ಮಂಗಳೂರು: ನಗರದ ಬೆಂದೂರ್‌ವೆಲ್ ಜಂಕ್ಷನ್ ಬಳಿ ಶುಕ್ರವಾರ ಸಂಭವಿಸಿದ ಅಪಘಾತಕ್ಕೆ ಕಾರಣವಾದ ಬಸ್ ಚಾಲಕ ಪ್ರಶಾಂತ್ ಮಾರ್ಲನನ್ನು ಪೊಲೀಸರು ಬಂಧಿಸಿದ್ದಾರೆ.
ಅಪರಾಹ್ನ 3ಕ್ಕೆ ಸ್ವಾತಿ ಪ್ರಮೋದ್ ಪುತ್ರ ಹಾರ್ದಿಕ್ ಕುಮಾರ್(11)ನನ್ನು ಸ್ಕೂಟರ್‌ನಲ್ಲಿ ಸಹಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಚಾಲಕ ಪ್ರಶಾಂತ್ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಓವರ್‌ಟೇಕ್ ಮಾಡುವ ಭರದಲ್ಲಿ ಸ್ಕೂಟರಿನ ಮುಂಭಾಗಕ್ಕೆ ಬಸ್ ಢಿಕ್ಕಿಯಾಗಿತ್ತು.
ಆಗ ಸ್ವಾತಿ ಮತ್ತು ಹಾರ್ದಿಕ್ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದರು. ಬಸ್ಸಿನ ಹಿಂಬದಿಯ ಚಕ್ರ ಹಾರ್ದಿಕ್ ಮೇಲೆ ಹರಿದುಹೋಗಿದ್ದರಿಂದ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಸ್ವಾತಿ ಗಾಯಗೊಂಡಿದ್ದರು. ಬಸ್ ಅನ್ನು ಮಂಗಳೂರು ಪೂರ್ವ ಪೊಲೀಸರು ವಶಪಡಿಸಿಕೊಂಡಿದ್ದಾರೆ.