Advertisement

ನಮ್ಮ  ಮೆಟ್ರೋ ರೀಚ್‌ 4 ಟ್ರ್ಯಾಕ್‌ ಅಳವಡಿಕೆ ಆರಂಭ

06:04 AM Mar 04, 2019 | |

ಬೆಂಗಳೂರು: ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಿಂದ ಅಂಜನಾಪುರ ಟೌನ್‌ಶಿಪ್‌ ನಿಲ್ದಾಣದ ಕಡೆಯ ರೀಚ್‌-4 ಮಾರ್ಗದಲ್ಲಿ ಟ್ರ್ಯಾಕ್‌ ಅಳವಡಿಕೆ ಕಾಮಗಾರಿ ಭಾನುವಾರ ಆರಂಭವಾಗಿದೆ. 6.5 ಕಿ.ಮೀ ಉದ್ದದ ಈ ಮಾರ್ಗದ ಎರಡೂ ಬದಿ ಟ್ರ್ಯಾಕ್‌ಗಳ ಅಳವಡಿಕೆ ಕಾಮಗಾರಿ ಇದಾಗಿದ್ದು, 2019ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

Advertisement

ಬಳಿಕ ಸಿಸ್ಟಮ್‌ ಕೇಬಲ್‌ ಹಾಗೂ ಸಿಗ್ನಲಿಂಗ್‌ ಕಾಮಗಾರಿಗಳು ಆರಂಭವಾಗಲಿದ್ದು, 2020ರಲ್ಲಿ ಮಾರ್ಗವು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದ ಮಾರ್ಗದ ಟ್ರ್ಯಾಕ್‌ ಅಳವಡಿಸುವ ಕಾಮಗಾರಿಯೂ ಇದೇ ತಿಂಗಳು ಆರಂಭವಾಗಲಿದ್ದು, ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next