Advertisement

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

11:49 AM Nov 23, 2024 | Team Udayavani |

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ತೆರಳಿ ಮೊಬೈಲ್‌ ಲಪಟಾಯಿಸುತ್ತಿದ್ದ ಇಬ್ಬರನ್ನು ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು ಬಂಧಿಸಿ, 15 ಲಕ್ಷ ರೂ. ಮೌಲ್ಯದ 60 ಮೊಬೈಲ್‌ ಜಪ್ತಿ ಮಾಡಿದ್ದಾರೆ. ಆಂಧ್ರ ಮೂಲದ ಚಾಕ್ಲಿ ಮನೋಹರ್‌ (24) ಹಾಗೂ ಕೊಮ್ಮು ಪ್ರಶಾಂತ್‌ (25) ಬಂಧಿತರು.

Advertisement

ಆರೋಪಿಗಳು ಆಂಧ್ರದಿಂದ ನಗರಕ್ಕೆ ಬಂದು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾ ಣಿಕರ ಸೋಗಿನಲ್ಲಿ ಪ್ರಯಾಣಿ ಸುತ್ತಿದ್ದರು. ನಂತರ ಹೆಚ್ಚಿನ ಜನಸಂದಣಿ ಇರುವ ವೇಳೆ ಪ್ರಯಾಣಿಕರಿಗೆ ಗೊತ್ತಾಗದಂತೆ ಅವರ ಮೊಬೈಲ್‌ ಕಳವು ಮಾಡುತ್ತಿದ್ದರು. ಮೊಬೈಲ್‌ ಕದ್ದ ಕೂಡಲೇ ಮೊದಲು ಅದನ್ನು ಸ್ವಿಚ್ಡ್ ಆಫ್ ಮಾಡಿ ಸಿಮ್‌ ಎಸೆಯುತ್ತಿದ್ದರು. ನಂತರ ಕದ್ದ ಮೊಬೈಲ್‌ನೊಂದಿಗೆ ಆಂಧ್ರಕ್ಕೆ ತೆರಳಿ ಅಲ್ಲಿ ಸಾರ್ವಜನಿಕರಿಗೆ ಅಥವಾ ಸಿಕ್ಕ, ಸಿಕ್ಕವರಿಗೆ ಸಾವಿರ ರೂ.ನಿಂದ 2 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ‌

ಸಿಕ್ಕಿ ಬಿದ್ದಿದ್ದು ಹೇಗೆ?: ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನ.6ರಂದು ಸಂಜೆ ಯಶವಂತಪುರದಿಂದ ಮಹಾಲಕ್ಷ್ಮೀ ಲೇಔಟ್‌ಗೆ ವ್ಯಕ್ತಿಯೊಬ್ಬರು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿ, ಮಹಾಲಕ್ಷ್ಮೀ ಲೇಔಟ್‌ ಬಸ್‌ ನಿಲ್ದಾಣ ದಲ್ಲಿ ಇಳಿದಿದ್ದರು. ಆ ವೇಳೆ ತಮ್ಮ ಮೊಬೈಲ್‌ ಪರಿಶೀಲಿಸಿದಾಗ ಜೇಬಿನಲ್ಲಿ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರಬಹುದೆಂದು ಭಾವಿಸಿ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಭಾತ್ಮಿದಾರರಿಂದ ಖಚಿತ ಮಾಹಿತಿ ಕಲೆಹಾಕಿ ಮಹಾಲಕ್ಷ್ಮೀ ಲೇಔಟ್‌ನ ಸೋಫ್ ಪ್ಯಾಕ್ಟರಿ ಬಳಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next