Advertisement

ಮಳೆಗಾಲದಲ್ಲಿ ಬೆಂಗಳೂರಿನ 84 ಬಡಾವಣೆಗಳಲ್ಲಿ ಪ್ರವಾಹ ಖಚಿತ

02:22 PM May 18, 2022 | Team Udayavani |

ಬೆಂಗಳೂರು: ಈ ಬಾರಿಯ ಮಳೆಗಾಲದಲ್ಲಿ ಬೆಂಗಳೂರಿನ 84 ಬಡಾವಣೆಗಳಲ್ಲಿ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆಯಿದೆ.

Advertisement

ಹೌದು, ಸದ್ಯ ಅಕಾಲಿಕ ಮಳೆಯಿಂದಾಗಿ ರಾಜಕಾಲುವೆಗಳೆಲ್ಲವೂ ಭರ್ತಿಯಾಗಿವೆ. ಈಮಾಸಾಂತ್ಯಕ್ಕೆ ಮುಂಗಾರು ಆರಂಭವಾಗಲಿದೆ. ಕಳೆದ ವರ್ಷ ಗುರುತಿಸಲಾದ ಪ್ರದೇಶಗಳಲ್ಲಿಯೇ ಇನ್ನೂ ಪರಿಹಾರ ಕಾರ್ಯ ಕಂಡುಕೊಳ್ಳಲು ಬಿಬಿಎಂಪಿಯಿಂದ ಸಾಧ್ಯವಾಗಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರವಾಹ ಪೀಡಿತ ಬಡಾವಣೆಯ ಜನರು ಈ ಬಾರಿಯೂ ಪ್ರವಾಹದಿಂದ ಸಂಕಷ್ಟ ಅನುಭವಿಸುವಂತಾಗಬಹುದು. ಕಳೆದ ಸಾಲಿನ ಪಟ್ಟಿಯಂತೆ ಈ ಬಾರಿಯೂ 84 ಕಡೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಯಿದ್ದು, ಅದರಲ್ಲಿ ರಾಜಕಾಲುವೆ ತಡೆಗೋಡೆ ಕುಸಿತ ಸೇರಿ ಇನ್ನಿತರ ಕಾರಣಗಳಿಂದ ಸಣ್ಣ ಮಳೆಯಾದರೂ ವಸತಿ ಪ್ರದೇಶಗಳಿಗೆ ನೀರು ನುಗ್ಗುವ 28 ಸೂಕ್ಷ್ಮ ಪ್ರದೇಶಗಳಿವೆ. ಉಳಿ ದಂತೆ 56 ಕಡೆಗಳಲ್ಲಿ ಭಾರಿ ಮಳೆಯಾದಾಗ ಮಾತ್ರ ಪ್ರವಾಹ ಉಂಟಾಗಲಿದೆ.

ಬಿಬಿಎಂಪಿಯ ಪಟ್ಟಿಯಂತೆ ರಾಜ ರಾಜೇಶ್ವರಿನಗರದಲ್ಲಿ ಅತಿ ಹೆಚ್ಚಿನ ಪ್ರವಾಹ ಪೀಡಿತಪ್ರದೇಶಗಳಿವೆ. ಅದರಂತೆ ರಾಜ ರಾಜೇಶ್ವರಿನಗರದಲ್ಲಿ ಒಟ್ಟು 25 ಪ್ರದೇಶ ಗಳನ್ನು ಪ್ರವಾಹ ಉಂಟಾಗುವ ಪ್ರದೇಶ ಎಂದು ಗುರುತಿಸಲಾಗಿದೆ.

ಉಳಿದಂತೆ ಬೊಮ್ಮ ನ ಹಳ್ಳಿ ವಲಯದಲ್ಲಿ ಸೂಕ್ಷ್ಮ ಪ್ರದೇಶದ ಸಂಖ್ಯೆ ಹೆಚ್ಚಿದೆ. ಒಟ್ಟು 6 ಕಡೆ ಸಣ್ಣ ಮಳೆಯಾದರೂ ಪ್ರವಾಹ ಸೃಷ್ಟಿಯಾಗುವ ಆತಂಕವಿದೆ. ಪ್ರತಿವರ್ಷ ಮಳೆಗಾಲಕ್ಕೂ ಮುನ್ನ ಬಿಬಿಎಂಪಿ ನಗರದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸುತ್ತದೆ. ಹೀಗೆ ಗುರುತಿಸುವ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ ಕೈಗೊಂಡು ಪ್ರವಾಹ ತಡೆಯುವ ಕೆಲಸ ಮಾಡಲಾಗುತ್ತದೆ.

