Advertisement

ಅತಿ ಹೆಚ್ಚು ಬೇನಾಮಿ ಆಸ್ತಿ ಪ್ರಕರಣ: ಕರ್ನಾಟಕಕ್ಕೆ 3ನೇ ಸ್ಥಾನ

12:42 PM Nov 07, 2017 | Team Udayavani |

ನವದೆ‌ಹಲಿ: ಬೇನಾಮಿ ಆಸ್ತಿಗಳ ವಿರುದ್ಧ ಕೇಂದ್ರ ಸರ್ಕಾರ ಸಾರಿರುವ ಸಮರದ ಕಾರ್ಯಾಚರಣೆ ಈಗ ಮತ್ತಷ್ಟು ಕಠಿಣವಾಗಿದ್ದು, ಈವರೆಗೆ 1,833 ಕೋಟಿ ರು. ಮೌಲ್ಯದ ಕಳ್ಳಾಸ್ತಿ ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.

Advertisement

ದೇಶದಲ್ಲಿನ ಅತಿ ಹೆಚ್ಚು ಬೇನಾಮಿ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಹಾಗೂ ಗೋವಾ (ತಲಾ 76 ಪ್ರಕರಣ) 3ನೇ ಸ್ಥಾನದಲ್ಲಿವೆ. ಮೊದಲ ಸ್ಥಾನದಲ್ಲಿ ಅಹ್ಮದಾಬಾದ್‌ (136) ಇದ್ದು, ಭೋಪಾಲ್‌ (93) 2ನೇ ಸ್ಥಾನ, ಚೆನ್ನೈ (72) 4ನೇ ಸ್ಥಾನದಲ್ಲಿದೆ. ಆನಂತರದ ಸ್ಥಾನಗಳಲ್ಲಿ, ಜೈಪುರ (62), ಮುಂಬೈ (61) ಹಾಗೂ ದೆಹಲಿ (55) ಇವೆ.

ಸೋಮವಾರ ನವದೆಹಲಿಯಲ್ಲಿ ಈ ವಿವರ ನೀಡಿದ ಸಿಬಿಡಿಟಿ ಮುಖ್ಯಸ್ಥ ಸುಶೀಲ್‌ ಚಂದ್ರ, ಈ ಪ್ರಕರಣ ನಮ್ಮ ಈ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪನಾಮಾ ಪರಿಣಾಮ: ಏತನ್ಮಧ್ಯೆ, ಪನಾಮಾ ಪೇಪರ್ಸ್‌ನಲ್ಲಿ ಕಂಡು ಬಂದಿದ್ದ ತೆರಿಗೆ ವಂಚಕರ ಬೆನ್ನು ಬಿದ್ದಿದ್ದ ಆದಾಯ ತೆರಿಗೆ ಇಲಾಖೆಯು 792 ಕೋಟಿ ರು. ಮೌಲ್ಯದ 426 ಪ್ರಕರಣಗಳನ್ನು ಪತ್ತೆ ಹಚ್ಚಿದೆ ಎಂದು ಸಿಬಿಡಿಟಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next