Advertisement

ಬೆಂಬಲ ಬೆಲೆಯಿಂದ ಅನುಕೂಲ

01:00 PM Oct 09, 2019 | Team Udayavani |

ನರೇಗಲ್ಲ: ದೇಶದ ಅನ್ನದಾತರ ನೆರವಿಗೆ ಧಾವಿಸಿ ರೈತರ ಹಿತಕಾಯುವ ಬದ್ಧತೆಯನ್ನು ಪ್ರಧಾನಿ ಮೋದಿ ಮತ್ತೂಮ್ಮೆ ಸಾಬೀತು ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ಲಕ್ಷಾಂತರ ರೈತರಿಗೆ ಬೆಂಬಲ ಬೆಲೆಯಿಂದ ರೈತರಿಗೆ ಅನುಕೂಲವಾಗಿದೆ. ಕನಿಷ್ಠ ಬೆಂಬಲ ಬೆಲೆಯು ರೈತರ ಹಿತಕಾಯುವ ಪ್ರಮುಖ ನಿರ್ಧಾರವಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

Advertisement

ಪಟ್ಟಣದ ಜಕ್ಕಲಿ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಉಪಸಮಿತಿ ಪ್ರಾಂಗಣದಲ್ಲಿ ರೋಣ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ವತಿಯಿಂದ ಮಂಗಳವಾರ ಪ್ರಸಕ್ತ ಸಾಲಿನ ಬೆಂಬಲ ಯೋಜನೆಯಡಿ ಹೆಸರು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ವರ್ಷ ಹೆಸರು ಕಾಳು ಪ್ರತಿ ಕ್ವಿಂಗೆ 6975 ರೂ. ನಿಗದಿ ಮಾಡಲಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಅದನ್ನು 7050 ರೂ.ಗಳಿಗೆ ಹೆಚ್ಚಿಸಲಾಗಿದೆ. ಖರೀದಿ ಪ್ರಕ್ರಿಯೆ ಒಂದು ತಿಂಗಳು ಮುಂಚಿತವಾಗಿ ಪ್ರಾರಂಭವಾಗಿದ್ದರೆ ರೈತರಿಗೆ ಹೆಚ್ಚು ಅನೂಕೂಲವಾಗುತ್ತಿತ್ತು. ಯಾವುದೇ ಕಾರಣಕ್ಕೂ ಗೊಂದಲಗಳಿಗೆ ಅವಕಾಶ ಮಾಡಿಕೊಡದೇ ಕೇಂದ್ರ ರೈತರಿಗೆ ಸಂಪೂರ್ಣ ನೆರವಾಗಬೇಕು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಜಗದೀಶ ಕರಡಿ, ಎಪಿಎಂಸಿ ಉಪಾಧ್ಯಕ್ಷ ನಿಂಗನಗೌಡ ಲಕ್ಕನಗೌಡ್ರ, ಸದಸ್ಯ ಬಿ.ಎಸ್‌. ಪೊಲೀಸ್‌ಪಾಟೀಲ, ಚಂದ್ರಶೇಖರ ಗ್ಯಾನಪ್ಪನವರ, ಸುಗೂರೇಶ ಕಾಗಜಗಾರ, ಉಮೇಶ ಸಂಗನಾಳಮಠ, ಶಶಿಧರ ಸಂಕನಗೌಡ್ರ, ನಿಂಗಪ್ಪ ಕಣವಿ, ಬಾಬುಗೌಡ ಪಾಟೀಲ, ಚಂದ್ರಶೇಖರ ಗ್ಯಾನಪ್ಪನವರ ಮುತ್ತಣ್ಣ ಕಡಗದ, ಪಪಂ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ, ವೀರಪ್ಪ ಜೋಗಿ, ಮಲೀಕಸಾಬ್‌ ರೋಣದ, ಶ್ರೀಶೈಲಪ್ಪ ಬಂಡಿಹಾಳ, ಮಲ್ಲಿಕಾರ್ಜುನಗೌಡ ಬೂಮನಗೌಡ್ರ, ಕೆ.ಪಿ. ಗುರುವಡೆಯರ ಇದ್ದರು. ಸಂಘದ ಕಾರ್ಯದರ್ಶಿ ಷಣ್ಮುಖಪ್ಪ ಶಿದೆಕೊಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next