Advertisement

ಪ.ಬಂಗಾಲದ ವಿವಿಗಳಿಗಿನ್ನು ಸಿಎಂ ಕುಲಪತಿ

09:10 AM May 27, 2022 | Team Udayavani |

ಕೋಲ್ಕತ:  ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರನ್ನು ಕುಲಪತಿಯಾಗಿಸುವ ಬದಲು ಮುಖ್ಯಮಂತ್ರಿಯನ್ನೇ ಕುಲಪತಿಯಾಗಿ ನೇಮಿಸುವ ಪ್ರಸ್ತಾವನೆಯನ್ನು ಮಮತಾ ಬ್ಯಾನರ್ಜಿ ಅವರ ಸಂಪುಟ ಮಾಡಿದೆ.

Advertisement

ಗುರುವಾರ ಕೋಲ್ಕತದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಅದರಲ್ಲಿ ಈ ಪ್ರಸ್ತಾವನೆ ಮಾಡಲಾಗಿದೆ. “ಮುಖ್ಯಮಂತ್ರಿಯನ್ನೇ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿಸುವ ಪ್ರಸ್ತಾವನೆಯನ್ನು ಶೀಘ್ರವೇ ವಿಧಾನಸಭೆಯಲ್ಲಿ ಮಸೂದೆ ರೂಪದಲ್ಲಿ ಮಂಡಿಸಲಾಗುವುದು’ ಎಂದು ರಾಜ್ಯ ಶಿಕ್ಷಣ ಸಚಿವ ಬ್ರಾತ್ಯ ಬಸು ತಿಳಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರಾಗಿರುವ ಜಗದೀಪ್‌ ಧಂಖರ್‌ ಅವರು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಪಶ್ಚಿಮ ಬಂಗಾಳದಲ್ಲಿ ಒಟ್ಟು 17 ವಿಶ್ವವಿದ್ಯಾಲಯಗಳು ರಾಜ್ಯ ಸರ್ಕಾರದ ಅಧೀನದಲ್ಲಿವೆ.

ಈ ಹಿಂದೆ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವರಾಗಿರುವ ಕೆ.ಪೊನ್ಮುಡಿ ಅವರು ಇಂಥದ್ದೇ ಪ್ರಸ್ತಾಪ ಮಾಡಿದ್ದರು. “ರಾಜ್ಯಪಾಲರು ನೇಮಕವಾದವರು. ಆದರೆ ಸಿಎಂ ಆಯ್ಕೆಯಾದವರು. ಹಾಗಾಗಿ ಕುಲಪತಿ ಸ್ಥಾನ ಮುಖ್ಯಮಂತ್ರಿಗೇ ಸೇರಬೇಕು’ ಎಂದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next