ಸುರ್ಗೋಳ್ಳಿ ಮೇಲ್ಮನೆ ಕೀರ್ತಿರಾಜ್ ಶೆಟ್ಟಿ (27) ಅವರ ಮನೆಯ ದನದ ಕರು ಗೇರು ಗಿಡ ತಿಂದು ಹಾಕಿದೆ ಎಂದು ಮೋಹನ ಶೆಟ್ಟಿ ಮತ್ತು ಸಂದೀಪ ಶೆಟ್ಟಿ ಅವರು ಪಕ್ಕದ ಮನೆಯ ಕೀರ್ತಿರಾಜ್ ಶೆಟ್ಟಿ ರಾತ್ರಿ ಸಮಯದಲ್ಲಿ ಬಾವಿಯ ಪಂಪ್‌ಸೆಟ್ ಸ್ವಿಚ್ ಹಾಕಲು ಬಂದಾಗ ಅವರ ಮೇಲೆ ಹಲ್ಲೆ ನಡೆಸಿದರು.
Advertisement
ಪ್ರಾಣ ಭಯದಿಂದ ಮನೆಗೆ ಓಡಿದ ಸಂದರ್ಭ ಕೈಯಲ್ಲಿ ಕತ್ತಿ ಹಿಡಿದು ಬೆನ್ನಟ್ಟಿದ ಆರೋಪಿಗಳು ಮನೆಯ ಅಂಗಳಕ್ಕೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೀರ್ತಿರಾಜ್ ಶೆಟ್ಟಿ ಪೊಲೀಸರಿಗೆ ದೂರು ನೀಡಿದರು.