟ್ಟಡ ತೆರವು ಮಾಡದಿದ್ದರೆ ಕ್ರಿಮಿನಲ್‌ ಪ್ರಕರಣ ದಾಖಲಿಸುವುಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಮಾಲಿಕರೇ ಈ ಕಟ್ಟಡವನ್ನು ತೆರವು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next