Advertisement

ಆರೋಗ್ಯದ ಮೇಲೆ ದುಷ್ಪರಿಣಾಮ: ಹುಕ್ಕಾ ಬಾರ್‌ಗಳಿಗೆ ನಿಷೇಧ ಹೇರಿದ ಸರ್ಕಾರ

10:01 AM Dec 03, 2022 | Team Udayavani |

ಪಶ್ಚಿಮ ಬಂಗಾಳ:  ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆನ್ನುವ ಉದ್ದೇಶದಿಂದ ಪಶ್ಚಿಮ ಬಂಗಾಳದಲ್ಲಿನ ಹುಕ್ಕಾ ಬಾರ್ ರೆಸ್ಟೋರೆಂಟ್ ಗಳನ್ನು ನಿಷೇಧಿಸಲಾಗಿದೆ ಎಂದು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ನ ಮೇಯರ್‌ ಫಿರ್ಹಾದ್ ಹಕೀಮ್ ಶುಕ್ರವಾರ ( ಡಿ.2 ರಂದು) ಹೇಳಿದ್ದಾರೆ.

Advertisement

ಈ ಕುರಿತು ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, “ ಹುಕ್ಕಾ ಬಾರ್‌ ಗಳನ್ನು ಮುಚ್ಚುವಂತೆ ನಾವು ಮನವಿ ಮಾಡಿದ್ದೇವೆ. ಯುವ ಜನರು ವ್ಯಸನಿಯಾಗುವಂತೆ ಹುಕ್ಕಾಗಳಲ್ಲಿ ಕೆಲವೊಂದು ಆಮಲು ಪದಾರ್ಥಗಳನ್ನು ಬಳಸಲಾಗುತ್ತಿದೆ. ಹುಕ್ಕಾಗಳಿಗೆ ಬಳಸುವ ಕೆಲ ಕೆಮಿಕಲ್ಸ್‌ ಗಳು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಈಗಾಗಲೇ ಈ ಬಗ್ಗೆ ಹಲವು ದೂರುಗಳು ಕೇಳಿ ಬಂದಿವೆ. ಈ ಕಾರಣದಿಂದ ನಾವು ಹುಕ್ಕಾ ರೆಸ್ಟೋರೆಂಟ್‌ ಗಳನ್ನು ನಿಷೇಧಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಇನ್ಮುಂದೆ ನಗರದಲ್ಲಿ ಇಂತಹ ಹುಕ್ಕಾ ಬಾರ್ ರೆಸ್ಟೋರೆಂಟ್‌ ಗಳನ್ನು ನಡೆಸಿದರೆ ಅದರ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ. ನಾವು ಮತ್ತೆ ಹೊಸ ಪರವಾನಗಿಯನ್ನು ನೀಡುವುದಿಲ್ಲ. ನಿಷೇಧವನ್ನು ಜಾರಿಗೊಳಿಸಲು ನಾವು ಪೊಲೀಸರ ನೆರವನ್ನು ಪಡೆಯಲಿದ್ದೇವೆ  ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next