ಅನಾರೋಗ್ಯ ಅಂದುಕೊಂಡು ಆಸ್ಪತ್ರೆಗೆ ಹೋಗುತ್ತೀರಿ ಅಂದುಕೊಳ್ಳಿ. ಡಾಕ್ಟರ್ ಮಾತ್ರೆ ಬರೆದುಕೊಟ್ಟ ನಂತರ ಸಹಜವಾಗಿಯೇ ಕೇಳುತ್ತೀರಿ: “ಡಾಕ್ಟ್ರೇ,ಊಟ ಏನು ತಗೋಬೇಕು?’. ಡಾಕ್ಟರ್ ಸಹಜವಾಗಿಯೇ ಹೇಳುತ್ತಾರೆ: “ಸೊಪ್ಪು, ಮೊಟ್ಟೆ, ಮೀನು, ತರಕಾರಿ ತಿನ್ನಿ. ಸೇಬು,ಕಿತ್ತಳೆ ಹಣ್ಣು ಜಾಸ್ತಿ ತಿನ್ನಿ. ಅದರಲ್ಲೂ ಕಿತ್ತಳೆ ಹಣ್ಣು, ಆರೋಗ್ಯಕ್ಕೆ ತುಂಬಾ ಒಳ್ಳೆಯದು… ‘
ಹೆಸ್ಪೆರೆಡಿಯಮ್ ಎಂಬ ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರಿದ್ದುಕಿತ್ತಳೆ. ಸ್ವಲ್ಪ ಹುಳಿ ಇರುತ್ತದೆ ಎಂಬ ಒಂದುಕಾರಣಕ್ಕೆ, ಪ್ರತಿ ತೊಳೆಯನ್ನೂ ಬಿಡಿಸಿಕೊಂಡು ತಿನ್ನಬೇಕು ಎಂಬ ಇನ್ನೊಂದುಕಾರಣಕ್ಕೆ, ಹೆಚ್ಚಿನವರು ಈ ಹಣ್ಣು ತಿನ್ನಲು ಇಚ್ಛಿಸುವುದಿಲ್ಲ. ಹಾಗೆ ಮಾಡಿದರೆ ಅದರಿಂದ ನಮಗೇ ನಷ್ಟ. ಏಕೆಂದರೆ,ಕಿತ್ತಳೆ ಹಣ್ಣಿನಲ್ಲಿ ಥಯಾಮಿನ್, ರಿಬೋಫ್ಲವಿನ್, ನಿಯಾಸಿನ್, ವಿಟಮಿನ್ ಬಿ -6, ಫೊಲೇಟ್, ಪ್ಯಾಂಟೊಥೆನಿಕ್ ಆಮ್ಲ, ರಂಜಕ, ಮೆಗ್ನೀಶಿಯಮ್, ಮ್ಯಾಂಗನೀಸ್, ಸೆಲೆನಿಯಮ್ ಮತ್ತು ತಾಮ್ರದ ಅಂಶ ಹೆಚ್ಚಾಗಿ ಇರುತ್ತದೆ.
ಅದರಲ್ಲೂ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ರೋಗನಿರೋಧಕ ಅಂಶಗಳಕಾರಣದಿಂದ ದೇಹಕ್ಕೆ ಹೆಚ್ಚು ಶಕ್ತಿ ಸಿಗಲಿ ಎಂಬ ಉದ್ದೇಶದಿಂದಲೇ ವೈದ್ಯರುಕಿತ್ತಳೆ ಹಣ್ಣು ತಿನ್ನಿ ಎನ್ನುವುದು.ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಎ, ಸಿ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳುಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಹಣ್ಣು ನಾರಿನ ಉತ್ತಮ ಮೂಲವಾಗಿದ್ದು, ಹೊಟ್ಟೆ ಮತ್ತುಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಫೈಬರ್ ಸಮೃದ್ಧವಾಗಿರುವಕಿತ್ತಳೆಯು, ಹೊಟ್ಟೆಯ ಹುಣ್ಣು ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಹಿಂಡಿದಾಗ ಬರುವ ರಸವನ್ನು ಲೇಪಿಸಿಕೊಂಡರೆ ಚರ್ಮದ ಹೊಳಪು ಹೆಚ್ಚುತ್ತದೆ. ಮೊಡವೆಗಳು ನಾಶವಾಗುತ್ತವೆ.ಚರ್ಮ ಸುಕ್ಕುಗಟ್ಟುವುದೂ ಕಡಿಮೆಯಾಗುತ್ತದೆ. ಇವೆಲ್ಲಕಾರಣದಿಂದಕಿತ್ತಳೆಯನ್ನು ರೋಗ ನಿರೋಧಕ ಶಕ್ತಿಯ ಆಗರ ಎನ್ನುವುದುಂಟು.
ಸಾವಿತ್ರಿ ಶ್ಯಾನುಭಾಗ