Advertisement

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

04:22 PM Oct 05, 2024 | Team Udayavani |

ಬೆಂಗಳೂರು: ಕೆಎಸ್‌ಆರ್‌ಟಿಸಿ ದಸರಾ ಹಬ್ಬದ ಅಂಗವಾಗಿ ಅ. 9ರಿಂದ 12ರವರೆಗೆ ರಾಜ್ಯ ಹಾಗೂ ಅ.13ರಿಂದ 14ರ ವರೆಗೆ ಹೊರ ರಾಜ್ಯದ ಹಲವು ಸ್ಥಳಗಳಿಗೆ ಹೆಚ್ಚುವರಿಯಾಗಿ 2000 ಬಸ್‌ಗಳನ್ನು ನಿಗದಿಮಾಡಿದೆ.

Advertisement

ಪ್ರಸ್ತುತ ಸಾರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಸ್‌ಗಳ ಜತೆಯಾಗಿ ಹೆಚ್ಚುವರಿ ಬಸ್‌ ಕಾರ್ಯನಿರ್ವಹಿಸಲಿದೆ. ಮೈಸೂರು ದಸರಾ ಅಂಗವಾಗಿ ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಲು 400 ಹೆಚ್ಚುವರಿ ವಾಹನಗಳು ಸೇರಿ ಒಟ್ಟಾರೆ 660 ದಸರಾ ವಿಶೇಷ ವಾಹನಗಳನ್ನು ನಿಯೋಜಿಸಿದೆ.

ದಸರಾ ರಜೆ ಪ್ರಯುಕ್ತ 2000ಕ್ಕೂ ಹೆಚ್ಚು ವಿಶೇಷ ಬಸ್‌: ಸಾರ್ವಜನಿಕರ ಅನುಕೂಲಕ್ಕಾಗಿ ಅ.9ರಿಂದ ಅ.12ರವರೆಗೆ ಬೆಂಗಳೂರಿನಿಂದ ವಿವಿಧ ಭಾಗಗಳನ್ನು ಸಂಪರ್ಕಿಸಲು 2000ಕ್ಕೂ ಹೆಚ್ಚು ವಿಶೇಷ ಬಸ್‌ ನಿಗದಿ ಮಾಡಿದೆ.

ವಿಶೇಷ ಪ್ಯಾಕೇಜ್‌ ಸೌಲಭ್ಯ: ಬೆಂಗಳೂರು- ಮೈಸೂರಿಗೆ 260 ಹೆಚ್ಚುವರಿ ವಾಹನಗಳ ಜತೆಗೆ ಮೈಸೂರಿನ ಸುತ್ತಲಿನ ಪ್ರವಾಸಿ ತಾಣಗಳಿಗೆ 400 ಹೆಚ್ಚುವರಿ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಇದರೊಂದಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ “ಫ್ಲೇಯ್‌ ಬಸ್‌” ಮೂಲಕ ನೇರ ಸಾರಿಗೆ ಸೌಲಭ್ಯವೂ ಇರಲಿದೆ. ಇ-ಟಿಕೆಟ್‌ ಬುಕಿಂಗ್‌ನ್ನು https://www.ksrtc.karnataka.gov.in/ ವೆಬ್‌ಸೈಟ್‌ ಮೂಲಕ ಕಾಯ್ದಿರಿಸಬಹುದಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ ಹಾಗೂ ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next