Advertisement

ಅದೇ ರೀತಿ 2021-22ರಲ್ಲಿ ಗುರುತಿಸ ಲಾದ 209 ಪ್ರವಾಹ ಪೀಡಿತ ಪ್ರದೇಶಗಳ ಪೈಕಿ ಇನ್ನೂ 84 ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕಿದೆ. ಅದರಲ್ಲಿ ಶೇ. 30 ಸೂಕ್ಷ್ಮಪ್ರದೇಶವಾಗಿದ್ದು ಕಳೆದ ವರ್ಷ ಪ್ರವಾಹಕ್ಕೆತುತ್ತಾಗಿದ್ದ ಪ್ರದೇಶಗಳ ಜನರು ಈ ವರ್ಷವೂಪ್ರವಾಹದಿಂದ ಸಂಕಷ್ಟ ಅನುಭವಿಸಬೇಕಿದೆ.2021-22ರಲ್ಲಿ ಬಿಬಿಎಂಪಿ ಸಮೀಕ್ಷೆ ನಡೆಸಿ209 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿತ್ತು. ಅದರಲ್ಲಿ 58 ಸೂಕ್ಷ್ಮಪ್ರದೇಶವಾಗಿದ್ದರೆ 151 ಪ್ರದೇಶಗಳಲ್ಲಿ ಮಳೆ ಹೆಚ್ಚಾದಾಗ ಮಾತ್ರ ಪ್ರವಾಹ ಉಂಟಾಗುತ್ತಿತ್ತು.

ಸಾವಿರ ಕೋಟಿ ವ್ಯಯಿಸಿದರೂ ಹಾನಿ ತಪ್ಪಿಲ್ಲ :  ನಗರದಲ್ಲಿ 859.90 ಕಿ.ಮೀ. ಉದ್ದದ ಪ್ರಥಮ ಮತ್ತು ದ್ವಿತೀಯ ರಾಜಕಾಲುವೆಗಳಿವೆ. ಅವುಗಳ ಪೈಕಿ 490.10 ಕಿ.ಮೀ. ಉದ್ದದ ರಾಜಕಾಲುಗಳನ್ನು ಈಗಾಗಲೆ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ 112.83 ಕಿ.ಮೀ. ಉದ್ದದ ರಾಜಕಾಲುವೆಯನ್ನು 2018-19ರಿಂದ 2020-21ನೇ ಸಾಲಿನಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಅದಕ್ಕಾಗಿ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ ಅಡಿಯಲ್ಲಿ 1,060 ಕೋಟಿ ರೂ. ಅನುದಾನ ನೀಡಲಾಗಿದೆ. ಉಳಿದಂತೆ 409 ಕಿ.ಮೀ. ಉದ್ದದ ರಾಜಕಾಲುವೆ ದುರಸ್ತಿಕಾರ್ಯ ಕೈಗೊಳ್ಳಬೇಕಿದ್ದು ಅದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 1,500 ಕೋಟಿ ರೂ. ನೀಡುವಕುರಿತು ರಾಜ್ಯ ಸರ್ಕಾರ ಘೋಷಿಸಿದೆ. ಇಷ್ಟಾದರೂ ನಗರದಲ್ಲಿ ರಾಜಕಾಲುವೆಗಳಿಂದಾಗುತ್ತಿರುವ ಅವಾಂತರ ಮಾತ್ರ ತಪ್ಪುತ್ತಿಲ್ಲ.

ಪ್ರವಾಹ ಪೀಡಿತ ಪ್ರದೇಶಗಳ ವಿವರ

ವಲಯ/ ಸೂಕ್ಷ್ಮ /ಮಧ್ಯಮ

ಪೂರ್ವ 5/ 5

ಪಶ್ಚಿಮ 3/ 8

ದಕ್ಷಿಣ 3 /2

ಯಲಹಂಕ 4/ 0

ಮಹದೇವಪುರ 4 /6

ಬೊಮ್ಮನಹಳ್ಳಿ 6 /3

ರಾಜರಾಜೇಶ್ವರಿನಗರ 3/ 22

ದಾಸರಹಳ್ಳಿ 0 /10

ಒಟ್ಟು 28/ 56

ಮಳೆಗಾಲದ ಸಂದರ್ಭದಲ್ಲಿ ಪ್ರವಾಹ ಉಂಟಾಗುವಪ್ರದೇಶಗಳಲ್ಲಿ ಪರಿಹಾರಕಾರ್ಯ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷ ಪಟ್ಟಿಯಲ್ಲಿನ84 ಕಡೆಗಳಲ್ಲಿ ಪರಿಹಾರಕೈಗೊಳ್ಳಬೇಕಿದೆ. ಅದಕ್ಕಾಗಿ ಯೋಜನೆ ರೂಪಿಸಲಾಗಿದ್ದುಕಾರ್ಯಗತ ಗೊಳಿಸಲಾಗುತ್ತಿದೆ. – ರವೀಂದ್ರ, ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ

– ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next