ಕೋಲ್ಕತಾ: ಪಶ್ಚಿಮ ಬಂಗಾಳದ ಏಕೈಕ ಕಾಂಗ್ರೆಸ್ ಶಾಸಕ ಬೇರೋನ್ ಬಿಸ್ವಾಸ್ ಅವರು ಸೋಮವಾರ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವನ್ನು ವಿರೋಧಿಸಬೇಕೇ ಅಥವಾ ಕೇಂದ್ರದಲ್ಲಿ ಬಿಜೆಪಿಯನ್ನು ವಿರೋಧಿಸಬೇಕೇ ಎಂಬುದನ್ನು ಕಾಂಗ್ರೆಸ್ ನಿರ್ಧರಿಸಬೇಕು ಎಂದು ಬ್ಯಾನರ್ಜಿ ಹೇಳಿದರು.
ಅಲ್ಪಸಂಖ್ಯಾತರ ಪ್ರಾಬಲ್ಯದ ಕ್ಷೇತ್ರ ಸಾಗರ್ದಿಘಿ ಉಪಚುನಾವಣೆಯಲ್ಲಿ ಗೆದ್ದ ಸುಮಾರು ಮೂರು ತಿಂಗಳ ನಂತರ ಬಿಸ್ವಾಸ್ ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಘಟಾಲ್ ಪ್ರದೇಶದಲ್ಲಿ ತೃಣಮೂಲ ಪಾಳಯಕ್ಕೆ ಸೇರಿದರು. ನನ್ನ ಗೆಲುವಿನಲ್ಲಿ ಕಾಂಗ್ರೆಸ್ ನ ಯಾವುದೇ ಪಾತ್ರವಿಲ್ಲ” ಎಂದು ಹೇಳಿ ಪಕ್ಷಕ್ಕೆ ಶಾಕ್ ನೀಡಿದರು.
ಸಾಗರ್ದಿಘಿ ವಿಧಾನಸಭಾ ಭಾಗದಲ್ಲಿ ಕಾಂಗ್ರೆಸ್‌ನ ಸಂಘಟನೆ ಅಷ್ಟೊಂದು ಬಲಿಷ್ಠವಾಗಿದ್ದರೆ 2021ರಲ್ಲಿ ಆ ಸ್ಥಾನವನ್ನು ಪಕ್ಷ ಗೆಲ್ಲುತ್ತಿತ್ತು. ಆದರೆ ಅದು ಆಗಲಿಲ್ಲ. ನನ್ನ ಪರವಾದ ಮತದಾರರ ಒಲವಿನಿಂದಲೇ ನಾನು ಆ ಸ್ಥಾನವನ್ನು ಗೆದ್ದಿದ್ದೇನೆ. ಕೇಸರಿ ಪಾಳೆಯದ ವಿರುದ್ಧ ಹೋರಾಡಲು ಬಂಗಾಳದಲ್ಲಿ ಕಾಂಗ್ರೆಸ್ ವಿಮುಖವಾಗಿದೆ ಎಂದು ಹೇಳಿದರು.