Advertisement

ಪೊಲೀಸ್‌ ಇನ್ಸ್‌ಪೆಕ್ಟರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಆಯುಕ್ತರಿಗೆ ದೂರು ನೀಡಿದ ಮಹಿಳೆ

11:41 AM Jan 20, 2022 | Team Udayavani |

ಬೆಂಗಳೂರು : ನನಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಿಸಿ ಹೆಣ್ಣೂರು ಠಾಣೆಯ ಪೊಲೀಸ್‌ ಇನ್ಸ್‌ ಪೆಕ್ಟರ್‌ ವಸಂತ್‌ಕುಮಾರ್‌ ವಿರುದ್ಧ ಸಂತ್ರಸ್ತೆಯೊಬ್ಬರು ಬುಧವಾರ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರ ಬಳಿ ದೂರು ದಾಖಲಿಸಿದ್ದಾರೆ.

Advertisement

ತನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಇನ್ಸ್‌ಪೆಕ್ಟರ್‌ ಪ್ರಕರಣ ದಾಖಲಿಸಿಕೊಳ್ಳದೆ, ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದಲ್ಲದೇ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಹೆಣ್ಣೂರು ಪೊಲೀಸ್‌ ಇನ್‌ಸ್‌ಪೆಕ್ಟರ್‌ ವಸಂತ್‌ ಕುಮಾರ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತ ಮಹಿಳೆ ಒತ್ತಾಯಿಸಿದ್ದಾರೆ.

ಘಟನೆ ಏನು?: ಬಾಣಸವಾಡಿಯಲ್ಲಿ ವಾಸವಾಗಿರುವ ಮಹಿಳೆ ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಅಕ್ಕ-ತಂಗಿಯರಾದ ಸುಮತಿ – ವರಲಕ್ಷ್ಮಿ ಎಂಬುವರಿಗೆ ಮನೆಯನ್ನು ಭೋಗ್ಯಕ್ಕೆ ನೀಡಿದ್ದರು. ಆದರೆ ಆ ಮನೆಗೆ ಬಂದು 1 ವರ್ಷ ಆದರೂ ನೀರಿನ ಬಿಲ್‌ ಕಟ್ಟಿರಲಿಲ್ಲ. ಇದನ್ನು ಜ.13 ರಂದು ಮಾಲೀಕರಾದ ಮಹಿಳೆಯು ಪ್ರಶ್ನಿಸಿದಾಗ, ಬಾಡಿಗೆದಾರರು ಅವರೊಂದಿಗೆ ಮಾತಿನ ಚಕಮಕಿ ನಡೆಸಿ, ಹಲ್ಲೆ ಸಹ ಮಾಡಿದ್ದಾರೆ. ಇನ್ನು ವರಲಕ್ಷ್ಮಿಪತಿ, ಸಂತ್ರಸ್ತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆಯ
ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೆಣ್ಣೂರು ಪೊಲೀಸ್‌ ಠಾಣೆಗೆ ತೆರಳಿದರೆ, ಇನ್ಸ್‌ಪೆಕ್ಟರ್‌ ವಸಂತ್‌ ಕುಮಾರ್‌ ಪ್ರಕರಣ ದಾಖಲಿಸಿ ಕೊಳ್ಳದೇ ತನ್ನೊಂದಿಗೆ ಅಸಭ್ಯವಾಗಿ ವರ್ತನೆ ತೋರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಚಾಮರಾಜನಗರ: ಜಲಾಶಯದಲ್ಲಿ ಮುಳುಗಿ ಎಸೆಸೆಲ್ಸಿ ವಿದ್ಯಾರ್ಥಿನಿ ಸಾವು

ಮಹಿಳೆ ಹೇಳುವುದೇನು?
ಹಲ್ಲೆ ಪ್ರಕರಣದ ಸಂಬಂಧ ನನ್ನನ್ನು ಠಾಣೆಯ ಚೇಂಬರ್‌ಗೆ ಕರೆಸಿದ ಇನ್‌ಸ್‌ಪೆಕ್ಟರ್‌ ವಸಂತಕುಮಾರ್‌, ನೋಡು ನಿನಗೆ ಎರಡು ಆಯ್ಕೆ ಕೊಡುತ್ತೇನೆ. ಒಂದು ನೀನು ನನಗೆ ಐದು ಲಕ್ಷ
ಹಣ ಕೊಡು, ಇಲ್ಲ ಕರೆದಾಗಲೆಲ್ಲ ನನ್ನ ಜೊತೆಗೆ ಮಲಗಬೇಕು ಎಂಬ ಬೇಡಿಕೆ ಇಟ್ಟಿದ್ದರು ಎಂದು ಮಹಿಳೆ ದೂರಿದ್ದಾಳೆ. ನಾನು ಮರ್ಯಾದಸ್ತ ಕುಟುಂಬದವಳು, ನೀವು ಕೇಸನ್ನು ಹಾಕಿ ಎಂದು ಮಹಿಳೆ ಹೇಳಿದೆ. ಅದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವರ ಜೊತೆ ನಾನೇ ನಿಂತು ಇನ್ನೂ ಹತ್ತು ಕೇಸ್‌ ಹಾಕಿಸುತ್ತೇನೆ ಎಂದು ಮೈಕೈ ಹಿಡಿದು ಎಳೆದಾಡಿ ಎಫ್‌ಐಆರ್‌ ಹಾಕಿದ್ದಾರೆ ಎಂದು ಮಹಿಳೆ ಆರೋಪಿ ಸಿದ್ದಾರೆ.ಬಳಿಕ ಸಂತ್ರಸ್ತೆ ಒಂದು ತಿಂಗಳ ನಂತರ ಬೇಲ್‌ ಮೇಲೆ ಹೊರ ಬಂದಿದ್ದಾರೆ. ಇದಾದ ನಂತರ ಸುಮತಿ ಮತ್ತು ಇತರರನ್ನು ಎತ್ತಿಕಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಕುಮ್ಮಕ್ಕು ನೀಡಿದ್ದಾರೆ. ಈ ಸಂಬಂಧ ಮಹಿಳೆ ವೈದ್ಯಕೀಯ ವರದಿಯೊಂದಿಗೆ ದೂರು ನೀಡಿದರೂ ಸ್ವೀಕರಿಸದೆ ನಿನ್ನ ಮೇಲೆ ಇನ್ನೊಂದು ಅಟ್ರಾಸಿಟಿ
ಪ್ರಕರಣ ಹಾಕಿಸುತ್ತೇನೆ ಎಂದು ಇನ್‌ಸ್‌ಪೆಕ್ಟರ್‌ ಬೆದರಿಸಿದ್ದಾರೆ ಎಂದು ಹೇಳಿದ್ದಾರೆ. ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿ, ನಾನು ಒಪ್ಪದೇ ಇದ್ದಾಗ ಅವರು ಮಾತನಾಡಿದ ಆಡಿಯೋ ಇದ್ದ ನನ್ನ ಮೊಬೈಲ್‌ ಫೋನ್‌ ಒಡೆದು ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಆದರೆ ಮಹಿಳೆಯ ಆರೋಪವನ್ನು ಇನ್‌ ಸ್ಪೆಕ್ಟರ್‌ ವಸಂತ್‌ ಕಮಾರ್‌ ತಳ್ಳಿಹಾಕಿದ್ದಾರೆ. ಮಹಿಳೆಯ ಜತೆಗೆ ನಾನು ಅನುಚಿತವಾಗಿ ವರ್ತಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next