Advertisement

ಪ್ರಶಸ್ತಿ ಸೀಕರಿಸಲು ಹಿಜಾಬ್‌ ಧರಿಸಿ: ಬೆಂಗಳೂರಿನ ಆಟಗಾರ್ತಿಗೆ ಇರಾನ್ ಸಂಘಟಕರ ಸೂಚನೆ

10:45 AM Feb 07, 2023 | Team Udayavani |

ಬೆಂಗಳೂರು: ಕಟ್ಟರ್‌ ಮೂಲಭೂತವಾದಿ, ಮತಾಂಧ ದೇಶವೆನಿಸಿಕೊಂಡಿರುವ ಇರಾನ್‌ನಲ್ಲಿ ನಡೆದ ಬೆಳವಣಿಗೆಯೊಂದು ಭಾರೀ ಟೀಕೆಗೆ ಕಾರಣವಾಗಿದೆ. ಇರಾನ್‌ ರಾಜಧಾನಿ ಟೆಹ್ರಾನ್‌ ನಲ್ಲಿ ನಡೆದ ಮಹಿಳಾ ಸಿಂಗಲ್ಸ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಗೆದ್ದಿದ್ದ ಬೆಂಗಳೂರಿನ ತಾನ್ಯಾ ಹೇಮಂತ್‌; ಹಿಜಾಬ್‌ ಧರಿಸಿಯೇ ಪ್ರಶಸ್ತಿ ಸ್ವೀಕರಿಸಬೇಕಾಯಿತು.

Advertisement

ಹೀಗೊಂದು ತಾಕೀತನ್ನು ಸಂಘಟಕರೇ ಪ್ರಶಸ್ತಿ ವಿತರಣೆಗೂ ಮುನ್ನ ಮಾಡಿದರು! ಹೀಗಾಗಿ ಫ‌ಜ್ರ್ ಅಂತಾರಾಷ್ಟ್ರೀಯ ಚಾಲೆಂಜ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಪ್ರಶಸ್ತಿ ಗೆದ್ದ ಆಟಗಾರ್ತಿಯರು ಹಿಜಾಬ್‌ ಧರಿಸಿಯೇ ಪದಕಗಳನ್ನು ಸ್ವೀಕರಿಸಿದರು.

ಬೆಂಗಳೂರಿನ ತಾನ್ಯಾ ಫೈನಲ್‌ ಪಂದ್ಯದಲ್ಲಿ ಇರಾನಿನ ತಸ್ನಿಮ್‌ ಮೀರ್‌ ರನ್ನು 21-7, 21-11 ಅಂಕಗಳಿಂದ ಏಕಪಕ್ಷೀಯವಾಗಿ ಸೋಲಿಸಿದ್ದರು. ಆದರೆ ಪ್ರಶಸ್ತಿ ಸ್ವೀಕರಿಸುವಾಗ ಹಿಜಾಬ್‌ ಧರಿಸಬೇಕೆಂದು ಸಂಘಟಕರು ಹೇಳಿದ್ದಾರೆ. ಆದರೆ ಕೂಟದ ವಸ್ತ್ರಸಂಹಿತೆಯಲ್ಲಿ ಇದರ ಉಲ್ಲೇಖವಿರಲಿಲ್ಲ. ಸಂಘಟಕರು ಮಾತ್ರ ಪ್ರಶಸ್ತಿ ಗೆದ್ದ ಆಟಗಾರ್ತಿಯರು ಪದಕ ಸ್ವೀಕರಿಸುವಾಗ ಹಿಜಾಬ್‌ ಧರಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್

ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟದಿಂದ ಮಾನ್ಯತೆ ಪಡೆದ ಯಾವುದೇ ಕೂಟಗಳಲ್ಲಿ ವಸ್ತ್ರಸಂಹಿತೆ ಒಂದೇ ರೀತಿಯಿರುತ್ತದೆ. ಇರಾನ್‌ನಲ್ಲಿ ಮಹಿಳೆಯರು ಹಿಜಾಬ್‌ ಧರಿಸಬೇಕಾಗಿದ್ದರೂ, ಕೂಟಗಳಲ್ಲೂ ಹೀಗೆ ಮಾಡಬೇಕಾಗುತ್ತದೆ ಎಂಬ ಮಾಹಿತಿಯಿರಲಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

Advertisement

ಮಹಿಳಾ ಪಂದ್ಯಗಳನ್ನು ನೋಡಲು ಗಂಡಸರಿಗೆ ಪ್ರವೇಶವಿಲ್ಲ: ವಿಚಿತ್ರವೆಂದರೆ ಮಹಿಳೆಯರು ಆಡುವ ಪಂದ್ಯಗಳನ್ನು ನೋಡಲು ಯಾವುದೇ ಪುರುಷರಿಗೆ ಪ್ರವೇಶವಿರಲಿಲ್ಲ. ಇನ್ನೂ ವಿಚಿತ್ರವೆಂದರೆ ಪುರುಷರೆಂಬ ಕಾರಣಕ್ಕೆ ಅಪ್ಪನನ್ನು, ತರಬೇತುದಾರರನ್ನು ಒಳಗೆ ಬಿಟ್ಟಿರಲಿಲ್ಲ! ಇಷ್ಟೆಲ್ಲದರ ಮಧ್ಯೆ ಪುರುಷ ಆಟಗಾರರೂ ಇರುವ ಮಿಶ್ರ ಡಬಲ್ಸ್‌ ಪಂದ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಬೆಳವಣಿಗೆ ವಿಶ್ವಾದ್ಯಂತ ಟೀಕೆಗೆ ಕಾರಣವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next