ಬೆಂಗಳೂರು: ಆರಂಭದ ಜಿದ್ದಾಜಿದ್ದಿ ಸ್ಪರ್ಧೆಯ ಬಳಿಕ ಬೆಂಗಾಲ್ ವಾರಿಯರ್ನ ರಭಸದ ಆಟಕ್ಕೆ ತಲೆಬಾಗಿದ ಆತಿಥೇಯ ಬೆಂಗಳೂರು ಬುಲ್ಸ್, ಪ್ರೊ ಕಬಡ್ಡಿ ಸೀಸನ್-9ರಲ್ಲಿ ಮೊದಲ ಸೋಲನುಭವಿಸಿದೆ. ಬುಧವಾರದ ಪಂದ್ಯದಲ್ಲಿ ಬುಲ್ಸ್ 33-42 ಅಂತರದ ಆಘಾತಕ್ಕೊಳಗಾಯಿತು. ಮೊದಲೆರಡು ಪಂದ್ಯಗಳಲ್ಲಿ ಟೈಟಾನ್ಸ್ ಮತ್ತು ಪುಣೇರಿ ವಿರುದ್ಧ ಬುಲ್ಸ್ ಜಯ ಸಾಧಿಸಿತ್ತು.
ಮೊದಲಾರ್ಧದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿ ಸ್ಪರ್ಧೆಗೆ ಇಳಿದವು. ಬೆಂಗಾಲ್ ವಾರಿಯರ್ಗೆ ಪಂದ್ಯಕ್ಕೆ ಮರಳಲು ಬುಲ್ಸ್ ಅಲ್ಲಲ್ಲಿ ಹಾದಿಯನ್ನು ಕಲ್ಪಿಸುತ್ತ ಬಂತು. ವಿರಾಮದ ವೇಳೆ ಬುಲ್ಸ್ 14-13 ಅಂತರದ ಸಣ್ಣದೊಂದು ಮುನ್ನಡೆ ಸಾಧಿಸಿತ್ತು.
ಬ್ರೇಕ್ ಬಳಿಕ ಬೆಂಗಾಲ್ ಬಿರುಸಿನ ಪ್ರದರ್ಶನ ನೀಡತೊಡಗಿತು. ಬುಲ್ಸ್‌ಗೆ ಮುನ್ನುಗ್ಗಿ ಬರಲು ಸಾಧ್ಯವಾಗಲಿಲ್ಲ. ಬೆಂಗಾಲ್ ಪರ ರೈಡರ್ ಮಣಿಂದರ್ ಸಿಂಗ್ ಕಪ್ತಾನನ ಆಟದ ಮೂಲಕ ತಂಡದ ಆಪತಾºಂಧವನಾಗಿ ಗೋಚರಿಸಿದರು. ಮಣಿಂದರ್ 11 ಅಂಕ, ಮತ್ತೋರ್ವ ರೈಡರ್ ಶ್ರೀಕಾಂತ್ ಜಾಧವ್ 6 ಅಂಕ, ಡಿಫೆಂಡರ್ ಗಿರೀಶ್ ಮಾರುತಿ 5 ಅಂಕ, ವೈಭವ್ ಗರ್ಜೆ 4 ಅಂಕ ಗಳಿಸಿದರು.
ಬುಲ್ಸ್ ತಂಡದ ರೈಡರ್‌ಗಳಾದ ಭರತ್ (8 ಅಂಕ) ಮತ್ತು ವಿಕಾಸ್ ಕಂಡೋಲ (7 ಅಂಕ) ಗಮನಾರ್ಹ ಪ್ರದರ್ಶನವಿತ್ತರು.
ಡೆಲ್ಲಿಗೆ ರೋಚಕ ಜಯ
ದಿನದ ಇನ್ನೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ 44-42 ಅಂತರ ದಿಂದ ಯುಪಿ ಯೋಧಾಸ್‌ಗೆ ಸೋಲುಣಿಸಿತು.