Advertisement

ಕಡೆಗೂ ಎಚ್ಚೆತ್ತ ಬೆಳ್ತಂಗಡಿ ಪ.ಪಂ.; ಆಡಳಿತ ಆಸ್ಪತ್ರೆ ವಸತಿ ಗೃಹ, ಬಸ್‌ ನಿಲ್ದಾಣ ಸ್ವಚ್ಛತೆ

01:29 PM Aug 04, 2022 | Team Udayavani |

ಬೆಳ್ತಂಗಡಿ: ಪ್ರಧಾನಮಂತ್ರಿಯವರ ಸ್ವಚ್ಛ ಭಾರತ್‌ ಆಶಯವನ್ನು ಜನಸಾಮಾನ್ಯರು ನಿರ್ಲಕ್ಷಿಸುತ್ತಿರುವ ಪರಿಣಾಮ ಇಂದು ತ್ಯಾಜ್ಯ ವಿಲೇವಾರಿಯೇ ಬಹುದೊಡ್ಡ ಹೊರೆಯಾಗಿ ಪರಿಣಮಿಸಿದೆ. ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿ ಪ.ಪಂ. ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಆವರಣವನ್ನೇ ಕಡೆಗಣಿಸಿದ್ದರು. ಈ ಕುರಿತು ಹಲವು ಬಾರಿ ಪತ್ರಿಕೆ ವರದಿ ಪ್ರಕಟಿಸಿದ ಪರಿಣಾಮ ಇದೀಗ ಶುಚಿಯಾಗಿದೆ.

Advertisement

ಸಾರ್ವಜನಿಕ ಆಸ್ಪತ್ರೆಯ ಸಿಬಂದಿ ವಸತಿ ಗೃಹ ಸುತ್ತ ಗಿಡಗಂಟಿ ಬೆಳೆದು ತೆರೆದ ಚರಂಡಿ ದುರ್ನಾತ ಬೀರುತ್ತಿತ್ತು. ಈ ಕುರಿತು ಪ.ಪಂ. ಹಾಗೂ ಆರೋಗ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪರಸ್ಪರ ತಮಗೆ ಸಬಂಧಿಸಿದ್ದೇ ಅಲ್ಲ ಎಂಬ ರೀತಿಯಲ್ಲಿ ನಿರ್ಲಕ್ಷ್ಯ ವಹಿಸಲಾಗಿತ್ತು. ಈ ವಿಚಾರ ಪ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆಗೂ ಕಾರಣವಾಗಿತ್ತು. ಪ.ಪಂ. ಸ್ವಚ್ಛತೆ ಕಾಪಾಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಿತ್ತು. ಆದರೆ ಮೂರು ತಿಂಗಳಾದರೂ ವ್ಯವಸ್ಥೆಯಾಗಿಲ್ಲ. ಸಾರ್ವಜನಿಕ ವಲಯದಿಂದಲೂ ದೂರು, ವರದಿಗೆ ಎಚ್ಚೆತ್ತ ಶಾಸಕರು ಸ್ಥಳ ಪರಿಶೀಲಿಸಿ ಸಂಬಂಧಿತರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದೀಗ ತಾಲೂಕು ಆಸ್ಪತ್ರೆಯ ಸುತ್ತಮುತ್ತ, ವಸತಿಗೃಹ ಸಹಿತ ಪೇಟೆಯ ಹಲವು ಇಲಾಖೆ ಕಟ್ಟಡಗಳ ಸುತ್ತಮುತ್ತ ಗಿಡಗಂಟಿ ತೆರವು ಆಗಿದೆ. ಚರ್ಚ್‌ ರಸ್ತೆಯಲ್ಲಿದ್ದ ಎರಡು ಬದಿಯ ಪ್ರಯಾಣಿಕರ ತಂಗುದಾಣ, ಹಳೆಕೋಟೆ ಸಮೀಪದ ಬಸ್‌ ನಿಲ್ದಾಣ ಪಾಚಿ ಹಿಡಿದಿದ್ದು, ಅದನ್ನು ಸ್ವಚ್ಛಗೊಳಿಸಿ ಸುಣ್ಣಬಣ್ಣ ಬಳಿದು ಅನುಕೂಲ ಕಲ್ಪಿಸಲಾಯಿತು.

ಕ್ರಿಯಾ ಯೋಜನೆ: ಸಾರ್ವಜನಿಕ ಆಸ್ಪತ್ರೆ ಸುತ್ತಮುತ್ತ ಗಿಡಗಂಟಿ ತೆರವು ಮಾಡಲಾಗಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಈಗಾಗಲೆ 11 ವಾರ್ಡ್‌ ಸಿಸಿ ಚರಂಡಿ, ಮುಖ್ಯ ರಸ್ತೆ ಸಿಸಿ ಚರಂಡಿ, ಜಂಗಲ್‌ ಕಟ್ಟಿಂಗ್‌ ಸೇರಿ ಒಟ್ಟು 13.70 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಆಸ್ಪತ್ರೆಯ ಶವಾಗಾರ ಹಾಗೂ ವಸತಿಗೃಹಕ್ಕೆ ಹೊಸದಾಗಿ ಕಟ್ಟಡ ರಚಿಸುವ ಕುರಿತು ಶಾಸಕರ ಮೂಲಕ ಕ್ರಿಯಾಯೋಜನೆ ನಡೆಸಲಾಗುತ್ತಿದೆ. –ಜಯಾನಂದ್‌, ಪ.ಪಂ. ಉಪಾಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next