Advertisement

Belthangady: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ; ಲಕ್ಷಾಂತರ ನಷ್ಟ

08:49 PM Sep 17, 2024 | Team Udayavani |

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಬಲ್ಯಾರ್‌ಕಾಪು ರಸ್ತೆಯ ಹೊಸಗದ್ದೆ ಬಾಲಕೃಷ್ಣ ಶೆಟ್ಟಿಯವರ ರಬ್ಬರ್‌ಸ್ಮೋಕ್‌ ಹೌಸ್‌ಗೆ ಬೆಂಕಿ ಬಿದ್ದು 2 ಲಕ್ಷ ರೂ.ಗಿಂತಲೂ ಅಧಿಕ ನಷ್ಟ ಸಂಭವಿಸಿದೆ.

Advertisement

ಮಂಗಳವಾರ ಬೆಳಗಿನ ಜಾವ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿ ಸುಮಾರು 8 ಕ್ವಿಂಟಾಲ್‌ ರಬ್ಬರ್‌ ಬೆಂಕಿಗೆ ಆಹುತಿಯಾಗಿದೆ. ಸ್ಮೋಕ್‌ ಹೌಸ್‌ನ ಶೀಟುಗಳು ಸುಟ್ಟು ಹೋಗಿವೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಬೆಂಕಿ ಹತೋಟಿಗೆ ತರಲು ಸಹಕರಿಸಿದರಾದರೂ ಸ್ಮೋಕ್‌ ಹೌಸ್‌ ಸಂಪೂರ್ಣ ಸುಟ್ಟು ಕರಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next