Advertisement

Belthangady: ಕಡೆಗೂ ಕಜಕ್ಕೆ ಶಾಲೆಯವರೆಗೆ ಬಂತು ಸರಕಾರಿ ಬಸ್‌

04:38 PM Oct 23, 2024 | Team Udayavani |

ಬೆಳ್ತಂಗಡಿ: ಕಳೆದ ಅನೇಕ ವರ್ಷಗಳಿಂದ ಲಾೖಲ ದಿಡುಪೆ ಮಾರ್ಗವಾಗಿ ಸಂಚರಿಸುತ್ತಿರುವ ಸಾರಿಗೆ ಬಸ್‌ ಅನ್ನು ಕಜಕ್ಕೆ ಶಾಲೆಯವರೆಗೆ ವಿಸ್ತರಿಸಬೇಕೆಂಬ ಬೇಡಿಕೆಗೆ ಕಡೆಗೂ ಸ್ಪಂದನೆ ದೊರೆತಿದ್ದು, ಅ.22 ರಂದು ಬಸ್‌ ಆಗಮಿಸಿದೆ. ಹೂವಿನ ಅಲಂಕಾರ, ಸಿಹಿ ತಿಂಡಿ ಹಂಚಿ ಗ್ರಾಮಸ್ಥರು ಹಾಗೂ ಮಕ್ಕಳು ಬಸ್‌ ಅನ್ನು ಸ್ವಾಗತಿಸಿದರು.

Advertisement

ಬೆಳಗ್ಗೆ 7.30ಕ್ಕೆ ದಿಡುಪೆಯಿಂದ ಸುಮಾರು 2.5 ಕಿ.ಮೀ. ದೂರದ ಮಲವಂತಿಗೆ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಜಕ್ಕೆ ಭಾಗಕ್ಕೆ ಬರುವ ಬಸ್ಸಿಗೆ ಮಲವಂತಿಗೆ ಗ್ರಾ.ಪಂ. ಉಪಾಧ್ಯಕ್ಷೆ ರೋಹಿಣಿ ಜಯವರ್ಮ ಗೌಡ ಕಲ್ಬೆಟ್ಟು ಚಾಲನೆ ನೀಡಿದರು.

ತಾಲೂಕಿನ ಒಟ್ಟಾರೆ ಸಾರಿಗೆ ಸಮಸ್ಯೆ ಜತೆಗೆ ಕಜಕೆಗೆ ಬಸ್‌ ಆವಶ್ಯಕತೆ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿ ಆಡಳಿತದ ಗಮನ ಸೆಳೆದಿತ್ತು. ಈ ಹಿನ್ನೆಲೆ ಶಾಸಕ ಹರೀಶ್‌ ಪೂಂಜ ಅವರು ಸಾರಿಗೆ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರ ಸಮ್ಮುಖದಲ್ಲಿ ಜನಸ್ಪಂದನ ಸಭೆ ಏರ್ಪಡಿಸಿದ್ದರು. ಸಭೆಯಲ್ಲಿ ಮಲವಂತಿಗೆ ಗ್ರಾಮದ ತೀಕ್ಷಿತ್‌ ಕೆ.ಕಲೆºಟ್ಟು ಮತ್ತಿತರರು ಕಜಕೆ ಭಾಗದ ವಿದ್ಯಾರ್ಥಿಗಳು ಶಾಲೆಗೆ ಹೋಗಲು 2.5 ಕಿ.ಮೀ. ನಡೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಈ ಭಾಗದಲ್ಲಿ 250 ಕ್ಕೂ ಅಧಿಕ ಮನೆಗಳೂ ಇವೆ ಬಸ್‌ ಅಗತ್ಯ ಎಂದು ಆಗ್ರಹಿಸಿದ್ದರು.

ಕರ್ನಾಟಕ ಸಾರಿಗೆ ವ್ಯವಸ್ಥೆಯ ಸಿಬಂದಿ ವರ್ಗದವರಾದ ನಾರಾಯಣ ಪೂಜಾರಿ ಮುಂಡಾಜೆ ಹಾಗೂ ಚಾಲಕ ಮತ್ತು ನಿರ್ವಾಹಕರಾದ ವಿನಯಚಂದ್ರ, ಕರುಣಾಕರ ಮತ್ತು ದಯಾನಂದ, ಬಂಗಾಡಿ ಸಿಎ ಬ್ಯಾಂಕ್‌ ನಿರ್ದೇಶಕ ಕೇಶವ ಎಂ.ಕೆ., ಮಲವಂತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ನಾರಾಯಣ ಗೌಡ, ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ತೀಕ್ಷಿತ್‌ ಕೆ.ಕಲ್ಬೆಟ್ಟು, ಶ್ರೀ ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್‌ನ ಅಧ್ಯಕ್ಷ ಸಂತೋಷ್‌ ಪೂಜಾರಿ, ಕಜಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ರಂಗನಾಥ ಮತ್ತು ಪರಮೇಶ್ವರ್‌, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಗೌಡ ಪೊದ್ಕೆತರು, ಗ್ರಾಮಸ್ಥರಾದ ಮಧುಸೂದನ್‌ ಮಲ್ಲ, ಶೇಕರ ಗೌಡ ಹೊಳೆಕೆರೆ, ರಾಧಾಕೃಷ್ಣ ಗೌಡ ಮಜಲು, ರಮೇಶ್‌ ಗೌಡ ವಿದ್ಯಾನಗರ, ಸಚಿನ್‌ ಗೌಡ ಬದ್ಲಾಯಿ, ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್‌ ಕಾರ್ಯದರ್ಶಿ ಹರಿ ಭಟ್‌, ಸಂಜೀವ ಗೌಡ ಪುನ್ಕೆದಡಿ, ರಮೇಶ್‌ ಗೌಡ, ಸಂಪತ್‌ ಪೂಜಾರಿ ಕಜಕ್ಕೆ, ಸಾಗರ್‌ ಅಡ್ಡಕೊಡಂಗೆ, ರಾಜೇಶ್‌ ಗೌಡ ಬರ್ಕಲಟ್ಟು ಭಾಗವಹಿಸಿದ್ದರು.

ವಾಣಿ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿ ಮುಖ್ಯಸ್ಥ ಉಮೇಶ್‌ ಗೌಡ ಸ್ವಾಗತಿಸಿ, ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಕಾರ್ಯದರ್ಶಿ ಜಯಂತ ಹೆಗ್ಡೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next