Advertisement

ಬೆಳ್ತಂಗಡಿ ರೋಟರಿ ಕ್ಲಬ್‌ ಪದಗ್ರಹಣ

02:45 AM Jul 13, 2017 | |

ಬೆಳ್ತಂಗಡಿ : ಸಮಾಜದ ಕಷ್ಟ ನಷ್ಟಗಳನ್ನು ರೋಟರಿ ಕ್ಲಬ್‌ನ ಸದಸ್ಯರು ಅರಿತು ಅದನ್ನು ಪರಿಹರಿಸುವತ್ತ ಗಮನ ನೀಡಬೇಕು ಎಂದು ಮೂಡಬಿದಿರೆಯ ವೈದ್ಯ ಹರೀಶ್‌ ನಾಯಕ್‌ ಹೇಳಿದರು.

Advertisement

ಅವರು ಬೆಳ್ತಂಗಡಿಯ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಲಾಭವನದಲ್ಲಿ ನಡೆದ ಬೆಳ್ತಂಗಡಿ ರೋಟರಿ ಕ್ಲಬ್‌ ಪದಗ್ರಹಣದಲ್ಲಿ ಪದಪ್ರದಾನ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.

ಯಾವುದೇ ಯೋಜನೆಗಳನ್ನು ಪ್ರಾಮಾಣಿಕತೆ, ಶಿಸ್ತಿನಿಂದ ರೂಪಿಸಬೇಕು. ಜನರನ್ನು ಒಂದು ಗೂಡಿಸುವುದು, ಸರಿಪಡಿಸುವುದು ನಮ್ಮ ಕೆಲಸ. ಸದಸ್ಯರೇ ರೋಟರಿ ಕ್ಲಬ್‌ನ ಬೆನ್ನೆಲುಬಾಗಿದ್ದಾರೆ. ಹೊಸದಾಗಿ ಪದಗ್ರಹಣ ಮಾಡಿದ ಪದಾಧಿಕಾರಿಗಳು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಬೆಂಬಲದೊಂದಿಗೆ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಬೇಕು ಎಂದರು.

ಬೆಳ್ತಂಗಡಿ ರೋಟರಿ ಕ್ಲಬ್‌ ಅಧ್ಯಕ್ಷ ಡಾ| ಸುಧೀರ್‌ ಪ್ರಭು ಅವರು, ಸಾಂಘಿಕ ಮತ್ತು ಸಮಷ್ಠಿ ಭಾವದಿಂದ ಕ್ಲಬ್‌ ಸದಸ್ಯರು ಮುನ್ನಡೆದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಹಸಿರಿದ್ದರೆ ಉಸಿರು, ಜಲವಿದ್ದರೆ ಜೀವನ, ಸ್ವತ್ಛತೆ ಇದ್ದಲ್ಲಿ ಸ್ವಾಸ್ಥÂ ಎಂಬ ಧ್ಯೇಯ ವಾಕ್ಯದೊಂದಿಗೆ ನಿತ್ಯಬೆಳಕು ಯೋಜನೆ, ಸ್ವತ್ಛತಾ ಕಾರ್ಯಕ್ರಮ, ಲಕ್ಷವೃಕ್ಷ ಅಭಿಯಾನ ಮತ್ತಿತರ ಯೋಜನೆಗಳನ್ನು ಪ್ರಸಕ್ತ ವರ್ಷ ನಡೆಸಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಸಹಾಯಕ ಗವರ್ನರ್‌ ವಲಯ 4ರ ಎ.ಎಂ. ಕುಮಾರ್‌ ಉಪಸ್ಥಿತರಿದ್ದರು. ಕೃಷಿ ತಪಸ್ವಿ ದೇವರಾಯ ರಾವ್‌ ಅವರನ್ನು ಸಮ್ಮಾನಿಸಿ, ಅವರಿಗೆ ಭತ್ತ ಬೇರ್ಪಡಿಸುವ ಯಂತ್ರವನ್ನು ಹಸ್ತಾಂತರಿಸಲಾಯಿತು. ಕುಕ್ಕಾವು ಸರಕಾರಿ ಶಾಲೆಯ ಗೌರವ ಶಿಕ್ಷಕಿಯರಿಗಾಗಿ ವೇತನ ರೂ. 40 ಸಾವಿರ, ವಿದ್ಯಾರ್ಥಿನಿಯರಾದ ಅಶ್ವಿ‌ನಿ, ಮಧುಶ್ರೀ, ಶರಣ್ಯ ಅವರಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ಧನ ನೀಡಲಾಯಿತು.

Advertisement

ನಿಕಟಪೂರ್ವ ಅಧ್ಯಕ್ಷ ಡಿ.ಎಂ. ಗೌಡ ಸ್ವಾಗತಿಸಿ, ಕಾರ್ಯದರ್ಶಿ ಪ್ರಕಾಶ್‌ ಪ್ರಭು ವಾರ್ಷಿಕ ವರದಿ ಮಂಡಿಸಿದರು. ಗಾಯತ್ರಿ ರಾವ್‌, ದಯಾನಂದ ನಾಯಕ್‌, ಬಿ.ಕೆ. ಧನಂಜಯ ರಾವ್‌ ಅತಿಥಿಗಳನ್ನು ಪರಿಚಯಿಸಿದರು. ಜಗದೀಶ್‌ ಪ್ರಸಾದ್‌ ಸಮ್ಮಾನಿತರನ್ನು ಪರಿಚಯಿಸಿದರು. ಪ್ರತಾಪಸಿಂಹ ನಾಯಕ್‌ ಅನುಭವವನ್ನು ಹಂಚಿಕೊಂಡಿರು. ಎಂ.ವಿ. ಭಟ್‌ ನೂತನ ಸದಸ್ಯರುಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಡಾ| ಪ್ರದೀಪ್‌ ನಾವೂರು ವಂದಿಸಿದರು. ಡಾ| ಎ. ಜಯ ಕುಮಾರ್‌ ಶೆಟ್ಟಿ ಮತ್ತು ಮನೋರಮಾ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next