Advertisement

“ಡಿಜೆ’ಗಾಗಿ ಬೇಲೂರು ಚನ್ನಕೇಶವ ದೇವಾಲಯಕ್ಕೆ ಬೀಗ! ಏನಿದು ವಿವಾದ? 

09:19 AM Feb 17, 2017 | Team Udayavani |

ಹಾಸನ:ಇಲ್ಲಿನ ಪ್ರಸಿದ್ದ ಮತ್ತು ಐತಿಹಾಸಿಕ ಪರಂಪರೆಯ ಬೇಲೂರು ಚನ್ನಕೇಶವ ದೇಗುಲದಲ್ಲಿ  ಅಲ್ಲು ಅರ್ಜುನ್‌ ಅಭಿನಯದ ತೆಲುಗು ಚಿತ್ರ “ಡಿಜೆ “ಚಿತ್ರೀಕರಣಕ್ಕಾಗಿ ದೇವಾಲಯಾದ ಬಾಗಿಲನ್ನೇ ಮುಚ್ಚಿ ,ಭಕ್ತರಿಗೂ ಪ್ರವೇಶಕ್ಕೆ ಅವಕಾಶ ನೀಡದೆ ಅಪಚಾರ ಎಸಗಿರುವ ಬಗ್ಗೆ ವರದಿಯಾಗಿದೆ. 

Advertisement

ವೈಷ್ಣವ ಪರಂಪರೆಯ ದೇಗುಲದಲ್ಲಿ ಅದ್ದೂರಿ ಸೆಟ್‌ ಹಾಕಲಾಗಿದ್ದು ಶಿವನ ಬೃಹತ್‌ ಮೂರ್ತಿ ಈಡಲಾಗಿದ್ದು ಈ ಬಗ್ಗೆ ಹಲವರು ತಕರಾರು ತೆಗೆದಿದ್ದಾರೆ. ಶಿವನ ವಿಗ್ರಹ ವಿಡಲು ಅವಕಾಶ ಮಾಡಿಕೊಟ್ಟಿರುವ  ಜಿಲ್ಲಾಡಳಿತದ ಕ್ರಮದ ವಿರುದ್ಧ  ತೀವ್ರ ಆಕ್ಷೇಪ ವ್ಯಕ್ತ ಪಡಿಸಲಾಗಿದೆ. 

ಈ ಬಗ್ಗೆ ಚಿತ್ರತಂಡ ನಾವು ಪುರಾತತ್ವ ಇಲಾಖೆಯ ಅನುಮತಿ ಪಡೆದು ಈ ಬಗ್ಗೆ ಹಣವನ್ನೂ ಕಟ್ಟಿ ಚಿತ್ರೀಕರಣ ನಡೆಸುತ್ತಿದ್ದೇವೆ ಎಂದಿದ್ದಾರೆ. 

ಪ್ರವಾಸಿಗರು ದೇವಾಲಯದ ಹೊರಗೆ ನಿಂತು ದೇವಾಲಯವನ್ನು ನೋಡಬೇಕಾಗಿ ಬಂದಿದೆ. ಈ ಬಗ್ಗೆ ಸ್ಥಳೀಯರು ಮತ್ತು ಪ್ರವಾಸಿಗರು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next