Advertisement

“ಹಸುರು ಉಳಿಸಲು ಸಹಕರಿಸಿ’

08:17 PM Jun 05, 2019 | Sriram |

ಬೆಳ್ತಂಗಡಿ: ಪರಿಸರ ದಿನದ ಪ್ರಯುಕ್ತ ವಲಯ ಅರಣ್ಯ ಇಲಾಖೆ, ಸಂಘ-ಸಂಸ್ಥೆ, ಮಸೀದಿಗಳಲ್ಲಿ ಗಿಡ ನೆಟ್ಟು ಪರಿಸರ ಉಳಿಸಿ ಸಂದೇಶ ಸಾರಿದರು.

Advertisement

ಅರಣ್ಯ ಇಲಾಖೆಯಿಂದ ಕಲ್ಲಗುಡ್ಡೆ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌ನಲ್ಲಿ ಪಶ್ಚಿಮಘಟ್ಟದ ವಿಶೇಷ ಜಾತಿಯ ಗಿಡ ನೆಟ್ಟು ಸಾಂಕೇತಿಕವಾಗಿ ಪರಿಸರ ದಿನವನ್ನು ಆಚರಿಸಲಾಯಿತು. ಈ ವೇಳೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ, ಹಸುರು ಉಳಿವಿಗೆ ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕು. ಈಗಾಗಲೇ ಅರಣ್ಯ ಇಲಾಖೆಯಿಂದ ಈ ಬಾರಿ ಪಶ್ಚಿಮ ಘಟ್ಟದ ವಿಶೇಷ ಜಾತಿಯ 800 ಗಿಡ ನೆಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ರವೀಂದ್ರ ಅಂಕಲಗಿ, ದಿನೇಶ್‌ ಗೌಡ, ರಾಜೇಶ್‌ ಬಿ., ಉಲ್ಲಾಸ್‌, ಅರಣ್ಯ ರಕ್ಷಕರಾದ ರಾಜೇಂದ್ರ, ಸುಧಾಕರ್‌ ಮತ್ತಿತರ ವಲಯ ಅರಣ್ಯ ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next