Advertisement

ಹೊಸ ವರ್ಷಕ್ಕೆ ಸೋಪಿನ ಬಾಕ್ಸ್‌ ಗಳಲ್ಲಿ ಡ್ರಗ್ಸ್‌ ಸಂಗ್ರಹ : ಮೂವರು ನೈಜೀರಿಯಾ ಪ್ರಜೆಗಳ ಬಂಧನ

01:24 PM Dec 30, 2021 | Team Udayavani |

ಬೆಂಗಳೂರು : ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿ ನಡೆಯುವ ಪಾರ್ಟಿಗಳಿಗೆ ಪೂರೈಕೆ ಮಾಡಲು ಸೋಪಿನ ಬಾಕ್ಸ್‌ ಗಳಲ್ಲಿ ಮಾದಕ ವಸ್ತುಗಳನ್ನು ಮುಂಬೈನಿಂದ ತಂದು ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿ ಮೂವರು ನೈಜೀರಿಯಾ ಪ್ರಜೆಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Advertisement

ನೈಜೀರಿಯಾದ ಬಸಿಲ್‌ ನಡುಸಿ ಒಕೋನೌ(35), ಇಡೋಜಿ (36) ಮತ್ತು ಚಾರ್ಲ್ಸ್ ಇಜೋ(36) ಬಂಧಿತರು. ಆರೋಪಿಗಳಿಂದ 80 ಲಕ್ಷ ಮೌಲ್ಯದ 400 ಗ್ರಾಂ ಎಂಡಿಎಂಎ, 40 ಗ್ರಾಂ ಕೊಕೇನ್‌, 400 ಗ್ರಾಂ ಹ್ಯಾಶಿಶ್‌ ಹಾಗೂ ಮಾದಕ ವಸ್ತುಗಳನ್ನು ತುಂಬಿದ್ದ 5 ಫಿಯಾಮಾ ಸೋಪ್‌ ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳು ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿ ಒನ್ಜ್ ಬರ್ತ್‌ಲೋವೆ ಎಂಬಾತ ಸೂಚನೆ ಮೇರೆಗೆ ಡ್ರಗ್ಸ್‌ಗಳನ್ನು ಮುಂಬೈನಿಂದ ಸೋಪಿನ ಬಾಕ್ಸ್‌ಗಳಲ್ಲಿ ಇಟ್ಟು ಕೊಂಡು  ನಗರಕ್ಕೆ ತಂದು, ಹೊಸ ವರ್ಷದ ಸಂದರ್ಭದಲ್ಲಿ ನಡೆಯುವ ಪಾರ್ಟಿಗಳಿಗೆ, ವಿದ್ಯಾರ್ಥಿಗಳಿಗೆ, ಐಟಿ ಉದ್ಯೋಗಿಗಳಿಗೆ, ಉದ್ಯಮಿಗಳಿಗೆ ಪ್ರತಿ ಗ್ರಾಂಗೆ 8-10 ಸಾವಿರ ರೂ.ಗೆ ಮಾರಲು
ಮುಂದಾಗಿದ್ದರು.

ಸೋಪಿನ ಬಾಕ್ಸ್‌ಗಳಲ್ಲಿ ಡ್ರಗ್ಸ್‌: ಮುಂಬೈನಿಂದ ಕಡಿಮೆ ಬೆಲೆಗೆ ಡ್ರಗ್ಸ್‌ ಖರೀದಿಸಿ ತಂದಿದ್ದು, ಪೊಲೀಸರ ದಿಕ್ಕು ತಪ್ಪಿಸುವ ಉದ್ದೇಶದಿಂದ ಫಿಯಾಮಾ ಸೋಪ್‌ ಬಾಕ್ಸ್‌ಗಳಲ್ಲಿ ನಗರಕ್ಕೆ
ತಂದು, ಬಾಗಲೂರಿನ ಮನೆಯೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಂಗ್ರಹಿಸಿದ್ದರು. ಈ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಎಸಿಪಿ ಗೌತಮ್‌ ಹಾಗೂ ಇನ್‌ಸ್ಪೆಕ್ಟರ್‌ ವಿರೂಪಾ ಕ್ಷಾಸ್ವಾಮಿ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಇದನ್ನೂ ಓದಿ : ಸಂದೇಶ್ ನೀರುಮಾರ್ಗ ಜೊತೆ ಭಜನೆ ಹಾಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್

Advertisement
Advertisement

Udayavani is now on Telegram. Click here to join our channel and stay updated with the latest news.

Next