Advertisement

ಕರ್ನಾಟಕ ಕಲಾದರ್ಶಿನಿ ತಂಡದ ಬಾಲ ಕಲಾವಿದರಿಂದ “ಕನಕಾಂಗಿ ಕಲ್ಯಾಣ”ಯಕ್ಷಗಾನ ಪ್ರದರ್ಶನ

12:41 PM Jan 03, 2023 | Team Udayavani |

ಬೆಂಗಳೂರು; ಕರ್ನಾಟಕ ಕಲಾದರ್ಶಿನಿ‌ ತಂಡದ‌ ಗಿರಿನಗರ ಶಾಖೆಯ ಬಾಲ ಕಲಾವಿದರು ಇತ್ತೀಚೆಗೆ ಗಿರಿನಗರದ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿ ಕನಕಾಂಗಿ ಕಲ್ಯಾಣ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶಿಸಿದ್ದರು.

Advertisement

ಖ್ಯಾತ ಯಕ್ಷ ಗುರುಗಳಾದ ಶ್ರೀನಿವಾಸ ಸಾಸ್ತಾನ ಅವರ ಮಾರ್ಗದರ್ಶನದಲ್ಲಿ ಪೂರ್ವರಂಗ ಮತ್ತು ಯಕ್ಷಗಾನ ಪ್ರಸಂಗವನ್ನು ಮಕ್ಕಳು ನೆರವೇರಿಸಿಕೊಟ್ಟರು.

ಬಾಲ‌ ಕಲಾವಿದರಾಗಿ ಸುಧನ್ವ ಭಟ್, ರಮ್ಯಶ್ರೀ, ರಘುವೀರ್ ಪಾಂಗಣ್ಣಾಯ ಎಸ್.ಬಿ, ಧೃತಿ ಅಮ್ಮೆಂಬಳ, ಅಭಿಶ್ರೀ ಶ್ರೀಹರ್ಷ ಭಟ್ಟ, ಶ್ರೇಯಸ್ ಸರಳಾಯ, ಶ್ರೀವತ್ಸ ಸರಳಾಯ, ಆಯುಷ್ ಎಸ್, ಕೃಷ್ಣ ಭಟ್, ಸಾಯಿ ಪ್ರಣಾಮ್, ಸೃಷ್ಟಿ ಚೇತನ್ ಜಯಂತ, ಕೃತಿ ಅಮ್ಮೆಂಬಳ, ಇಶಾನಿ ಎಸ್, ಶ್ರೇಷ್ಠ ಚೇತನ್ ಜಯಂತ ಭಾಗವಹಿಸಿದ್ದರು.

Advertisement

ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ನಾವಡ, ಮೃದಂಗ ಮತ್ತು ಚಂಡೆವಾದಕರಾಗಿ ರಾಘವೇಂದ್ರ ಬಿಡುವಾಳ, ಸುಬ್ರಹ್ಮಣ್ಯ ಸಾಸ್ತಾನ ಭಾಗವಹಿಸಿದ್ದರು.

ಮಹಾಭಾರತದ ಕಥಾನಕ ಒಂದನ್ನು ಆಧರಿಸಿದ ಈ ಪ್ರಸಂಗದಲ್ಲಿ ಬಲರಾಮನ ಮಗಳು ಕನಕಾಂಗಿಯ ವಿವಾಹದ ಕುರಿತಾಗಿ ಕೌರವನ ಮಗ ಲಕ್ಷಣ ಮತ್ತು‌ ಸುಭದ್ರೆಯ ಮಗ ಅಭಿಮನ್ಯುವಿನ ನಡುವಿನ ಗೊಂದಲದ ಹಾಗೂ ಕೃಷ್ಣನ ಚತುರತೆಯ ವಿನೋದಕರ ಪ್ರಸಂಗವನ್ನು ಮಕ್ಕಳು ಸುಲಲಿತವಾಗಿ ಅಭಿನಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next