ಬೆಳ್ತಂಗಡಿ: ಮುಂಡಾಜೆಯ ಕೊಡಂಗೆ ಎಂಬಲ್ಲಿ ಅವಿವಾಹಿತ ಥೋಮಸ್ (42)ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮೂಲತಃ ಕಡಬದವರಾಗಿದ್ದು, ಕಳೆದ ಒಂದು ತಿಂಗಳಿನಿಂದ ಸಹೋದರಿಯ ಮನೆಯಾದ ಮುಂಡಾಜೆಯ ಕೊಡಂಗೆಯಲ್ಲಿ ವಾಸ್ತವ್ಯವಿದ್ದರು. ವಿಪರೀತ ಅಮಲು ಪದಾರ್ಥ ಸೇವನೆಯ ಚಟ ಹೊಂದಿದ್ದ ಅವರು ಕಳೆದ ಕೆಲವು ದಿನಗಳಿಂದ ಮದ್ಯಪಾನ ನಿಲ್ಲಿಸಿದ್ದು, ಬಳಿಕ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.
ಆ.12ರಂದು ರಾತ್ರಿ ಮನೆಯ ಕೋಣೆಯೊಂದರಲ್ಲಿ ಮಲಗಿದ್ದ ಅವರು ಮರುದಿನ ಬೆಳಗ್ಗೆ ಮನೆಯ ಪಕ್ಕದಲ್ಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಮನೆಯವರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ.
ಪ್ರಕರಣದ ಕುರಿತು ಮೃತರ ಸಹೋದರಿ ಎಲಿಯಮ್ಮ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.