ಚಿತ್ತೂರು: ಬೆಂಗಳೂರಿನಿಂದ ಕೋಲ್ಕತ್ತಾಗೆ ಸಂಚರಿಸುತ್ತಿದ್ದ ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾನುವಾರ ಬೆಂಕಿ ಆಕಸ್ಮಿಕ ಸಂಭವಿಸಿದೆ. ರೈಲು ಆಂಧ್ರಪ್ರದೇಶದ ಚಿತ್ತೂರು ತಲುಪುತ್ತಿದ್ದಂತೆ ಎಸ್9 ಎಸಿ ಬೋಗಿಯಲ್ಲಿ ಬೆಂಕಿ ಎದ್ದಿರುವುದು ಲೋಕೋಮೋಟಿವ್ ಪೈಲಟ್‌ನ ಗಮನಕ್ಕೆ ಬಂದಿದೆ.
Advertisement
ಕೂಡಲೇ ಅವರು ಅಲರ್ಟ್ ಸಂದೇಶ ರವಾನಿಸಿದ್ದಾರೆ. ತತ್‌ಕ್ಷಣವೇ ಎಲ್ಲ ಪ್ರಯಾಣಿಕರೂ ರೈಲಿನಿಂದ ಕೆಳಗಿಳಿದ ಕಾರಣ, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಪರಿಶೀಲಿಸಿದಾಗ, ಕೋಚ್ ನಲ್ಲಿ ಬ್ರೇಕ್ ಬ್ಲಾಕ್‌ನ ಘರ್ಷಣೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಯಾವುದೇ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ.