Advertisement

Bengaluru: ನಾಯಿಗಳಿಗೆ ಹೊಡೆಯುವುದನ್ನು ಪ್ರಶ್ನಿಸಿದ್ದಕ್ಕೆ ನಿಂದನೆ: ಕೇಸ್‌ ದಾಖಲು

03:18 PM Dec 06, 2024 | Team Udayavani |

ಬೆಂಗಳೂರು: ಬೀದಿ ನಾಯಿಗಳ ಮೇಲೆ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಡಿ.3ರಂದು ಬೆಳಗ್ಗೆ ಇಬ್ಬಲೂರಿನ ಸನ್‌ ಸಿಟಿ ಅಪಾರ್ಟ್‌ಮೆಂಟ್‌ನ ಬ್ಲಾಕ್‌-6 ನೆಲಮಹಡಿ ಹಿಂಭಾ ಗದ ಜಿಮ್‌ ಬಳಿ ಈ ಘಟನೆ ನಡೆದಿದೆ. ಈ ಸಂಬಂಧ ಇಬ್ಬಲೂರು ಸನ್‌ಸಿಟಿ ಅಪಾರ್ಟ್‌ಮೆಂಟ್‌ ನಿವಾಸಿ ಮಿನು ಸಿಂಗ್‌ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ಏನಿದು ಘಟನೆ?: ದೂರುದಾರ ಮಿನು ಸಿಂಗ್‌ ಡಿ.3ರಂದು ಬೆಳಗ್ಗೆ 8.30ಕ್ಕೆ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿದ್ದರು. ಈ ವೇಳೆ ಬೀದಿ ನಾಯಿಗಳು ಚೀರಾಡುವ ಶಬ್ದ ಕೇಳಿಸಿಕೊಂಡು ಹೊರಗೆ ಬಂದಿದ್ದಾರೆ. ಆಗ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿ ಬೀದಿ ನಾಯಿಗಳ ಮೇಲೆ ಹಲ್ಲೆ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಮಿನು ಸಿಂಗ್‌ ಹೀಗೇಕೆ ಮಾಡುತ್ತಿರುವೆ ಎಂದು ಆ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಅಷ್ಟಕ್ಕೆ ಆ ವ್ಯಕ್ತಿ ಅವಾಚ್ಯ ಶಬ್ದಗಳಿಂದ ದೂರುದಾರ ಮಿನು ಸಿಂಗ್‌ಗೆ ನಿಂದಿಸಿಕೊಂಡು ಹತ್ತಿರಕ್ಕೆ ಬಂದಿದ್ದಾನೆ. ಗಾಬರಿಗೊಂಡ ಮಿನುಸಿಂಗ್‌ ಸ್ಥಳೀಯರನ್ನು ಕೂಗಿದಾಗ ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಬೀದಿ ನಾಯಿಗಳ ಮೇಲೆ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನಿಂದಿಸಿದ ಆ ಅಪರಿಚಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಿನು ಸಿಂಗ್‌ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಈ ಸಂಬಧ ಬೆಳ್ಳಂದೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next