Advertisement
ಜ. 8ರಂದು ಕೆಲವು ಭಕ್ತರು ಬಲಿಪೂಜೆಗೆ ಬಂದಿದ್ದ ಸಮಯ ಚರ್ಚ್‌ನ ಅಡುಗೆ ಸಹಾಯಕ ಮಾರ್ಕ್ ಮಿನೇಜಸ್ ಅವರೊಂದಿಗೆ ಫಾದರ್ ಅಲೆಕ್ಸಾಂಡರ್ ಲೂಯಿಸ್ ಅವರು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದರು ಎಂದು ಗುಮ್ಮಹೊಲ ಪ್ರಿಯಾ ಡಿ’ಸೋಜಾ ಪೊಲೀಸರಿಗೆ ದೂರು ನೀಡಿದ್ದಾರೆ.
ಗುಮ್ಮಹೊಲ ಸಂತ ಜೊನೇಪರ್ ಪ್ರಾರ್ಥನ ಮಂದಿರದ ನಿರ್ದೇಶಕನಾಗಿ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ನನಗೆ ಕೆಲವು ಭಕ್ತರು ಚರ್ಚ್‌ನ ಪೂಜಾ ವಿಧಾನಗಳನ್ನು ಮಾಡಲು ಬಿಡುತ್ತಿರಲಿಲ್ಲ. ಈ ಸಂಬಂಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ. ಇದರ ನಡುವೆಯೂ ಕೆಲವು ಭಕ್ತರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಮಂದಿರದ ನಿರ್ದೇಶಕ ಅಲೆಕ್ಸಾಂಡರ್ ಲೂಯಿಸ್ ಅವರು ಪ್ರತಿದೂರು ನೀಡಿದ್ದಾರೆ. ಆರೋಪಿಗಳಾದ ಪ್ರವೀಣ ಲೋಬೊ, ಜನಾರಿ ಜೋಸ್, ಗಿಲ್ಬರ್ಟ್ ಡಿ’ಸೋಜಾ, ವಿಲ್ಸನ್ ಪ್ಲೋರೇಸ್, ಐವನ್ ಪ್ಲೋರೇಸ್, ಶಾಂತಿ ಡೇಸಾ, ಪ್ರಿಯಾ ಡಿ’ಸೋಜಾ, ಸಿಲ್ವಿಯ ರೇಸ್, ನಿಶಾ ಪ್ಲೋರೇಸ್, ರೀಟಾ ಡಿ’ಸೋಜಾ, ಅಲಿಟಾ ಡೇಸಾ, ಜೋಸೇಪ್ ಸ್ಕರಿಯ, ವಿನಿಸ್ಸ ಸ್ಕೀಯಾ, ಸ್ಯಾಂಡ್ರ ಸ್ಯಾಮ್ಸನ್, ರಿಜರ್ಡ ಸ್ಯಾಮ್ಸನ್ ಹಾಗೂ ಇತರರು ತನ್ನ ರೂಮಿನ ಬಾಗಿಲು ಒಡೆದು ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಹಲ್ಲೆ ತಪ್ಪಿಸಲು ಬಂದಿದ್ದ ಅಡುಗೆ ಸಹಾಯಕ ಮಾರ್ಕ್ ಮಿನೇಜಸ್ ಅವರಿಗೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.