Advertisement
ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಮಿಳಾ ಗೋಸ್ವಾಮಿ ಅವರ ಪರ್ಸ್ ಮತ್ತು ಕಾರಿನ ಸೀಟಿನಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಕೊಕೇನ್ ಪತ್ತೆಯಾದ ಹಿನ್ನಲೆಯಲ್ಲಿ ಪಮೇಲಾ ಅವರನ್ನು ಪೋಲಿಸರು ಬಂಧಿಸಿದ್ದರು.
Related Articles
Advertisement
ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲೇಬೇಕು. ರಾಕೇಶ್ ಸಿಂಗ್ ಡ್ರಗ್ಸ್ ಪ್ರಕರಣದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ ಎಂದು ಪಮೇಲಾ ಆರೋಪಿಸಿದ್ದಾರೆ.
ಪಮೇಲಾ ಗೋಸ್ವಾಮಿ ತಮ್ಮೊಂದಿಗೆ 100 ಗ್ರಾಮ್ ತೂಕದ ಕೊಕೇನ್ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಆರೋಪದ ಮೇಲೆ ಪಮೇಲಾ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಓದಿ : ಪೊಗರು ಮೊದಲ ದಿನದ ಕಲೆಕ್ಷನ್ 10.05 ಕೋಟಿ ರೂ.!
“ಕಾನೂನು ಈ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳುತ್ತದೆ. ಪ್ರಮಿಳಾ ಅವರ ಪರ್ಸ್ ನಲ್ಲಿ ಕೊಕೇನ್ ನ್ನು ಯಾರೋ ಇಟ್ಟಿದ್ದಾರೆ ಎನ್ನುವ ಸಂಶಯವಾಗುತ್ತಿದೆ. ತನಿಖೆ ನಡೆಸಬೇಕಾಗಿದೆ. ಎಷ್ಟಿದ್ದರೂ ಪೊಲೀಸರು ರಾಜ್ಯ ಸರ್ಕಾರದ ಅಡಿಯಲ್ಲಿದೆ. ಪ್ರಕರಣ ಯಾವ ದಿಕ್ಕಿಗೂ ಕೂಡ ತಿರುಗಬಹುದು” ಎಂದು ಬಿಜೆಪಿಯ ನಾಯಕ ಸಮೀಕ್ ಭಟ್ಟಾಚಾರ್ಯ ಹೇಳಿದ್ದಾರೆ.
ಇನ್ನು, “ ಬಂಗಾಳದಲ್ಲಿ ಈ ರೀತಿಯ ಘಟನೆ ಸಂಭವಿಸುತ್ತಿರುವುದು ನಾಚಿಕೆಯ ಸಂಗತಿ, ಬಿಜೆಪಿಯವರ ಅಸಲಿ ಮುಖ ಬಯಲಾಗುತ್ತಿದೆ. ಈ ಹಿಂದೆ ಒಬ್ಬ ಬಿಜೆಪಿ ನಾಯಕನ ಹೆಸರು ಮಕ್ಕಳ ಕಳ್ಳಸಾಗಾಣೆಯಲ್ಲೂ ಕೇಳಿ ಬಂದಿತ್ತು” ಎಂದು ತೃಣಮೂಲ ಕಾಂಗ್ರೆಸ್ ನ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಪ್ರತಿಕ್ರಿಯಿಸಿದ್ದಾರೆ.
“ಪಮೇಲಾ ಗೋಸ್ವಾಮಿ ಹಾಗೂ ಪ್ರಬೀರ್ ಪದೇ ಪದೇ ಒಂಉ ನಿರ್ದಿಷ್ಟ ಕೆಫೆಗೆ ಭೇಟಿ ನೀಡುತ್ತಿರುವುದು ಹಾಗೂ ಬೈಕಿನಲ್ಲಿ ಬರುವ ಯುವಕರೊಂದಿಗೆ ವಹಿವಾಟು ನಡೆಸುತ್ತಿರುವುದು ಹಲವು ಭಾರಿ ಕಂಡುಬಂದಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗೋಸ್ವಾಮಿ ಅವರು 2019 ರಲ್ಲಿ ಬಿಜೆಪಿಗೆ ಸೇರುವ ಮೊದಲು, ಏರ್ ಹೊಸ್ಟೆಸ್, ಮಾಡೆಲ್ ಮತ್ತು ಟಿವಿ ಧಾರಾವಾಹಿ ನಟಿಯಾಗಿ ಕೆಲಸ ಮಾಡಿದ್ದಾರೆಂದು ತಿಳಿದುಬಂದಿದ್ದು, ನಂತರ ಅವರನ್ನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಹೂಗ್ಲಿ ಜಿಲ್ಲೆಯ ಯುವ ಮೋರ್ಚಾ ವೀಕ್ಷಕರಾಗಿ ನೇಮಿಸಲಾಯಿತು ಎಂದು ವರದಿಯಾಗಿದೆ.
ಪಮೇಲಾ, ಹಲವು ಬಿಜೆಪಿ ಪ್ರಮುಖ ನಾಯಕರೊಂದಿಗೆ ತೆಗೆಸಿಕೊಂಡ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಓದಿ : ಪ್ರಿಯಾಂಕ ಗಾಂಧಿ ವಾದ್ರಾ ಇಂದು ಪ್ರಯಾಗ್ ರಾಜ್ ಗೆ ಭೇಟಿ..!