Advertisement
ಉದ್ಘಾಟನೆಬೆಳಗ್ಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ಕ್ಷೇತ್ರದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇನ್ದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದು, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಆಶಯ ನುಡಿಗಳನ್ನಾಡಲಿದ್ದಾರೆ. ಅತಿಥಿಗಳಾಗಿ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಆರಂಭ ದಲ್ಲಿ ತುಳು ಸಾಂಪ್ರದಾಯಿಕ ರೀತಿಯ ವಿಶೇಷ ಮೆರವಣಿಗೆ ಜರಗಲಿದೆ. ಉದ್ಘಾಟನೆಯ ಸಂದರ್ಭದಲ್ಲಿ ಆಟಿ ಕಳೆಂಜ, ಗುಮ್ಮಟೆ, ಕರ್‌ಂಗೋಲು, ಪಾಡ್ಡನ ವಿಶೇಷ ಮೆರುಗನ್ನು ನೀಡಲಿದೆ. ವಿವಿಧ ಕ್ಷೇತ್ರದ ಗಣ್ಯರಿಗೆ ಸಮ್ಮಾನ, ಮಧ್ಯಾಹ್ನ ವಿಚಾರಗೋಷ್ಠಿ, ಕವಿಗೋಷ್ಠಿ ನಡೆಯಲಿದೆ. ಸೋರ್ತಿ ಆಟ
ಈ ಸಂದರ್ಭ ಸೋರ್ತಿ ಆಟ ಜರಗಲಿದ್ದು, ಪ್ರಥಮ ಬಹುಮಾನವಾಗಿ 3 ಮಂದಿಗೆ ಮುಡಿ ಅಕ್ಕಿ, ದ್ವಿತೀಯ 2 ಮಂದಿಗೆ ಮುಡಿ ಅಕ್ಕಿ, 5 ಮಂದಿಗೆ ಆಕರ್ಷಕ ಬಹುಮಾನ ನೀಡಲಾಗುವುದು.
Related Articles
ಕಾರ್ಯಕ್ರಮದಲ್ಲಿ ತುಳುನಾಡಿನ ತಿಂಡಿ-ತಿನಸುಗಳ ಮಳಿಗೆ, ಬುಟ್ಟಿ- ಮುಟ್ಟಾಳೆ, ಸೋಜಿಯ ಅಂಗಡಿ, ಕಟ್ಲೇರಿ ಅಂಗಡಿಗಳು, ಬಳೆ ಅಂಗಡಿ, ಹಳ್ಳಿ ಮನೆ ಹೈದರಾಲಿ ಅವರ ಅಪರೂಪದ ತುಳು ವಸ್ತುಗಳ ಸಂಗ್ರಹದ ಪ್ರದರ್ಶನ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯವರಿಂದ ಕೃಷಿ ಯಂತ್ರಗಳ ಪ್ರದರ್ಶನ, ಅಡಿಕೆಯ ರಾಶಿ, ಬೈಹುಲ್ಲಿನ ಬಣವೆ, ತೆಂಗಿನ ಕಾಯಿಯ ರಾಶಿ, ಊರಿನ ಕೋಳಿಗಳ ಪ್ರದರ್ಶನ, ನರ್ಸರಿ ಮೊದಲಾದವುಗಳು ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಇನ್ನೂ ಅನೇಕ ಮಳಿಗೆಗಳು ಈ ವಸ್ತುಪ್ರದರ್ಶನದಲ್ಲಿ ನೋಡುಗರ ಮನಸೂರೆಗೊಳ್ಳಲಿವೆ.
Advertisement
ಸಾಂಸ್ಕೃತಿಕ ಕಾರ್ಯಕ್ರಮಮಧ್ಯಾಹ್ನ ವಿಟ್ಠಲ ನಾಯಕ್ ಕಲ್ಲಡ್ಕ ಇವರಿಂದ ಗೀತ ಸಾಹಿತ್ಯ ಸಂಭ್ರಮ, ಪ್ರೌಢಶಾಲಾ ವಿದ್ಯಾರ್ಥಿಗಳಿಂದ ತಾಲೂಕು ಮಟ್ಟದ ತುಳು ಸಂಸ್ಕೃತಿ ಗೀತೆ -ನೃತ್ಯ ವೈವಿಧ್ಯ, ವಿಶ್ವನಾಥ ಕೂಡಿಗೆ ಬೆಳಾಲು ಇವರಿಂದ ತುಳು ಜಾನಪದ ನೃತ್ಯ, ಬಜಿಲ ಸರಕಾರಿ ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಚಾವಡಿ ಕೂಟ, ಹರ್ಷ ಗೆಳೆಯರ ಬಳಗ ಮತ್ತು ಸ್ನೇಹ ಯುವತಿ ಮಂಡಲ ಬಜಿಲ ಇದರ ಕಲಾವಿದರಿಂದ ತೆಲಿಕೆ-ನಲಿಕೆ, ಶಬರಿ ಕಲಾವಿದರು ಕಕ್ಕಿಂಜೆ ಇದರ ಕಲಾವಿದರಿಂದ ತುಳು ನಾಟಕ ಎನ್ನ ತಂಗಡಿ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಬೆರ್ಕೆ ಹಾಗೂ ಕಾರ್ಯಾಧ್ಯಕ್ಷರಾದ ಚಂದಪ್ಪ ಗೌಡ ಬೆರ್ಕೆ, ಲಕ್ಷ್ಮಣ ಗೌಡ ಮೇಗಿನ ಬಜಿಲ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.