Advertisement

ಹಗಲಲ್ಲಿ ಹಣ್ಣಿನ ವ್ಯಾಪಾರ, ರಾತ್ರಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

07:18 PM Apr 09, 2021 | Team Udayavani |

ಬೆಂಗಳೂರು: ಹಗಲಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡು, ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ತಂಡ ಸೆರೆ ಹಿಡಿಯುವಲ್ಲಿ ಸಂಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ದಾಸರಹಳ್ಳಿಯ ಶನಿಮಹಾತ್ಮ ದೇವಸ್ಥಾನ ಬಳಿಯ ನಿವಾಸಿ ಮಣಿ ಅಲಿಯಾಸ್‌ ನಾಗಮಣಿ(42), ಶ್ರೀರಾಂಪುರದ ಗೌತಮ್‌ನಗರದ ನಿವಾಸಿಗಳಾದ ಆರುಮುಗಂ(43) ಹಾಗೂ ಪಾಂಡಿಯನ್‌(53) ಬಂಧಿತ ಆರೋಪಿಗಳು.

ಬಂಧಿತರಿಂದ ಸುಮಾರು 15.92 ಲಕ್ಷ ರೂ. ಮೌಲ್ಯದ 316 ಗ್ರಾಂ ತೂಕದ ಚಿನ್ನಾಭರಣ, 200 ಗ್ರಾಂನ ಬೆಳ್ಳಿ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಬ್ಬಿಣದ ರಾಡು ಮತ್ತು ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲರು ತಮಿಳುನಾಡು ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಸಂಜಯನಗರದ ಡಾಲರ್ಸ್‌ ಕಾಲೋನಿ ನಿವಾಸಿ ಶ್ವೇತ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ಈಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾಗ ಮಾರ್ಚ್‌ 29ರಂದು ಬೆಳಗ್ಗೆ 2.30ರ ವೇಳೆ ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರು ಅಪರಿಚಿತರು, ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳನ್ನು ಹಿಡಿದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಲು ಬಂದಿರುವುದಾಗಿ ತಿಳಿಸಿದ್ದರು.

ಇದನ್ನೂ ಓದಿ :ಯತ್ನಾಳ್ ಪಕ್ಷದಿಂದ ಹೊರ ಹಾಕುವಂತಹ ವ್ಯಕ್ತಿ : ಅರುಣ್ ಸಿಂಗ್

Advertisement

ಪ್ರಕರಣದ ಮುಖ್ಯ ಆರೋಪಿ ಪಾಂಡಿಯನ್‌ ವಿರುದ್ಧ ಚೆನ್ನೈನ ಮಡಿಪಾಕಂ ಠಾಣೆ, ಅಣ್ಣಾನಗರ, ಪಳವಂದಾಂಗಲ್‌, ನೀಲಾಕಂ, ಸೈದಾಪೇಟ್‌, ವಿರುಗಂಬಾಕಂ, ಕಣೂ¤ರ್‌, ಪಲ್ಲಿಕರಣೈ ಸೇರಿದಂತೆ ವಿವಿಧ ಠಾಣೆಗಳಲ್ಲಿ 79ಕ್ಕೂ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿವೆ.

ಹಗಲಲ್ಲಿ ಹಣ್ಣಿನ ವ್ಯಾಪಾರ
ಆರೋಪಿಗಳ ಗ್ಯಾಂಗ್‌ ಹಗಲಿನಲ್ಲಿ ಹಗಲಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಪ್ರಕರಣದ ರೂವಾರಿಯಾಗಿದ್ದ ಪಾಂಡಿಯನ್‌, ಮನೆಯಲ್ಲಿ ಯಾರು ಇಲ್ಲದ ಹಾಗೂ ಮನೆಗೆ ಬೀಗ ಹಾಕಿಕೊಂಡು ಊರಿಗಳಿಗೆ ತೆರಳಿದ್ದ ಮನೆಗಳನ್ನು ಗುರುತಿಸುತ್ತಿದ್ದನು. ಬಳಿಕ ಮಣಿ(ನಾಗಮಣಿ)ಗೆ ಮಾಹಿತಿ ನೀಡುತ್ತಿದ್ದನು. ರಾತ್ರಿ ವೇಳೆ ತಮ್ಮ ಗ್ಯಾಂಗ್‌ ಕರೆಸಿಕೊಂಡು ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಣಿ 65 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next