Advertisement

ಶಿರಾಡಿಯಲ್ಲಿ ಸಂಚಾರ ನಿಷೇಧ: ಕರಾವಳಿಯ ವಾಣಿಜ್ಯ ಚಟುವಟಿಕೆಗಳಿಗೆ ಹೊಡೆತ

01:00 AM Jul 18, 2022 | Team Udayavani |

ಮಂಗಳೂರು: ಪದೇಪದೆ ಶಿರಾಡಿಯಲ್ಲಿ ವಾಹನ ಸಂಚಾರ ಸಮಸ್ಯೆಯಾಗುತ್ತಿರುವುದು ಹಾಗೂ ರಾ. ಹೆದ್ದಾರಿ ಪ್ರಾಧಿಕಾರದವರು ಸೂಕ್ತವಾಗಿ ಈ ಭಾಗವನ್ನು ನಿರ್ವಹಣೆ ಮಾಡದಿರುವುದು ಕರಾವಳಿಯವಾಣಿಜ್ಯ ಚಟುವಟಿಕೆಗೆ ದೊಡ್ಡಹೊಡೆತ ನೀಡುವ ಭೀತಿ ಎದುರಾಗಿದೆ.

Advertisement

ದೋಣಿಗಲ್‌ನಲ್ಲಿ ಈಗಾಗಲೇ ಹೆದ್ದಾರಿ ಕುಸಿದಿದೆ ಎಂಬ ಕಾರಣದಿಂದ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಈ ಭಾಗದ ರಫ್ತು ಹಾಗೂ ಆಮದಿನ ಮೇಲೆ ಪರಿಣಾಮ ಉಂಟಾಗಲಿದೆ, ಅಲ್ಲದೆ ಕೃಷಿ ಸರಕು, ಎಲ್‌ಪಿಜಿ ಸಾಗಾಟಕ್ಕೂ ಸಮಸ್ಯೆಯಾಗಲಿದೆ ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಮುಖ್ಯವಾಗಿ ಒಳನಾಡು ಹಾಗೂ ನವಮಂಗಳೂರು ಬಂದರು ಮಧ್ಯೆ ಸರಕು ಸಾಗಾಟ ಇರುವ ಮಾರ್ಗ ರಾ.ಹೆ. 75 ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡದಿರುವುದರಿಂದ ಮಂಗಳೂರು ಬಂದರಿಗೆ ಸಿಗಬೇಕಾದ ಸರಕು ಬೇರೆ ಬಂದರುಗಳಿಗೆ ಹೋಗುತ್ತಿರುವುದಾಗಿ ಹಿಂದಿನಿಂದಲೂ ಹೇಳಲಾಗಿತ್ತು. ಈಗ ಆಗಿರುವ ಸಮಸ್ಯೆಗೆ ಯಾರನ್ನು ಹೊಣೆ ಮಾಡಬೇಕು ಎಂದು ಕೆಸಿಸಿಐ ಅಧ್ಯಕ್ಷ ಶಶಿಧರ ಪೈ ಮಾರೂರು ಪ್ರಶ್ನಿಸಿದ್ದಾರೆ.

ಬಹಳ ಹಿಂದಿನಿಂದಲೇ ಕೆನರಾ ಚೇಂಬರ್ಸ್‌ ಶಿರಾಡಿ ಘಾಟಿ ಹೆದ್ದಾರಿಯ ದುಃಸ್ಥಿತಿ ಕುರಿತು ಮತ್ತು ಕೈಗೊಳ್ಳಬೇಕಾದ ಕ್ರಮಗಳನ್ನು ಸರಕಾರ, ಸಚಿವರಿಗೆ ಮನವರಿಕೆ ಮಾಡುತ್ತಲೇ ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳದ್ದರಿಂದ ಇಂದು ಇಂತಹ ಸ್ಥಿತಿ ಎದುರಾಗಿದೆ. ಘನವಾಹನಗಳು ಇನ್ನು ಮುಂದೆ ಚಾರ್ಮಾಡಿ ಅಥವಾ ಸಂಪಾಜೆ ಘಾಟಿಯ ಮೂಲಕವೇ ಬರಬೇಕು. ಅವೆರಡೂ ದೀರ್ಘ‌ ಚಾಸೀಸ್‌ನ ಟ್ರೇಲರ್‌ ಟ್ರಕ್‌ಗಳ ಸಂಚಾರಕ್ಕೆ ಸೂಕ್ತವಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next