ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಪೂರ್ವ ಮಿಡ್ನಾಪುರ ಜಿಲ್ಲೆಯ ಎಗ್ರಾಗೆ ಭೇಟಿ ನೀಡಿದ್ದಾರೆ ಈ ವೇಳೆ ಮೇ 16 ರಂದು ಖಾದಿಕುಲ್ ಗ್ರಾಮದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 10 ಮಂದಿ ಸದಸ್ಯರನ್ನು ಕಳೆದುಕೊಂಡ ಕುಟುಂಬದವರಲ್ಲಿ ಕ್ಷಮೆಯಾಚಿಸಿದರು.
ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರದ ಚೆಕ್ ನೀಡಿ ಮಾತನಾಡಿದ ಅವರು ಇಂತಹ ಅಕ್ರಮ ಕಾರ್ಖಾನೆಗಳ ಕುರಿತು ಅಧಿಕಾರಿಗಳು ಮೊದಲೇ ಎಚ್ಚೆತ್ತುಕೊಳ್ಳುತಿದ್ದರೆ ಇಂತಹ ದುರ್ಘಟನೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ ಅಕ್ರಮ ಪಟಾಕಿ ಕಾರ್ಖಾನೆಯಿಂದಾಗಿ ಹಲವು ಜೀವಗಳನ್ನು ಇಂದು ನಾವು ಕಳೆದುಕೊಳ್ಳಬೇಕಾಯಿತು ಎಂದು ಜನರ ಬಳಿ ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಕಾರ್ಖಾನೆಗಳು ತಲೆ ಎತ್ತಿದ್ದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು.
ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಮೃತಪಟ್ಟ ಕುಟುಂಬಕ್ಕೆ 2.5 ಲಕ್ಷ ರೂ. ಚೆಕ್ ನೀಡಿದ ಅವರು ಕುಟುಂಬ ಓರ್ವ ಸದಸ್ಯನಿಗೆ ಗೃಹರಕ್ಷಕ ದಳದಲ್ಲಿ ನೌಕರಿ ನೀಡುವ ಭರವಸೆ ನೀಡಿದರು.
Related Articles
ಘಟನೆಯಲ್ಲಿ ಕಾರ್ಖಾನೆ ಮಾಲೀಕ ಸೇರಿ ಒಟ್ಟು ಹತ್ತು ಮಂದಿ ಮೃತಪಟ್ಟಿದ್ದು ಪ್ರಕರಣಕ್ಕೆ ಸಂಬಂಧಿಸಿ ಮಾಲೀಕನ ಪತ್ನಿ ಹಾಗೂ ಸೋದರಳಿಯನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಗೃಹ ಇಲಾಖೆಯ ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿ, ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಕಡತ ವಿಲೇವಾರಿ ವಿಳಂಬ: ಹೆಬ್ರಿ ತಾ| ಕಚೇರಿಗೆ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಭೇಟಿ