Advertisement
ಪ್ರತಿದಿನ ವಾಕ್ ಮಾಡುವುದರಿಂದ ಆರೋಗ್ಯದ ಲಾಭಗಳನ್ನು ಹೆಚ್ಚು ಪಡೆದುಕೊಳ್ಳಬಹುದು. ವಾಕ್ ಮಾಡುವುದರಿಂದ ಆಗುವ ಅದ್ಭುತ ಪ್ರಯೋಜನಗಳನ್ನು ತಿಳಿದುಕೊಳ್ಳೋಣ
ಸೋಂಕುಗಳು ಅಥವಾ ಯಾವುದೇ ರೋಗಗಳನ್ನು ತಡೆಗಟ್ಟಲು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಎಲ್ಲಾ ಸಮಯದಲ್ಲೂ ಸರಿಯಾಗಿ ಕಾರ್ಯನಿರ್ವಹಿಸಬೇಕು. ರೋಗನಿರೋಧಕ ಶಕ್ತಿ ಹೆಚ್ಚಬೇಕೆಂದರೆ ವಾಕಿಂಗ್ ಮಾಡಲೇಬೇಕು. ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ರೋಗನಿರೋಧಕ ಹೆಚ್ಚುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಕಡಿವಾಣ
ವಾಕಿಂಗ್ ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಹೃದಯ ಮತ್ತು ಹೃದಯ ರಕ್ತನಾಳದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಆದ್ದರಿಂದ ಹೃದ್ರೋಗ, ಹೃದಯರಕ್ತನಾಳದ ಕಾಯಿಲೆ ಮತ್ತು ಪಾರ್ಶ್ವವಾಯುಗಳನ್ನು ಹತೋಟಿಯಲ್ಲಿಡಲು ವಾಕ್ ಸಹಾಯಕ .
Related Articles
ತೂಕ ಇಳಿಸಿಕೊಳ್ಳುವವರಿಗೆ ವಾಕಿಂಗ್ ಉತ್ತಮ ವ್ಯಾಯಾಮ.
Advertisement
ಬುದ್ಧಿವಂತಿಕೆ ಹೆಚ್ಚಿಸುತ್ತದೆವಾಕಿಂಗ್ ನಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಮೆದುಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಮತ್ತು ಗ್ಲೂಕೋಸ್ ಪೂರೈಕೆಯಾಗಿ, ಅಪಧಮನಿಗಳನ್ನು ಮುಚ್ಚುವ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ.
ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳುತ್ತವೆ. ಆದರೆ ನಿಯಮಿತವಾಗಿ ವಾಕ್ ಮಾಡುವ ಮೂಲಕ ಎಲುಬುಗಳನ್ನು ಬಲಪಡಿಸಬಹುದು. ಈ ವ್ಯಾಯಾಮವು ಮೂಳೆ ಸಾಂದ್ರತೆಯ ನಷ್ಟವನ್ನು ತಡೆಯುತ್ತದೆ. ಸ್ನಾಯುಗಳು ಬಲಗೊಳ್ಳಲು
ವಯಸ್ಸಾದಂತೆ ಮೂಳೆಗಳ ಜೊತೆಗೆ ಸ್ನಾಯುಗಳ ಬಲ ಕಡಿಮೆಯಾಗುತ್ತದೆ. ವಾಕಿಂಗ್ ಮಾಡಿದರೆ ಸ್ನಾಯುಗಳನ್ನು ಬಲಗೊಳ್ಳುತ್ತವೆ. ನಿಯಮಿತವಾಗಿ ನಡೆಯುವುದರಿಂದ ಕಾಲು ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸಬಹುದು. ದೈಹಿಕ ಪರಿಶ್ರಮ/ವ್ಯಾಯಾಮ
ನಮ್ಮ ಶರೀರವನ್ನು ಸ್ವಸ್ಥವಾಗಿರಿಸಲು ಬೇಕಾದ ಪ್ರಮಾಣದಲ್ಲಿ ವ್ಯಾಯಾಮವನ್ನು ಪ್ರತಿದಿನವೂ ಪಡೆದ೦ತಾಗುತ್ತದೆ. ಸಮರ್ಪಕವಾದ ನಡಿಗೆಯ ಕ್ರಮವನ್ನನುಸರಿಸಿ 30 ರಿ೦ದ 60 ನಿಮಿಷಗಳವರೆಗೆ ನಡೆದರೂ ಸಾಕು. ಸ೦ಜೆಯ ಅಥವಾ ಬೆಳಗಿನ ನಡಿಗೆಯು ಒ೦ದು ಅತ್ಯುತ್ತಮವಾದ ಉಲ್ಲಾಸದಾಯಕ ಚಟುವಟಿಕೆಯಾಗಿದ್ದು, ಇದು ನಮ್ಮ ಮನಸ್ಸನ್ನು ಎಲ್ಲಾ ತೆರನಾದ ಒತ್ತಡದಿ೦ದ ಕೂಡಿದ ಚಿ೦ತೆಗಳಿ೦ದ ಮುಕ್ತಗೊಳಿಸುತ್ತದೆ.
ಮಧುಮೇಹದಿಂದ ಬಳಲುತ್ತಿರುವವರು ನಿಯಮಿತ ನಡಿಗೆಯು ಬಿ.ಎಮ್.ಐ.(Body and Mass Index) ಮಟ್ಟವನ್ನು ಸುಧಾರಿಸಲು ಸಹಾಯಮಾಡುತ್ತದೆ ಮತ್ತು ದೇಹದಲ್ಲಿರುವ ಇನ್ಸುಲಿನ್ ಸರಿಯಾದ ಮಟ್ಟದಲ್ಲಿಟ್ಟುಕೊಳ್ಳಲು ಸಹಾಯಮಾಡುತ್ತದೆ. ನಿದ್ರೆಯನ್ನು ಸುಧಾರಿಸುತ್ತದೆ
ನಡಿಗೆಯು ಹಗಲಿನ ಶಕ್ತಿಯನ್ನು ವೃದ್ಧಿಸಲು ಸಹಾಯಮಾಡುತ್ತದೆ. ಇದರಿಂದ ದೀರ್ಘವಾದ ಮತ್ತು ಗಾಢವಾದ ನಿದ್ರೆಮಾಡಲು ಸಹಾಯವಾಗುತ್ತದೆ.ಪ್ರತಿ ನಿತ್ಯದ ನಡಿಗೆ ನಮ್ಮ ಅರೋಗ್ಯವನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಲು ಸಾಧ್ಯ.