Advertisement
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಆರ್ ಎಸ್ಎಸ್ ಪ್ರೇರಿತ ಸಿದ್ಧಾಂತಗಳನ್ನು ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ ಕ್ರಿಸ್ಮಸ್ ಆಚರಣೆಗೆ ಗುಂಪು ಗೂಡುವುದನ್ನು ನಿಷೇಧಿಸಿತು., ಇದೀಗ ಯುವಕರ ಹೊಸ ವರ್ಷಾಚರಣೆಗೆ ಕಡಿವಾಣ ಹಾಕುತ್ತಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ ಎಂದು ಟೀಕಿಸಿದರು.
Related Articles
Advertisement
ಸಿಗಂದೂರು ವಿಷಯದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಯಡಿಯೂರಪ್ಪರಿಗೆ ದೇವಿಯ ಶಾಪ ತಟ್ಟಿದೆ. ಅದಕ್ಕಾಗಿ ಡಿನೋಟಿಫಿಕೇಷನ್ ಪ್ರಕರಣ ಹೆಗಲೇರಿದೆ. ಹಾಗಾಗಿ ನಾನು ಅವರ ರಾಜೀನಾಮೆ ಕೇಳುವುದಿಲ್ಲ. ಅವರ ಪಕ್ಷದವರೇ ಯಡಿಯೂರಪ್ಪ ಬಗ್ಗೆ ಮಾತನಾಡುತ್ತಿದ್ದಾರೆ. ಜನವರಿ 16ರ ನಂತರ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಸಂಕ್ರಮಣದ ನಂತರ ಹೊಸ ರಾಜಕೀಯ ತಿರುವು ಅಗಲಿದೆ ಎಂದರು.
ನಾನು ಯಾವುದೇ ಭ್ರಷ್ಟಾಚಾರದ ಆಪಾದಿತರನ್ನು ನಾನು ಇಟ್ಟುಕೊಳ್ಳುವುದಿಲ್ಲ ಎಂದು ಪ್ರಧಾನಿ ಹೇಳಿದ್ದರು. ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ 15 ರಿಂದ 20 ಸಾವಿರ ಹಣ ನೀಡಿ ಮತ ಖರೀದಿಸಿದೆ. ಭ್ರಷ್ಟಾಚಾರದ ಹಣದ ಹೊಳೆಯನ್ನೇ ಯಡಿಯೂರಪ್ಪ ಸರ್ಕಾರ ಈ ಬಾರಿಯ ಚುನಾವಣೆಯಲ್ಲಿ ಹರಿಸಿದೆ. ಈ ಬಗ್ಗೆ ಪ್ರಧಾನಿ ಮೋದಿಯವರು ಗಮನಿಸಬೇಕು ಎಂದು ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.