Advertisement

ಮದ್ಯದ ಅಮಲಿನಲ್ಲಿ ಪೇಂಟರ್‌ ಕೊಲೆಗೈದ ಆರೋಪಿ ಬಂಧನ

11:37 PM May 08, 2022 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಯುವಕನೊಬ್ಬ ಪೇಂಟರ್‌ಗೆ ಸಿಮೆಂಟ್‌ ಇಟ್ಟಿಗೆಯಿಂದ ಹೊಡೆದು ಕೊಲೆಗೈದಿದ್ದ ಆರೋಪಿಯನ್ನು ಯಲಹಂಕ ನ್ಯೂಟೌನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಯಲಹಂಕದ ಬಾಲ ಅಲಿಯಾಸ್‌  ಬಾಲಕೃಷ್ಣ (19) ಬಂಧಿತ. ಆರೋಪಿ ಏ.25ರಂದು ಯಲಹಂಕ ಅಟ್ಟೂರು ಲೇಔಟ್‌ ನಿವಾಸಿ ರವಿ ಕಿರಣ್‌ (27) ಎಂಬಾತನನ್ನು ಕೊಲೆಗೈದಿದ್ದ ಎಂದು ಪೊಲೀಸರು ಹೇಳಿದರು.

ಯಲಹಂಕದ ನ್ಯೂಟೌನ್‌ನ ಅಟ್ಟೂರು ಲೇಔಟ್‌ನ ರವಿ ಕಿರಣ್‌ ಈ ಹಿಂದೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಒಂದು ವಾರದಿಂದ ಪೇಂಟಿಂಗ್‌ ಕೆಲಸಕ್ಕೆ ಹೋಗುತ್ತಿದ್ದ. ಏ.25ರಂದು ಕೂಡ ಯಲಹಂಕ ಉಪನಗರದ 4ನೇ ಅಪಾರ್ಟ್‌ಮೆಂಟ್‌ನಲ್ಲಿ ಪೇಂಟಿಂಗ್‌ ಕೆಲಸಕ್ಕೆ ಹೋಗಿದ್ದ. ರಾತ್ರಿ 11 ಗಂಟೆಗೆ ವಾಪಸ್‌ ಮನೆಗೆ ಬರುವಾಗ ಅಟ್ಟೂರು ಆಕ್ಸಿಸ್‌ ಬ್ಯಾಂಕ್‌ ಪಕ್ಕದ ರಸ್ತೆಯಲ್ಲಿ ಆರೋಪಿ ಮದ್ಯದ ಅಮಲಿನಲ್ಲಿ ರವಿಕಿರಣ್‌ಗೆ ನಿಂದಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ರವಿಕಿರಣ್‌ಗೆ ಸಿಮೆಂಟ್‌ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಲು ಬಾಲಕೃಷ್ಣ ಯತ್ನಿಸಿದ್ದ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ರವಿಕಿರಣ್‌ ಪತ್ನಿ ಮತ್ತು ಅತ್ತಿಗೆ ಗಾಯಾಳುವನ್ನು ನವಚೇತನಾ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಯಲಹಂಕ ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆಗಿಳಿದು ಪೊಲೀಸರು ಸಿಸಿ ಕ್ಯಾಎರಾ ದೃಶ್ಯಾವಳಿಗಳ ಆಧರಿಸಿ ಆರೋಪಿಯನ್ನು ಬಂಧಿಸಿದ್ದರು.

ಇದನ್ನೂ ಓದಿ : ಬೈಕ್‌ಗೆ ಕಾರು ಢಿಕ್ಕಿ; ಸುರತ್ಕಲ್‌ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸಾವು

ಆದರೆ, ಗಾಯಾಳು ರವಿಕಿರಣ್‌ ಭಾನುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಆರೋಪಿ ವಿರುದ್ಧ ದಾಖಲಿಸಲಾಗಿದ್ದ ಕೊಲೆ ಯತ್ನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next