Advertisement
ಸಿದ್ದಾಪುರ: ಬಿಲ್ವಾಪುರದಲ್ಲಿ ಜನ್ಮ ತಳೆದ ಮೊತ್ತ ಮೊದಲ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾದುದು ಬೆಳ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಶಾಲೆಯು 2016ರಲ್ಲಿ ಶತಮಾನೋತ್ಸವ ಆಚರಿಸಿದ್ದು, ಪ್ರಸ್ತುತ 145 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.
1956ರಲ್ಲಿ ಈ ಶಾಲೆಯು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡುಕೊಂಡಿತು. ಆ ಕಾಲದಲ್ಲಿ ಮಕ್ಕಳ ಸಂಖ್ಯೆಕೂಡ ಹೆಚ್ಚಾಯಿತು. ಹಾಗೆಯೇ ತರಗತಿಯ ಬೇಡಿಕೆಯು ಹೆಚ್ಚಾದವು. ಬೆಳ್ವೆ, ಗೋಳಿಯಂಗಡಿ, ಸೂರೊYàಳಿ, ಯಳಂತೂರು, ತೊಂಭತ್ತು, ಹೆಂಗವಳ್ಳಿ, ಮರೂರು, ತಾರೆಕಟ್ಟೆ, ಹಿಲಿಯಾಣ, ನಂಚಾರು ಮುಂತಾದ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಈಗ ಈ ಶಾಲೆಯ ಸುತ್ತಮುತ್ತ ಸುಮಾರು 4 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಅಲ್ಲದೆ ಬೇರೆ ಬೇರೆ ಕಡೆಗಳಿಂದ ಸುಮಾರು 8 ಖಾಸಗಿ ಶಾಲೆಗಳ ಬಸ್‌ಗಳು ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರೂ ಇಲ್ಲಿ ಮಕ್ಕಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಪ್ರಸ್ತುತ 145 ವಿದ್ಯಾರ್ಥಿಗಳು ಹಾಗೂ 6 ಜನ ಶಿಕ್ಷಕರು ಇದ್ದಾರೆ.
Related Articles
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಕೀರ್ತಿಗಳಿಸಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ಸತತವಾಗಿ 9 ವರ್ಷಗಳಿಂದ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಗೆದ್ದು, ಮೈಸೂರು ವಿಭಾಗದ ಮಟ್ಟಕ್ಕೆ ಆಯ್ಕೆಯಾಗುತ್ತಿದ್ದಾರೆ. ಅಲ್ಲದೆ 10 ವಿದ್ಯಾರ್ಥಿಗಳು ತ್ರೋಬಾಲ್‌ನಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿ, ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜತೆಯಲ್ಲಿ 6 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ, ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾರೆ.
Advertisement
ಬೇಡಿಕೆಪ್ರಸ್ತುತ 145 ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸಬೇಕೆಂಬ ಬೇಡಿಕೆ ಹೆಚ್ಚುತ್ತಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಪ್ರತಿಭೆಗಳು ಹೊರ ಹೊಮ್ಮುತ್ತಿರುದರಿಂದ ಶಾಲೆಗೆ ಒಂದು ಸುಸಜ್ಜಿತವಾದ ಆಟದ ಮೈದಾನವೂ ಅವಶ್ಯವಿದೆ ಎಂಬುದು ಹಳೆ ವಿದ್ಯಾರ್ಥಿಗಳು, ಮಕ್ಕಳ ಹೆತ್ತವರ ಅಭಿಪ್ರಾಯ. ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಶಾಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಇದೆ. ಸರಕಾರದಿಂದ ಮೂಲ ಸೌಕರ್ಯ ಬಾರದ ಹಿನ್ನಲೆಯಲ್ಲಿ ಶಾಲೆಯ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ. ಈ ಬಗ್ಗೆ ಸರಕಾರ, ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕು.
-ಬಿ. ರಾಜೇಂದ್ರ ಕಿಣಿ ಬೆಳ್ವೆ, ಹಳೆ ವಿದ್ಯಾರ್ಥಿ ಉತ್ತಮ ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿಗಳನ್ನು ಶಾಲೆ ಹೊಂದಿದೆ. ಪಾಲಕರು ಎಲ್ಲ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಅನೇಕರ ಹೋರಾಟದ ಫಲವಾಗಿ ಸರಕಾರದಿಂದ ಶಾಲೆಗಾಗಿ ಬೆಳ್ವೆ ಗ್ರಾಮದ ಸರ್ವೆ ನಂ. 275/1ರಲ್ಲಿ 2.72 ಎಕ್ರೆ ಸ್ಥಳ ಮಂಜೂರಾಗಿದೆ. ಇಲ್ಲಿ ಒಂದು ಸುಸಜ್ಜಿತವಾದ ಶಾಲಾ ಕಟ್ಟಡ ನಿರ್ಮಾಣವಾಗಬೇಕು. ಜತೆಗೆ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಬೇಕು.
-ಸುರೇಶ ಶೆಟ್ಟಿ, ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಹಳೆ ವಿದ್ಯಾರ್ಥಿ - ಸತೀಶ್ ಆಚಾರ್ ಸಿದ್ದಾಪುರ